ಶಾಲೆಗಳಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ: ಹಿರೇಕಲ್ಮಠ ಶ್ರೀ

KannadaprabhaNewsNetwork |  
Published : Jan 15, 2024, 01:53 AM ISTUpdated : Jan 15, 2024, 12:50 PM IST
ಹೊನ್ನಾಳಿ ಫೋಟೋ14ಎಚ್.ಎಲ್.ಐ1. ಪಟ್ಟಣದ ಪುರಸಭೆ ಅವರಣದಲ್ಲಿ ಪ್ರೇರಣಾ ಪಬ್ಲಿಕ್ ಶಾಲೆವತಿಯಿಂದ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ವಿದ್ಯಾರ್ಥಿ ಕೆ.ಗಗನ್ ಉದ್ಘಾಟಿಸಿದರು. ಹಿರೇಕಲ್ಮಠದ ಸ್ವಾಮಿಜಿ ಇತರರು ಇದ್ದರು.  | Kannada Prabha

ಸಾರಾಂಶ

ಮಕ್ಕಳಿಗೆ ಗುಣಮಟ್ಟದ ಹಾಗೂ ಸುಸಂಸ್ಕೃತ ವ್ಯಕ್ತಿಗಳ ರೂಪಿಸುವ ಶಿಕ್ಷಣ ನೀಡುವಲ್ಲಿ ಸರ್ಕಾರಿ, ಖಾಸಗಿ ಶಾಲೆಗಳೆಂಬ ಬೇಧ ಭಾವವಿರುವುದಿಲ್ಲ ಯಾವುದೇ ಶಾಲೆಯಾಗಲಿ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡುವಂತಾಗಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರು, ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹೆಣ್ಣು ಮಕ್ಕಳ ಬಗ್ಗೆ ಕಾಳಜಿವಹಿಸಿದಷ್ಟೇ ಗಂಡು ಮಕ್ಕಳ ಬಗ್ಗೆಯೂ ಪೋಷಕರು ಕಾಳಜಿವಹಿಸಬೇಕು. ಪ್ರಸ್ತುತ ದಿನಗಳಲ್ಲಿ ಗಂಡು ಮಕ್ಕಳ ದಾರಿ ತಪ್ಪಿಸುವ ಅನೇಕ ಮಾರ್ಗಗಳಿರುವ ಕಾರಣ ಪ್ರತಿ ತಂದೆ-ತಾಯಿ ತಮ್ಮ ಮಗ ಎಲ್ಲಿ ಹೋಗುತ್ತಾನೆ ಏನು ಮಾಡುತ್ತಾನೆ ಎಂಬ ಬಗ್ಗೆ ವಿಶೇಷವಾಗಿ ಗಮನವಹಿಸಬೇಕಾದ ಅನಿರ್ವಾತೆ ಇದೆ ಎಂದು ಹಿರೇಕಲ್ಮಠದ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಪುರಸಭೆ ಅವರಣದಲ್ಲಿ ಆಯೋಜಿಸಲಾಗಿದ್ದ ಪ್ರೇರಣಾ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿ ಮಕ್ಕಳಿಗೆ ಗುಣಮಟ್ಟದ ಹಾಗೂ ಸುಸಂಸ್ಕೃತ ವ್ಯಕ್ತಿಗಳ ರೂಪಿಸುವ ಶಿಕ್ಷಣ ನೀಡುವಲ್ಲಿ ಸರ್ಕಾರಿ, ಖಾಸಗಿ ಶಾಲೆಗಳೆಂಬ ಬೇಧ ಭಾವವಿರುವುದಿಲ್ಲ.

ಯಾವುದೇ ಶಾಲೆಯಾಗಲಿ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡುವಂತಾಗಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರು, ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುರಸಭೆ ಸದಸ್ಯೆ ಸುಮಾ ಮಂಜುನಾಥ ಇಂಚರ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಬಗ್ಗೆ ಅದಮ್ಯ ನಿರೀಕ್ಷೆಗಳ ಇಟ್ಟುಕೊಂಡು ಶಾಲೆಗಳಿಗೆ ಮಕ್ಕಳ ಕಳಿಸುತ್ತಾರೆ.

ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳ ಸರಿಯಾಗಿ ಗುರುತಿಸಿ ಈ ವಿಷಯದಲ್ಲಿ ಮಕ್ಕಳನ್ನು ಹೆಚ್ಚು ಪ್ರೋತ್ಸಾಹಿಸಿ ಅವರನ್ನು ತರಬೇತಿಗೊಳಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಅಡಳಿತ ಮಂಡಳಿಯ ಅಧ್ಯಕ್ಷೆ ಆರತಿ ಯೋಗೇಶ್ ಮಾತನಾಡಿ, ಪ್ರೇರಣಾ ಪಬ್ಲಿಕ್ ಶಾಲೆ ಕಳೆದ 14 ವರ್ಷಗಳಿಂದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಾ ಬಂದಿದ್ದು, ಪ್ಲೇಗ್ರೋಪ್ ನಿಂದ ಎಲ್.ಕೆ.ಜಿ., ಯು.ಕೆ.ಜಿ. ಮತ್ತು 1ರಿಂದ 8ನೇ ತರಗತಿಯವರೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಭವಿಷ್ಯದಲ್ಲೂ ಇದನ್ನು ಮುಂದುವರಿಸಿಕೊಂಡು ಹೋಗಲು ಪೋಷಕರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಶಾಲೆಯಲ್ಲಿ ನಡೆದು ಬಂದ ಪದ್ಧತಿಯಂತೆ ಆಯಾಯಾ ಶೈಕ್ಷಣಿಕ ವರ್ಷದಲ್ಲಿ ಮೊದಲು ದಾಖಲಾತಿ ಪಡೆದ ವಿದ್ಯಾರ್ಥಿ ಅಂದರೆ ಈ ಬಾರಿ ಪ್ಲೇ ಗ್ರೂಪ್‌ ಗೆ ಪ್ರಥಮವಾಗಿ ದಾಖಲಾತಿಯಾಗಿದ್ದ ವಿದ್ಯಾರ್ಥಿ ಕೆ. ಗಗನ್ ರಿಂದ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿಸಲಾಯಿತು. 

ಕಾರ್ಯಕ್ರಮದಲ್ಲಿ ಶಾಲೆಯ ಅಡಳಿತ ಮಂಡಳಿಯ ಕಾರ್ಯದರ್ಶಿ ಕೆ. ಪುಟ್ಟಪ್ಪ, ಮುಖ್ಯ ಶಿಕ್ಷಕಿ ಕಲಾಶ್ರೀ ಜಯಪ್ಪ, ಕೀರ್ತಿವೈ,ಶಾಲೆಯ ಶಿಕ್ಷಕ ವರ್ಗದವರಿದ್ದರು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ