ಭಗವದ್ಗೀತೆ ನಮ್ಮ ಬದುಕಿನ ತಳಪಾಯವಾಗಲಿ

KannadaprabhaNewsNetwork |  
Published : Dec 18, 2023, 02:00 AM IST
ಭಾನುವಾರ ಸಂಜೆ ಪಟ್ಟಣದ ಶ್ರೀ ತುಳಜಾಭವಾನಿ ದೇವಸ್ಥಾನದ ಮೈದಾನದಲ್ಲಿ ಆಯೋಜಿಸಿದ ಭಗವದ್ಗೀತಾ ಅಭಿಯಾನ ಕಾರ್ಯಕ್ರಮಕ್ಕೆ ಶಿರಸಿಯ ಸೋಂದಾ ಶ್ರೀ ಸ್ವರ್ಣವಲ್ಲಿ ಮಹಸಂಸ್ಥಾನದ ಶ್ರೀಮದ್ ಜಗದ್ಗುರು ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಚಾಲನೆ ನೀಡಿದರು. | Kannada Prabha

ಸಾರಾಂಶ

ಭಗವದ್ಗೀತೆಯು ಏಳು ಸಾವಿರ ವರ್ಷಗಳ ಹಿಂದೆ ರಚನೆಯಾಗಿದ್ದು, ಅಂದಿನಿಂದ ಇಂದಿನವರೆಗೆ ಭಗದ್ಗೀತೆಯ ಮೇಲೆ ನಿರಂತರ ಹೊಸ ಸಂಶೋಧನಾ ಆಧ್ಯಾತ್ಮಿಕ ಗ್ರಂಥಗಳು ಬರುತ್ತಿವೆ. ಭಗವದ್ಗೀತೆಯ ಅಡಕವಾಗಿರುವ ಪಾರಮಾರ್ಥಿಕ ಸತ್ಯದ ಬದುಕಿನ ಜ್ಞಾನದ ಸಂದೇಶಗಳು ತತ್ವಗಳಿಗೆ ಕೊನೆಯೆಂಬುದಿಲ್ಲ, ಅದೊಂದು ಚಿಂತನೆಯ ಧಾರೆಯಾಗಿದ್ದು, ಈ ಅಧ್ಯಾತ್ಮಿಕ ಸೆಲೆಯ ಧಾರೆಯು ಎಂದೂ ಬತ್ತುವುದಿಲ್ಲ

ಹಳಿಯಾಳ: ಜೀವನದಲ್ಲಿ ನೆಮ್ಮದಿ ಶಾಂತಿ, ಸಮೃದ್ಧಿ ಲಭಿಸಬೇಕಾದರೇ ನಮ್ಮ ಬದುಕನ್ನು ಭಗವದ್ಗೀತೆಯ ತತ್ವಗಳ ಮೇಲೆ ರೂಪಿಸಬೇಕು, ಅದಕ್ಕಾಗಿ ಭಗವದ್ಗೀತೆಯ ಅಧ್ಯಯನವು ನಮ್ಮ ಬದುಕಿನ ಭಾಗವಾಗಿ ಬೆಳೆಯಬೇಕು, ಭಗವದ್ಗೀತೆ ನಮ್ಮ ಜೀವನದ ತಳಪಾಯವಾಗಲಿ ಎಂದು ಶಿರಸಿಯ ಸೋಂದಾ ಶ್ರೀ ಸ್ವರ್ಣವಲ್ಲಿ ಮಹಸಂಸ್ಥಾನದ ಶ್ರೀಮದ್ ಜಗದ್ಗುರು ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.

ಭಾನುವಾರ ಸಂಜೆ ಪಟ್ಟಣದ ಶ್ರೀತುಳಜಾಭವಾನಿ ದೇವಸ್ಥಾನದ ಮೈದಾನದಲ್ಲಿ ಭಗವದ್ಗೀತಾ ಅಭಿಯಾನ ತಾಲೂಕು ಸಮಿತಿ, ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಹಾಗೂ ತಾಲೂಕಿನ ಸದ್ಭಕ್ತರ ಜಂಟೀ ಆಶ್ರಯದಲ್ಲಿ ಆಯೋಜಿಸಿದ ಭಗವದ್ಗೀತಾ ಅಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭಗವದ್ಗೀತೆಯು ಏಳು ಸಾವಿರ ವರ್ಷಗಳ ಹಿಂದೆ ರಚನೆಯಾಗಿದ್ದು, ಅಂದಿನಿಂದ ಇಂದಿನವರೆಗೆ ಭಗದ್ಗೀತೆಯ ಮೇಲೆ ನಿರಂತರ ಹೊಸ ಸಂಶೋಧನಾ ಆಧ್ಯಾತ್ಮಿಕ ಗ್ರಂಥಗಳು ಬರುತ್ತಿವೆ. ಭಗವದ್ಗೀತೆಯ ಅಡಕವಾಗಿರುವ ಪಾರಮಾರ್ಥಿಕ ಸತ್ಯದ ಬದುಕಿನ ಜ್ಞಾನದ ಸಂದೇಶಗಳು ತತ್ವಗಳಿಗೆ ಕೊನೆಯೆಂಬುದಿಲ್ಲ, ಅದೊಂದು ಚಿಂತನೆಯ ಧಾರೆಯಾಗಿದ್ದು, ಈ ಅಧ್ಯಾತ್ಮಿಕ ಸೆಲೆಯ ಧಾರೆಯು ಎಂದೂ ಬತ್ತುವುದಿಲ್ಲ ಎಂದರು.

ಪ್ರಮಾಣ ಪತ್ರ ವಿತರಣೆ:

ಭಗವದ್ಗೀತಾ ಅಭಿಯಾನದ ಅಂಗವಾಗಿ ಕಳೆದ ವಾರ ಹಳಿಯಾಳ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗಾಗಿ ಆಯೋಜಿಸಿದ ಭಾಷಣ, ಕಂಠಪಾಠ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಶ್ರೀಗಳು ಪ್ರಮಾಣ ಪತ್ರ ವಿತರಿಸಿದರು.

ಭಗವದ್ಗೀತಾ ಅಭಿಯಾನ ತಾಲೂಕು ಸಮಿತಿ ಅಧ್ಯಕ್ಷ ಮಂಗೇಶ ದೇಶಪಾಂಡೆ ಪ್ರಸ್ತಾವಿಕವಾಗಿ ಮಾತನಾಡಿ, ಹಳಿಯಾಳ ನಡೆದ ಭಗವದ್ಗೀತಾ ಅಭಿಯಾನದ ಬಗ್ಗೆ ಸಂಕ್ಷೀಪ್ತ ಮಾಹಿತಿ ನೀಡಿದರು.

ವಿ.ಆರ್.ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಅನಿಲ ಮುತ್ನಾಳೆ, ಎನ್.ವಿಹೆಗಡೆ, ತಾಲೂಕು ಅಭಿಯಾನ ಸಮಿತಿಯ ಸಂಚಾಲಕ ಸುರೇಂದ್ರ ಜೋಶಿ, ಮೋಹನ ಮರಾಠೆ, ಕೆ.ಜಿಗೋಡೆಮನಿ ಹಾಗೂ ಇತರರು ಇದ್ದರು. ರವಿವರ್ಮಾ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ