ಪಟ್ಟಣದ ಮಣ್ಕುಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾದ ಮಕ್ಕಳ ಸಂತೆ ಎಲ್ಲರ ಗಮನ ಸೆಳೆಯಿತು.
ಭಟ್ಕಳ ಮಣ್ಕುಳಿ ಶಾಲೆಯಲ್ಲಿ ಗಮನ ಸೆಳೆದ ಮಕ್ಕಳ ಸಂತೆ
ಕನ್ನಡಪ್ರಭ ವಾರ್ತೆ ಭಟ್ಕಳ
ಪಟ್ಟಣದ ಮಣ್ಕುಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾದ ಮಕ್ಕಳ ಸಂತೆ ಎಲ್ಲರ ಗಮನ ಸೆಳೆಯಿತು.
ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿದ ಉದ್ಯಮಿ ವಿನೋದ ಬಡಾಳ, ಪಾಲಕರು ತಮ್ಮ ಮಕ್ಕಳ ಜೊತೆಗೂಡಿ ದಿನನಿತ್ಯದ ಸಾಮಾನು ಖರೀದಿಗೆ ತೆರಳಬೇಕು. ಇದರಿಂದ ವ್ಯಾಪಾರ ವಹಿವಾಟಿನ ಬಗ್ಗೆ ಮಕ್ಕಳಿಗೂ ಮಕ್ಕಳಿಗೂ ಜ್ಞಾನ ಲಭಿಸುತ್ತದೆ ಎಂದರು.
ಇನ್ನೋರ್ವ ಉದ್ಯಮಿ ಅಚ್ಯುತ್ ಕಾಮತ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉತ್ತಮ ಸಾಧನೆ ಮಾಡಿ ತೋರಿಸಿದ್ದಾರೆ. ತಂದೆ-ತಾಯಿ, ಗುರುಹಿರಿಯರಿಗೆ ಗೌರವ ನೀಡುವುದರ ಜೊತೆಗ ಓದಿನಲ್ಲಿ ಆಸಕ್ತಿ ತೋರುವ ವಿದ್ಯಾರ್ಥಿ ಯಾವ ಶಾಲೆಯಲ್ಲಿದ್ದರೂ ಸಾಧನೆ ಮಾಡುತ್ತಾರೆ ಎಂದರು.
ಪತ್ರಕರ್ತ ಮೋಹನ ನಾಯ್ಕ ಮಾತನಾಡಿ, ಕಾನ್ವೆಂಟ್ ಶಾಲೆಯ ಮಕ್ಕಳ ಹಾಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ಬಂಧನದ ಸಂಕೋಲೆ ಇರುವುದಿಲ್ಲ. ಸರ್ಕಾರಿ ಶಾಲೆಯ ಮಕ್ಕಳಿಗೆ ಶಾಲಾ ಚಟುವಟಿಕೆಯ ಜೊತೆಗೆ ಸಮುದಾಯ ಚಟುವಟಿಕೆಗಳಲ್ಲೂ ಸಕ್ರಿಯರಾಗಿ ಪಾಲ್ಗೊಳ್ಳುವ ಸ್ವಾತಂತ್ರ್ಯ ಇರುತ್ತದೆ ಎಂದರು.
ಮಣ್ಕುಳಿಯ ಹಿರಿಯ ಪಾಥಮಿಕ ಶಾಲಾ ಅಭಿವೃದ್ದಿ ಸಮಿತಿಯವರು ಅಚ್ಚುಕಟ್ಟಾದ ಮಕ್ಕಳ ಸಂತೆ ಏರ್ಪಡಿಸಿ ಮಕ್ಕಳಿಗೆ ವ್ಯವಹಾರ ಜ್ಞಾನ ಸಿಗುವಂತೆ ಮಾಡಿರುವುದು ಶ್ಲಾಘನೀಯ ಎಂದರು.
ಬಿ.ಆರ್.ಸಿ ಗೋಪಾಲ ನಾಯ್ಕ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಎಂ.ಎಸ್. ನಾಯ್ಕ ಮಾತನಾಡಿದರು. ಪುರಸಭೆ ಸದಸ್ಯರಾದ ಸುರೇಶ ನಾಯ್ಕ, ನಾಗರಾಜ ನಾಯ್ಕ, ಪ್ರಮುಖರಾದ ನಾಗೇಶ ನಾಯ್ಕ, ರಾಜೇಶ ನಾಯ್ಕ, ಸುಧಾಕರ ನಾಯ್ಕ, ಪಾಂಡುರಂಗ ನಾಯ್ಕ, ಪ್ರಮೋದ ಬಡಾಳ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ ನಾಯ್ಕ, ಮುಖ್ಯ ಶಿಕ್ಷಕಿ ವನಜಾಕ್ಷಿ ಇದ್ದರು. ಮಕ್ಕಳ ಸಂತೆಗೆ ಭೇಟಿ ನೀಡಿದ ವಿದ್ಯಾರ್ಥಿಗಳ ಪಾಲಕರು, ಸಾರ್ವಜನಿಕರು ಮಕ್ಕಳಿಂದ ವಿವಿಧ ಬಗೆಬಗೆಯ ದಿನನಿತ್ಯದ ವಸ್ತುಗಳನ್ನು ಖರೀದಿ ಮಾಡಿ ಸಂತಪಟ್ಟರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.