ಮಕ್ಕಳನ್ನು ಸ್ವತಂತ್ರವಾಗಿ ಆಟೋಟಗಳಲ್ಲಿ ಭಾಗವಹಿಸಲು ಬಿಡಿ: ಶಿವಬಸವ ಸ್ವಾಮೀಜಿ

KannadaprabhaNewsNetwork |  
Published : May 06, 2024, 12:33 AM IST
4ಕೆಎಂಎನ್ ಡಿ15,16 | Kannada Prabha

ಸಾರಾಂಶ

ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಶಿಬಿರಗಳ ಮೂಲಕ ಗುರುತಿಸಿ ಬೆಳಕಿಗೆ ತರುವ ಕೆಲಸ ಮಾಡಬೇಕು, ಆಗ ಮಾತ್ರ ಭವಿಷ್ಯದಲ್ಲಿ ಒಳ್ಳೆ ಕಲಾವಿದನಾಗಿ ಸಾಂಸ್ಕೃತ ವ್ಯಕ್ತಿಯಾಗಿ ವಿಶ್ವಮಾನವನಾಗಿ ಕಾಣಲು ಸಾಧ್ಯವಾಗುತ್ತದೆ. ಆದ್ದರಿಂದ ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧನದಲ್ಲಿಟ್ಟು ಬೆಳೆಸುವುದನ್ನು ಬಿಟ್ಟು ಸ್ವತಂತ್ರವಾಗಿ ಆಟೋಟಗಳಲ್ಲಿ ಭಾಗವಹಿಸಲು ಪೋಷಕರು ಬಿಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧನದಲ್ಲಿಟ್ಟು ಬೆಳೆಸುವುದನ್ನು ಬಿಟ್ಟು ಸ್ವತಂತ್ರವಾಗಿ ಆಟೋಟಗಳಲ್ಲಿ ಭಾಗವಹಿಸಲು ಪೋಷಕರು ಬಿಡಬೇಕು ಎಂದು ಶ್ರೀರಾಮಯೋಗೇಶ್ವರಿ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಹೇಳಿದರು.

ತಾಲೂಕಿನ ಕ್ಯಾತನಹಳ್ಳಿ ಸ್ಟ್ಯಾನ್ಪೋರ್ಡ್ ಪಬ್ಲಿಕ್ ಸ್ಕೂಲ್ ನಡೆದ ಚಿಣ್ಣರ ಲೋಕ ಬೇಸಿಗೆ ಶಿಬಿರದ ಸಮರೋಪ ಸಮಾರಂಭದಲ್ಲಿ ಮಾತನಾಡಿ, ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದಕ್ಕಿಂತ ಪರಿಸರದಲ್ಲಿ ಕಲಿಯುವುದು ಉತ್ತಮ ಎಂದರು.

ನಾಲ್ಕು ಗೋಡೆಗಳ ಮಧ್ಯೆ ಇದ್ದು ಮಕ್ಕಳು ಟಿವಿಯಲ್ಲಿ ಬರುವ ಧಾರವಾಹಿಗಳು ಇನ್ನಿತರ ಕಾರ್ಯಕ್ರಮಗಳು ಹಾಗೂ ಮೊಬೈಲ್ ನಲ್ಲಿ ವಾಟ್ಸಪ್, ಇನ್ಸ್ಟಾಗ್ರಾಮ್, ಫೇಸ್ಬುಕ್, ಮತ್ತು ಗೇಮ್ ಗಳಿಗೆ ಅಂಟಿಕೊಂಡು ಓದುವ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಎಚ್ಚರಿಸಿದರು.

ಮಕ್ಕಳು ಆಸಕ್ತಿ ಇರುವ ಒಳ್ಳೆಯ ವಿಚಾರ, ಕೆಲಸಗಳನ್ನು ಕಲಿಯುವುದಕ್ಕೆ ಪೋಷಕರು ಅಡ್ಡಿ ಪಡಿಸಬಾರದು. ಹಠಮಾರಿತನಕ್ಕೆ ಬೀಳದೆ ಮಗು ಸ್ವತಂತ್ರವಾಗಿ ಬಿಡಬೇಕು. ಆಗ ಮಾತ್ರ ಮಗು ಈ ಜಗತ್ತಿನಲ್ಲಿ ಏನಾದರೂ ಒಂದು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಶಿಬಿರಗಳ ಮೂಲಕ ಮಕ್ಕಳಿಗೆ ಸಾಂಸ್ಕೃತಿಕ ಕಲೆಗಳಾದ ಜಾನಪದ ಕಲೆ, ನಾಟಕ, ಸಂಗೀತ, ಜಾನಪದ ನೃತ್ಯಗಳು, ದೇಶಿ ಆಟಗಳು, ಜಾನಪದ, ಭಾವಗೀತೆ ಹಾಗೂ ದೇಶಭಕ್ತಿ ಗೀತೆ ಮತ್ತು ಕಥೆಗಳಂತಹ ಕಲೆಗಳನ್ನು ಬಾಲ್ಯದಿಂದಲೇ ಬಿತ್ತುವಂತಹ ಕೆಲಸ ಮಾಡಬೇಕು ಎಂದರು.

ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಶಿಬಿರಗಳ ಮೂಲಕ ಗುರುತಿಸಿ ಬೆಳಕಿಗೆ ತರುವ ಕೆಲಸ ಮಾಡಬೇಕು, ಆಗ ಮಾತ್ರ ಭವಿಷ್ಯದಲ್ಲಿ ಒಳ್ಳೆ ಕಲಾವಿದನಾಗಿ ಸಾಂಸ್ಕೃತ ವ್ಯಕ್ತಿಯಾಗಿ ವಿಶ್ವಮಾನವನಾಗಿ ಕಾಣಲು ಸಾಧ್ಯವಾಗುತ್ತದೆ ಎಂದರು.

ಇದೇ ವೇಳೆ ಮಕ್ಕಳಿಂದ ಗೋವಿನ ಹಾಡು ನೃತ್ಯರೂಪಕ, ಕೆಂಚನಿಗೆ ಸಿಕ್ಕಿತು ಕಿರೀಟ ಎಂಬ ನಾಟಕ, ಜನಪದ ನೃತ್ಯಗಳು, ಕೋಲಾಟ, ಯೋಗಾಸನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಶಶಿರ, ರಾಷ್ಟ್ರ ಪ್ರಶಸ್ತಿ ವಿಜೇತ ಮಾಸ್ಟರ್ ಲೋಹಿತ್, ಸಮಾಜ ಚಿಂತಕರಾದ ರಾಮನಾಥ್, ಉಮಾ ಕ್ಯಾತಾಯಿನಿ, ಫ್ರೆಂಚ್ ರಾಕ್ಸ್ ಲಯನ್ಸ್ ಅಧ್ಯಕ್ಷ ರೇವಣ್ಣ, ಪ್ರಗತಿ ಸೇವ ಟ್ರಸ್ಟ್‌ನ ಅಧ್ಯಕ್ಷ ನಾಗೇಶ್ ರಾಗಿಮುದ್ದನಹಳ್ಳಿ, ಸಾಹಿತಿ ಚಂದ್ರಶೇಖರಯ್ಯ, ಡಾ.ಸೌಮ್ಯ ಚೇತನ್, ವಿಶ್ವಕರ್ಮ ಮುಖಂಡರಾದ ದೇವರಾಜು, ಕಾಟೇರಾ ಕೇಶವ್, ಮಧುಪ್ರಭ ಅಮಿತ್ ಕೃಷ್ಣ, ಪ.ಮ. ನಂಜುಂಡಸ್ವಾಮಿ, ಕುಮಾರ್ ಬೀರಶೆಟ್ಟಹಳ್ಳಿ, ವಿವೇಕ್, ನವೀನ್ ಕುಮಾರ್, ಗಾನಸುಧೆ ಸುರೇಶ್, ಅಶೋಕ್ ಮಾಣಿಕ್ಯನಹಳ್ಳಿ ,ಜಯರಾಮ್ ಮಾಣಿಕ್ಯನಹಳ್ಳಿ, ರಮೇಶ್ ಬೀರ ಶೆಟ್ಟಹಳ್ಳಿ, ರಂಗಭೂಮಿ ಕಲಾವಿದ ಲೋಹಿತ್, ರಂಗಹನುಮಯ್ಯ, ಸುನಿಲ್ ಕಡತನಾಳು ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ