ಹುಬ್ಬಳ್ಳಿ: ದೇಶ ಮತ್ತು ರಾಜ್ಯದಲ್ಲಿ ವ್ಯಾಪಕವಾಗುತ್ತಿರುವ ಲವ್ ಜಿಹಾದ್ ತಡೆಗಟ್ಟಲು ಹಿಂದೂಗಳೆಲ್ಲ ಒಂದಾಗಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಒಳಗಾದಾಗ ಆ ಜಾತಿ, ಈ ಜಾತಿ ಎನ್ನದೇ ಹಿಂದೂಗಳೆಲ್ಲ ಒಂದಾಗಿ ರಕ್ಷಣೆ ಮಾಡಬೇಕು. ಪಹಲ್ಗಾಂನಲ್ಲಿ ಭಯೋತ್ಪಾದಕರು ಜಾತಿ ಕೇಳಿ ಪ್ರವಾಸಿಗರ ಕೊಲ್ಲಲಿಲ್ಲ, ಬದಲಾಗಿ ಹಿಂದೂ ಎಂದು ಕೇಳಿ ಗುಂಡು ಹೊಡೆದರು. ಇದರಿಂದ ಹಿಂದೂಗಳಾದ ನಾವು ಪಾಠ ಕಲಿತು ಎಲ್ಲರೂ ಒಂದಾಗಿ ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚಾರ- ವಿಚಾರ ಉಳಿಸಬೇಕಿದೆ ಎಂದರು.
ಮುಸ್ಲಿಮರು ತರಬೇತಿ ಪಡೆದು ನಮ್ಮ ಹೆಣ್ಣು ಮಕ್ಕಳ ಅಪಹರಣ, ಅತ್ಯಾಚಾರದಂತಹ ಕೃತ್ಯ ಎಸಗುತ್ತಿದ್ದಾರೆ. ಈ ಮೂಲಕ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರ ನಡೆದಿದೆ. ಇಂತಹದೇ ಕೃತ್ಯದಲ್ಲಿ ತೊಡಗಿರುವ ಎಸ್‌ಡಿಪಿಐ ಸಂಘಟನೆಯನ್ನು ಸರ್ಕಾರ ಬ್ಯಾನ್ ಮಾಡಲಿ ಎಂದು ಆಗ್ರಹಿಸಿದರು.ಮಹನೀಯರಿಗೆ ಚೌಕಟ್ಟು ಬೇಡ:
ಮಠ-ಮಂದಿರಗಳಿಗೆ ದಾನ ಬೇಡ: ಒಂದು ವರ್ಷದ ಹಿಂದೆಯೇ ಶ್ರೀರಾಮಸೇನೆಯಿಂದ ತ್ರಿಶೂಲ ದೀಕ್ಷೆ ನೀಡಿದ್ದರೆ ನೇಹಾ ಹಿರೇಮಠ ಸಾಯುತ್ತಿರಲಿಲ್ಲ. ತ್ರಿಶೂಲ ದೀಕ್ಷೆಯಿಂದಾಗಿ ನಮ್ಮ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿದೆ. ಹಿಂದೂ ಯುವತಿಯರ ರಕ್ಷಣೆಗೆ ನಿಂತಿರುವ ಸಂಘಟನೆಗೆ ಜನಬೆಂಬಲ ಸಿಗುತ್ತಿಲ್ಲ. ಇನ್ಮುಂದೆ ಮಠ- ಮಂದಿರಗಳಿಗೆ ದಾನ ಮಾಡಬೇಡಿ. ಈಗಾಗಲೇ ಎಲ್ಲ ದೇವಾಲಯಗಳಲ್ಲಿ ಕೋಟ್ಯಂತರ ಆಸ್ತಿ ಇದೆ. ಹಗಲು-ರಾತ್ರಿ ಧರ್ಮರಕ್ಷಣೆಗೆ ನಿಂತಿರುವ ಸಂಘಟನೆಗೆ ಕೈಲಾದ ಧನಸಹಾಯ, ಸಹಕಾರ ನೀಡುವಂತೆ ಕೋರಿದರು.
ಸಂಘಟನೆ ಜಿಲ್ಲಾಧ್ಯಕ್ಷ ಬಸವರಾಜ ಗೌಡರ ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ಲವ್ ಜಿಹಾದ್ ಸಹಾಯವಾಣಿಗೆ 5118 ಕರೆಗಳು ಬಂದಿದ್ದು, ಅದರಲ್ಲಿ ಶೇ. 93ರಷ್ಟು ಪ್ರಕರಣಗಳಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ವಾಪಸ್ ತರುವಲ್ಲಿ ಯಶಸ್ವಿಯಾಗಿದ್ದೇವೆ. ಇದರಲ್ಲಿ ಶೇ. 30ರಷ್ಟು ಪ್ರಕರಣಗಳಲ್ಲಿ ಮರುಮದುವೆ ಮಾಡಿಸಲಾಗಿದೆ ಎಂದು ತಿಳಿಸಿದರು.
ರಾಜೇಶ್ವರಿ ಜಡಿ ಮಾತನಾಡಿ, ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಕಾಟವೇನಿಲ್ಲ. ಆದರೆ, ಮಾರ್ಕೆಟ್ ಜಿಹಾದ್ ಮತ್ತು ಲ್ಯಾಂಡ್ ಜಿಹಾದ್ ಹೆಚ್ಚಿನಮಟ್ಟದಲ್ಲಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಮೋಹನ್ ಗುರುಸ್ವಾಮಿ, ಪರಶುರಾಮ ದೊಡ್ಡಮನಿ, ರವಿ ಕೋಕಾಟ್ಕರ್, ಮಂಜುನಾಥ, ಚೆನ್ನು ಹೊಸಮನಿ, ವೀರಯ್ಯ ಸಾಲಿಮಠ ಮತ್ತಿತರರಿದ್ದರು. ಬಸು ದುರ್ಗದ ಸ್ವಾಗತಿಸಿದರು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.