ಕನ್ನಡಪ್ರಭ ವಾರ್ತೆ, ದಾವಣಗೆರೆ ಭಗತ್ ಸಿಂಗ್‌ರಂತೆ ಜನರು ಹೋರಾಟಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವಂತಾಗಬೇಕು. ಭಗತ್ ಸಿಂಗ್ ಇಂದಿನ ಜನಗಳ ಹಾಗೂ ಯುವಜನರ ಹೃದಯದಲ್ಲಿದ್ದಾರೆ ಎಂದು ಎಐಕೆಕೆಎಂಎಸ್ ರೈತ ಸಂಘಟನೆ ಉಪಾಧ್ಯಕ್ಷ ಟಿ.ಎಸ್. ಸುನಿತ್‌ಕುಮಾರ್ ಹೇಳಿದರು.
ನಗರದ ಪಿ.ಬಿ. ರಸ್ತೆಯ ರೈಲ್ವೆ ನಿಲ್ದಾಣ ಬಳಿ ಇರುವ ಭಗತ್ ಸಿಂಗ್ ಪುತ್ಥಳಿ ಬಳಿ ಶನಿವಾರ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಜೇಷನ್, ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ನಡೆದ 96ನೇ ಶಹೀದ್ ಭಗತ್ ಸಿಂಗ್, ಸುಖದೇವ್, ರಾಜ್ ಗುರು ಅವರ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎಐಡಿವೈಓ ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ಭಗತ್ ಸಿಂಗ್, ಸುಖದೇವ್, ರಾಜಗುರು ಈ ದೇಶದ ಯುವಜನ, ವಿದ್ಯಾರ್ಥಿ, ಮಹಿಳಾ-ಕಾರ್ಮಿಕ ವರ್ಗದ ಜನರ ಹೋರಾಟ ಹಾಗೂ ಮಾರ್ಕ್ಸ್ ವಾದ, ಲೆನಿನ್ ವಾದದ ವಿಚಾರವಾದ ಸಮಾಜವಾದಿ ಕ್ರಾಂತಿಯ ಸಂಕೇತವಾಗಿದ್ದರು. ಅದಕ್ಕಾಗಿ ಜೀವನದ ಕೊನೆಯವರೆಗೂ ಮಹಾನ್ ಆದರ್ಶವನ್ನು ಎತ್ತಿಹಿಡಿದರು. ಇಂದು ಅಂತಹ ಮಹಾನ್ ಆದರ್ಶ ವಿಚಾರದ ಭಾಗವಾಗಿ ಭಗತ್ ಸಿಂಗ್ ಇಂದಿಗೂ ಪ್ರಸ್ತುತವಾಗಿದ್ದಾರೆ ಎಂದರು.
ಎಐಕೆಎಂಎಸ್‌ಎಸ್ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕೆ.ಭಾರತಿ, ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ತಿಪ್ಪೇಸ್ವಾಮಿ, ಎಐಎಂಎಸ್‌ಎಸ್ ಜಿಲ್ಲಾ ಸಮಿತಿ ಸದಸ್ಯರಾದ ಕವಿತಾ, ಎಐಡಿಎಸ್‌ಒ ಸಂಘಟನೆಯ ಮಹಾಂತೇಶ್, ಪೂಜಾ, ಎಐಡಿವೈಒ ಸಂಘಟನೆಯ ಅನಿಲ್‌ಕುಮಾರ್, ಅಭಿಷೇಕ್, ಸುಮನ್, ನಂದೀಶ ಇತರರು ಉಪಸ್ಥಿತರಿದ್ದರು.- - - -23ಕೆಡಿವಿಜಿ35:
ದಾವಣಗೆರೆಯಲ್ಲಿಂದು ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್ ಸಂಘಟನೆಯಿಂದ ಭಗತ್ ಸಿಂಗ್, ಸುಖದೇವ್, ರಾಜ್ ಗುರು ಹುತಾತ್ಮ ದಿನ ಆಚರಿಸಲಾಯಿತು.