ಪುರಸ್ಕಾರಗಳು ಇನ್ನಷ್ಟು ಸಾಧನೆಗೆ ಪ್ರೇರಣೆಯಾಗಲಿ: ಜಾರ್ಜ್ ಫರ್ನಾಂಡಿಸ್

KannadaprabhaNewsNetwork | Published : Jan 11, 2025 12:46 AM

ಸಾರಾಂಶ

ಸಾಂಸ್ಕೃತಿಕ ಹಿನ್ನೆಲೆಯ ಅಂಕೋಲೆಗೆ ಇಂತಹ ಉತ್ಸವದ ಅವಶ್ಯಕತೆಯಿದೆ. ಪ್ರತಿಭೆಗಳನ್ನು ಗುರುತಿಸಲೂ ಇದೊಂದು ವೇದಿಕೆಯಾಗಿದೆ

ಅಂಕೋಲಾ: ಪುರಸ್ಕಾರಗಳು ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆಯಾಗಬೇಕು ಎಂದು ಸಹಕಾರಿ ಧುರೀಣ ಹಾಗೂ ಸೇಂಟ್ ಮಿಲಾಗ್ರಿಸ್ ಸಹಕಾರಿ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ತಿಳಿಸಿದರು.ಸಂಗಾತಿ ರಂಗಭೂಮಿಯ ಆಶ್ರಯದಲ್ಲಿ ಜೈಹಿಂದ ಮೈದಾನದಲ್ಲಿ ದಿ. ಗೋದಾವರಿ ವೇದಿಕೆಯಲ್ಲಿ ನಡೆದ ಆರನೇ ವರ್ಷದ ಅಂಕೋಲಾ ಉತ್ಸವ ಕಾರ್ಯಕ್ರಮದಲ್ಲಿ ನೀಡಿದ ಸತ್ಯಾಗ್ರಹ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಹಾಗೂ ಇತರೆ ಕ್ಷೇತ್ರದ ಸಾಧನೆ ಗುರುತಿಸಿ ನನ್ನನ್ನು ಸತ್ಕರಿಸಿರುವುದು ಸಾಧನೆಗೆ ಇನ್ನಷ್ಟು ಪ್ರೇರಣೆ ನೀಡಿದೆ ಎಂದರು.ಪುರಸಭೆಯ ಅಧ್ಯಕ್ಷ ಸೂರಜ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಹಿನ್ನೆಲೆಯ ಅಂಕೋಲೆಗೆ ಇಂತಹ ಉತ್ಸವದ ಅವಶ್ಯಕತೆಯಿದೆ. ಪ್ರತಿಭೆಗಳನ್ನು ಗುರುತಿಸಲೂ ಇದೊಂದು ವೇದಿಕೆಯಾಗಿದೆ ಎಂದರು. ಜಿಪಂ ಮಾಜಿ ಸದಸ್ಯ ಜಗದೀಶ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋದಾವರಿ ಕೋ ಆಪ್ ಸಹಕಾರಿ ಸೊಸೈಟಿಯ ಅಧ್ಯಕ್ಷ ರಾಘವೇಂದ್ರ ಡಿ. ನಾಯಕ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ರಾಂತ ಪ್ರಾಚಾರ್ಯ ಮೋಹನ ಹಬ್ಬು ಆಶಯ ನುಡಿಗಳನ್ನಾಡಿದರು. ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾದ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ, ವಿಶ್ರಾಂತ ಪ್ರಾಚಾರ್ಯ ಮಹೇಶ ಗೋಳಿಕಟ್ಟೆ, ಕುಮಟಾದ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಸಂಜಯ ನಾಯ್ಕ ಭಾವಿಕೇರಿ, ಬಿಜೆಪಿ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಲಯನ್ಸ್ ಕ್ಲಬ್ ಸಿಟಿ ಅಧ್ಯಕ್ಷ ಎಸ್.ಆರ್. ಶಿರೂಡಕರ, ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ, ನಾಟಿ ವೈದ್ಯ ಹನುಮಂತ ಗೌಡ, ತಾರಾ ಗಾಂವಕರ, ಅಶೋಕ ಕೆ., ರಾಜೇಶ್ವರಿ ಕೇಣಿಕರ, ಮೀನುಗಾರ ಫೆಡರೇಶನ್ ನಿರ್ದೇಶಕ ರಾಜು ಹರಿಕಂತ್ರ, ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಉಪಸ್ಥಿತರಿದ್ದರು.ಸಂಗಾತಿ ರಂಗಭೂಮಿಯ ಸಂಚಾಲಕ ಕೆ ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಆರ್. ತಾಂಡೇಲ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ಯಕ್ಷನೃತ್ಯದ ನಂತರ ವರ್ಷಿಣಿ ಶೆಟ್ಟಿ ಪ್ರಾರ್ಥಿಸಿದರು.ಇಂದು ಶಿರಸಿಯಲ್ಲಿ ಉಪನ್ಯಾಸ ಕಾರ್ಯಕ್ರಮ

ಶಿರಸಿ: ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನಿಂದ ಡಾ. ವಿ.ಎಸ್. ಸೋಂದೆ ಸ್ಮರಣಾರ್ಥ ತೃತೀಯ ಉಪನ್ಯಾಸ ಕಾರ್ಯಕ್ರಮ ಜ. ೧೧ರಂದು ನಗರದ ಯಲ್ಲಾಪುರ ರಸ್ತೆಯ ಅರಣ್ಯ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಅಧ್ಯಕ್ಷ ಜಯದೇವ ಯು. ನಿಲೇಕಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಮಾ ಇಂಟೆಗ್ರೇಟರರ್ಸ್ ಸಂಸ್ಥಾಪಕ ಹಾಗೂ ನಿರ್ದೇಶಕ ಕೆ.ಎಸ್. ಅಶೋಕ ಕುಮಾರ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

Share this article