ಬ್ಯಾಂಕ್‌ ಗ್ರಾಹಕರು ಜೀವವಿಮೆ ಸೌಲಭ್ಯ ಹೊಂದಲು ಮುಂದಾಗಲಿ: ಕೆ.ಎಚ್‌.ಚೇತನ್‌

KannadaprabhaNewsNetwork |  
Published : Jan 10, 2025, 12:48 AM IST
ಹೊನ್ನಾಳಿ ಫೋಟೋ 8ಎಚ್.ಎಲ್.ಐ2. ಬ್ಯಾಂಕಿನ ಗ್ರಾಹಕರ ನಾಮಿನಿ ಮೇಘನ ಅವರಿಗೆ ಜೀವ ವಿಮೆಯ ರೂ 3.85 ಲಕ್ಷದ  ಚೆಕ್ ನ್ನು ಬ್ಯಾಂಕ್ ನ ಮ್ಯಾನೇಜರ್ ಹಾಗೂ ಅಧಿಕಾರಿಗಳು  ವಿತರಣೆ ಮಾಡಿದರು.   | Kannada Prabha

ಸಾರಾಂಶ

ಬ್ಯಾಂಕ್ ಗ್ರಾಹಕರು ಜೀವವಿಮೆ ಮಾಡಿಸುವ ಮೂಲಕ ತಮ್ಮ ಕುಟುಂಬದ ಭವಿಷ್ಯಕ್ಕೆ ಆರ್ಥಿಕ ಸದೃಢತೆ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ ವಿಮೆ ಯೋಜನೆಗಳು ಸಮಾಜದ ಎಲ್ಲ ವರ್ಗಗಳ ಜನತೆಗೂ ಜೀವನ ಭದ್ರತೆ ನೀಡುವಲ್ಲಿ ಸಹಕಾರಿಯಾಗುವಂತಿವೆ ಎಂದು ಲಿಂಗಾಪುರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಮ್ಯಾನೇಜರ್ ಕೆ.ಎಚ್.ಚೇತನ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಮೇಘನಾಗೆ ಜೀವವಿಮೆಯ ₹3.85 ಲಕ್ಷ ಮೊತ್ತದ ಚೆಕ್ ವಿತರಣೆ - - - ಹೊನ್ನಾಳಿ: ಬ್ಯಾಂಕ್ ಗ್ರಾಹಕರು ಜೀವವಿಮೆ ಮಾಡಿಸುವ ಮೂಲಕ ತಮ್ಮ ಕುಟುಂಬದ ಭವಿಷ್ಯಕ್ಕೆ ಆರ್ಥಿಕ ಸದೃಢತೆ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ ವಿಮೆ ಯೋಜನೆಗಳು ಸಮಾಜದ ಎಲ್ಲ ವರ್ಗಗಳ ಜನತೆಗೂ ಜೀವನ ಭದ್ರತೆ ನೀಡುವಲ್ಲಿ ಸಹಕಾರಿಯಾಗುವಂತಿವೆ ಎಂದು ಲಿಂಗಾಪುರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಮ್ಯಾನೇಜರ್ ಕೆ.ಎಚ್.ಚೇತನ್ ಹೇಳಿದರು.

ತಮ್ಮ ಬ್ಯಾಂಕಿನ ಗ್ರಾಹಕರ ನಾಮಿನಿ ಮೇಘನಾ ಅವರಿಗೆ ಜೀವವಿಮೆಯ ₹3.85 ಲಕ್ಷ ಮೊತ್ತದ ಚೆಕ್ ವಿತರಣೆ ಮಾಡಿ ಅವರು ಮಾತನಾಡಿದರು. ರಾಜ್ಯಾದ್ಯಂತ ನಮ್ಮ ಬ್ಯಾಂಕಿನ 1122 ಶಾಖೆಗಳಿವೆ. ದಾವಣಗೆರೆ ಜಿಲ್ಲೆಯಲ್ಲೇ 51 ಶಾಖೆಗಳಿವೆ. ಈ ಎಲ್ಲ ಶಾಖೆಗಳಲ್ಲಿಯೂ ಕೇಂದ್ರ ಸರ್ಕಾರದ ಪಿಎಂವೈ ಯೋಜನೆ ಅಡಿ ವರ್ಷಕ್ಕೆ ₹430 ಹಾಗೂ ಅಪಘಾತ ವಿಮೆ ಮಾಸಿಕ ₹20, ಯೋಜನೆಗಳು ಸೇರಿದಂತೆ ಹಲವಾರು ವಿಮೆ ಯೋಜನೆಗಳು ನಮ್ಮ ಬ್ಯಾಂಕ್ ನಲ್ಲಿ ಲಭ್ಯವಿವೆ. ಬ್ಯಾಂಕ್ ಗ್ರಾಹಕರು ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು ಎಂದ ಅವರು, ಗ್ರಾಹಕರ ಸೇವೆಯೇ ನಮ್ಮ ಧ್ಯೇಯ ಎಂದರು.

ಮೇಘನಾ ಅತ್ತೆ ಜಯಮ್ಮ 3 ತಿಂಗಳ ಹಿಂದೆ ವಿಮೆ ಮಾಡಿಸಿ, 1 ಕಂತು ಕಟ್ಟಿದ್ದರು. ಅವರ ಆಕಸ್ಮಿಕ ಮರಣದ ನಂತರ ಅವರ ನಾಮಿನಿ ಮೇಘನಾ ಅವರಿಗೆ ವಿಮೆಯ ಮೊತ್ತದ ಚೆಕ್ ನೀಡಲಾಗಿತ್ತು. ಈ ಸಮಯದಲ್ಲಿ ಬ್ಯಾಂಕ್‌ ಸಿಬ್ಬಂದಿ ಸತೀಶ್ ಜೆ.ಎಚ್., ಪಿ.ದಿಲೀಪ್ ಕುಮಾರ್, ತಿಪ್ಪೇಶ್ ಎಂ., ಹನುಮಂತಪ್ಪ ಡಿ., ರೇಖಾ ಹಾಗೂ ಅರ್ಪಿತ ಜಿ.ಪಿ, ಇದ್ದರು.

- - - -8ಎಚ್.ಎಲ್.ಐ2.ಜೆಪಿಜಿ:

ಬ್ಯಾಂಕಿನ ಗ್ರಾಹಕರ ನಾಮಿನಿ ಮೇಘನಾ ಅವರಿಗೆ ಜೀವ ವಿಮೆಯ ₹ 3.85 ಲಕ್ಷ ಮೊತ್ತದ ಚೆಕ್ ಅನ್ನು ಬ್ಯಾಂಕ್ ಮ್ಯಾನೇಜರ್ ವಿತರಣೆ ಮಾಡಿದರು. ಅಧಿಕಾರಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ