ಕನ್ನಡಪ್ರಭ ವಾರ್ತೆ ನಾಪೋಕ್ಲು
ಎಮ್ಮೆಮಾಡುವಿನಲ್ಲಿ ಆಯೋಜಿಸಲಾದ ಕೂರ್ಗ್ ಜಮಿಯ್ಯತುಲ್ ಉಲಾಮದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ಜಾತ್ಯತೀತ, ಧರ್ಮ ನಿರಪೇಕ್ಷತೆಯ ಸರ್ಕಾರ ಅಧಿಕಾರದಲ್ಲಿದೆ. ಎಲ್ಲ ಧರ್ಮದವರು ಸಮಾನತೆಯಿಂದ ಕಾಣುವ ಧೋರಣೆಯನ್ನು ಹೊಂದಿದೆ. ನೂರು ವರ್ಷಗಳ ಕಾಲ ಕೂರ್ಗ್ ಜಮಾತುಲ್ ಉಲಾಮ ಸಂಸ್ಥೆ ಬೆಳೆಯುವಂತಾಗಲಿ. ಶಕ್ತಿಶಾಲಿಯಾಗಿ ಬೆಳೆದು ಜನಸೇವೆ ಮಾಡುವಂತಾಗಲಿ. ಸಂಘ ಸಂಸ್ಥೆಗಳು ಮನುಕುಲದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅದು ನಮ್ಮೆಲ್ಲರ ಕರ್ತವ್ಯ ಎಂದರು.ಸರ್ಕಾರ ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಚುನಾವಣಾ ಅವಧಿಯಲ್ಲಿ ಕೊಟ್ಟ ವಾಗ್ದಾನದಂತೆ ಗ್ಯಾರಂಟಿಗಳ ಅನುಷ್ಠಾನ ಆಗುತ್ತಿದೆ. ಈ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಇತರ ರಾಜ್ಯದಲ್ಲಿನ ಸರ್ಕಾರಗಳು ಘೋಷಿಸುವ ಅನಿವಾರ್ಯತೆಗೆ ಸಿಲುಕಿದೆ ಎಂದು ಹೇಳಿದರು.
ಭಾನುವಾರ ಬೆಳಗ್ಗೆ ಸೈಯದ್ ಹಸನ್ ಸಖಾಫ್, ದರ್ಗಾ ಸನ್ನಿಧಿಯಲ್ಲಿ ಝಿಯಾರತ್ ಜರುಗಿತು. ಬಳಿಕ ಕೂರ್ಗ್ ಜಂಇಯ್ಯಯತುಲ್ ಉಲಾಮ ಅಧ್ಯಕ್ಷ ಸಯ್ಯದ್ ಶಿಹಾಬುದ್ದೀನ್ ಅಲ್ ಹೈದರುಸಿ ಸಖಾಫಿ ಎಮ್ಮೆಮಾಡು ಧ್ವಜಾರೋಹಣ ನೆರವೇರಿಸಿದರು. ಉಲಾಮ ಸಂಗಮವನ್ನು ಜಂಇಯ್ಯಯತುಲ್ ಉಲಾಮ ಕರ್ನಾಟಕ ಅಧ್ಯಕ್ಷ ಝೈನಲ್ ಉಲಾಮ ಅಬ್ದುಲ್ ಹಮೀದ್ ಮುಸ್ಲಿಯರ್ ಮಾಣಿ ಉದ್ಘಾಟಿಸಿದರು. ಖ್ಯಾತ ವಿದ್ವಾಂಸ ಅಬ್ದುಲ್ ಜಲೀಲ್ ಸಖಾಫಿ ತರಗತಿ, ಸಂಘಟನಾ ಚತುರ ಸುಲೇಮಾನ್ ಸಖಾಫಿ ಮಾಳಿಯೇಕಲ್ ನೇತೃತ್ವದಲ್ಲಿ ಸಂಗೀತ ಶಿಬಿರ ಸೇರಿದಂತೆ ವಿವಿಧ ಧಾರ್ಮಿಕ ತರಬೇತಿ, ಮಾರ್ಗದರ್ಶನ, ಧಾರ್ಮಿಕ ಮುಖಂಡರು ಹಾಗೂ ಧರ್ಮ ಗುರುಗಳಿಂದ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಸುನ್ನಿ ಸಂಘ ಕುಟುಂಬದ ಕಾರ್ಯಕರ್ತರು ಭಾಗವಹಿಸಿದ್ದರು.