ಕಬ್ಬು ಬೆಳೆಗೆ ಸೂಕ್ತ ದರ ನಿರ್ಧಾರವಾಗಲಿ: ಜಗದೀಶ ಗುಡಗುಂಟಿ

KannadaprabhaNewsNetwork |  
Published : Nov 05, 2026, 03:00 AM IST
ಜಮಖಂಡಿ  ಶೀರ್ಷಿಕೆ: ರೈತರ ಅಹೋರಾತ್ರಿ ಧರಣಿಯಲ್ಲಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿದರು. | Kannada Prabha

ಸಾರಾಂಶ

ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ಸ್ಪಂದಿಸಬೇಕು. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಕಬ್ಬಿಗೆ ಸೂಕ್ತ ಬೆಲೆ ದೊರೆಯಬೇಕು. ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ಸ್ಪಂದಿಸಬೇಕು. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಕಬ್ಬಿಗೆ ಸೂಕ್ತ ಬೆಲೆ ದೊರೆಯಬೇಕು. ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ನಗರದ ತಾಲೂಕು ಆಡಳಿತ ಸೌಧದ ಎದುರು ನಡೆಯುತ್ತಿರುವ ರೈತರ ಅಹೋರಾತ್ರಿ ಧರಣಿಯಲ್ಲಿ ಮಾತನಾಡಿದ ಅವರು, ಗೊಬ್ಬರ, ಕೂಲಿ ಸೇರಿದಂತೆ ಕೃಷಿ ವೆಚ್ಚ ಹೆಚ್ಚಾಗಿದೆ. ರೈತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ಕೇಂದ್ರ ಸರ್ಕಾರದ ನಿಯಮಗಳು ದೇಶಾದ್ಯಂತ ಅನ್ವಯವಾಗುವುದರಿಂದ ಎಲ್ಲ ಅಂಶಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.

ರೈತ ಮುಖಂಡ ರಾಜು ನದಾಫ ಮಾತನಾಡಿ, ಶಾಸಕ ಜಗದೀಶ ಗುಡಗುಂಟಿ ತಮ್ಮ ಸಕ್ಕರೆ ಕಾರ್ಖಾನೆಯಿಂದಲೇ ಪ್ರತಿ ಟನ್ ಕಬ್ಬಿಗೆ ಮೊದಲ ಹಂತದಲ್ಲಿ ₹4 ಸಾವಿರ ದರ ಘೋಷಿಸಿ ಕಾರ್ಖಾನೆ ಆರಂಭಿಸಬೇಕು. ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿಗದಿ ಪಡಿಸಿದಂತೆ ಉಳಿದ ಹಣವನ್ನು ಎರಡನೇ ಕಂತಿನಲ್ಲಿ ಬಿಡುಗಡೆ ಮಾಡಬೇಕು. ಇದರಿಂದ ರಾಜ್ಯದ ಇತರ ಕಾರ್ಖಾನೆಗಳಿಗೂ ಮಾದರಿಯಾಗಲಿದೆ. ರೈತರು ಸಾಲದ ಹೊರೆಯಿಂದ ಸಂಕಷ್ಟದಲ್ಲಿದ್ದು, ನ್ಯಾಯಯುತ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಸದಾಶಿವ ಕವಟಗಿ ಮಾತನಾಡಿ, ಸುವರ್ಣ ವಿಧಾನಸೌಧದಲ್ಲಿ ನಡೆದ ಸಭೆಯ ನಿರ್ಧಾರಗಳು ಹಾಗೂ ಸರ್ಕಾರ ನೀಡಿದ ಭರವಸೆಗಳನ್ನು ರೈತರಿಗೆ ಸ್ಪಷ್ಟಪಡಿಸಬೇಕು ಎಂದರು. ಶ್ರೀಶೈಲ ಭೂಮಾರ, ಸಿದ್ದಪ್ಪ ಬನಜನ್ನವರ, ಸಚಿನ ಖಿದ್ರಾಪುರ, ಬಾಹುಬಲಿ ನ್ಯಾಮಗೌಡ, ನೇಮಿನಾಥ ಆಲಗೂರ, ಶ್ರಮಣಕುಮಾ ರ ದಳವಾಯಿ, ಪದ್ಮಶ್ರೀ ಜೈನ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.

ರಾಜ್ಯ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಲಿ:

ಹತ್ತು ವರ್ಷದಿಂದ ಕಬ್ಬಿನ ದರದಲ್ಲಿ ಬದಲಾವಣೆಯಾಗಿಲ್ಲ, ಆದರೆ ರೈತರ ಖರ್ಚು ವೆಚ್ಚಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಆದ್ದರಿಂದ ಸರ್ಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥಮಾಡಿ ರೈತರಿಗೆ ಅನುಕೂಲ ಮಾಡಬೇಕು ಎಂದು ಎಂ ಆರ್‌ಎನ್‌ ನಿರಾಣಿ ಉದ್ಯಮ ಸಮೂಹದ ಅಧ್ಯಕ್ಷ ಸಂಗಮೇಶ ನಿರಾಣಿ ಹೇಳಿದರು. ತಾಲುಕು ಆಡಳಿತ ಸೌಧದ ಎದುರು ರೈತಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘದಿಂದ ಬುಧವಾರ ಒಂಭತ್ತನೇ ದಿನದ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿ,ಕಬ್ಬಿಗೆ ದರ ಘೋಷಣೆಯಾಗುವವರೆಗೆ ಹೋರಾಟ ಮುಂದುವರೆಯುತ್ತದೆ ಎಂದರು.

ರೈತ ಮುಖಂಡ ಸದಾಶಿವ ಕವಟಗಿ ಮಾತನಾಡಿ, ಮೊದಲ ಕಂತು ₹4 ಸಾವಿರ ಘೋಷಣೆ ಮಾಡಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿ. ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿಗದಿ ಮಾಡಿದ ದರ ನೀಡಿ ಎಂದು ಒತ್ತಾಯಿಸಿದರು.

ಮುಖಂಡ ರಾಜು ನದಾಪ್ ಮಾತನಾಡಿ, ಬರಗಾಲ ಇರುವದರಿಂದ ರೈತರಿಗೆ ನೀರಿನ ತೊಂದರೆಯಾಗುತ್ತಿದೆ, ಕಬ್ಬು ದಿನದಿಂದ ದಿನಕ್ಕೆ ತೂಕ ಕಡಿಮೆಯಾಗುತ್ತದೆ, ಕೂಡಲೇ ದರ ನಿಗದಿ ಮಾಡಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಒತ್ತಾಯಿಸಿದರು.

ಸಿದ್ದಪ್ಪ ಬನಜನವರ, ನೇಮಿನಾಥ ಗಣಿ, ಶ್ರೀಶೈಲ ಭೂಂಆರ, ಬಸು ಸಿದ್ದನ್ನವರ, ಶ್ರೀಶೈಲ ಲಾಯನ್ನವರ, ಸದಾಶಿವ ಕವಟಗಿ, ಗುರಯ್ಯ ಪೂಜಾರಿ, ಕಲ್ಲಪ್ಪ ಬಿರಾದಾರ, ಬಾಹುಬಲಿ ನ್ಯಾಮಗೌಡ, ಶಂಕರ ತೇಲಿ, ಸಚಿನ ಖಿದ್ರಾಪೂರ, ಮಹಾದೇವ ಬಾಲಪ್ಪನವರ, ಮಲ್ಲಿನಾಥ ಬೀಳಗಿ, ಗೈಬೂಸಾಬ ನದಾಪ್, ಶಂಕರ ನಿಂಗನ್ನವರ, ಹಣಮಂತ ಸತ್ತಿಗೌಡ, ಹಣಮಂತ ಆದ್ಯಪ್ಪನವರ, ಶ್ರೀಶೈಲ ಚಿನಗುಂಡಿ, ಮುತ್ತಣ್ಣ ಪಡೆನ್ನವರ, ಮಂಜು ಸಜ್ಜಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ