ನಗರದ ನೈರ್ಮಲ್ಯಕ್ಕೆ ನಾಗರಿಕರು ಸಹಕರಿಸಲಿ: ತಹಶೀಲ್ದಾರ

KannadaprabhaNewsNetwork |  
Published : Jan 27, 2026, 03:45 AM IST
೭೭ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಲಾಯಿತು. | Kannada Prabha

ಸಾರಾಂಶ

ತಾಲೂಕಾಡಳಿತ ಹಾಗೂ ನಗರಸಭೆಯಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಶೈಲೇಶ ಪರಮಾನಂದಕನ್ನಡಪ್ರಭ ವಾರ್ತೆ ದಾಂಡೇಲಿ

ದಾಂಡೇಲಿಯು ಪ್ರವಾಸೋದ್ಯಮ ಪ್ರದೇಶವಾಗಿ ಬೆಳೆದಿದ್ದು, ಅದಕ್ಕೆ ಪೂರಕವಾಗಿ ದಾಂಡೇಲಿಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆ ಮುತುವರ್ಜಿಯಿಂದಾಗಿ ನಗರದಲ್ಲಿ ಬೀದಿ ದೀಪಗಳ ನವಿಕರಣ, ರಸ್ತೆಗಳ ಅಭಿವೃದ್ದಿ, ನಿರಂತರ ಕುಡಿಯುವ ನೀರಿನ ವ್ಯವಸ್ಥೆಗೆ, ಯುಜಿಡಿ ಕಾಮಗಾರಿಗಳು ಹೀಗೆ ೩೮ ಜನಪರ ಕೆಲಸ ನಡೆಯುತ್ತಿವೆ ಎಂದು ತಹಶೀಲ್ದಾರ ಶೈಲೇಶ ಪರಮಾನಂದ ಹೆಳಿದರು.

ಹಳೇ ನಗರಸಭೆಯ ಮೈದಾನದಲ್ಲಿ ೭೭ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದಾಂಡೇಲಿ ಎಲ್ಲ ಧರ್ಮದ ಜನರು ಶಾಂತಿಯುತವಾಗಿ ಬದುಕುತ್ತಿರುವ ನಗರವಾಗಿದ್ದು, ಇಲ್ಲಿ ದೇಶದ ವಿವಿಧ ರಾಜ್ಯಗಳು ನಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದ ಅವರು, ತಾಲೂಕಾಡಳಿತ ಹಾಗೂ ನಗರಸಭೆಯಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇನ್ನು ತೆರಿಗೆ ಸಂಗ್ರಹ, ಮೂಲಭೂತ ಸೌಕರ್ಯ ನೀಡುವಲ್ಲಿ ಉತ್ತಮ ಪ್ರಗತಿ ಕಾಣುತ್ತಿದೆ. ನಗರದ ನೈರ್ಮಲ್ಯಕ್ಕೆ ನಾಗರಿಕರು ಸಹಕರಿಸಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಪೌರಾಯುಕ್ತ ವಿವೇಕ ಬನ್ನೆ, ಡಿವೈಎಸ್‌ಪಿ ಶಿವಾನಂದ ಮದರಕಂಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ಸಿ. ಹಾದಿಮನಿ, ಪಂಚಗ್ಯಾರಂಟಿ ಯೋಜನೆ ಅಧ್ಯಕ್ಷ ರಿಯಾಜ ಸಯ್ಯದ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಸಿಪಿಐ ಶಿವಾನಂದ ಅಂಬಿಗೇರ ಇದ್ದರು.

ಶಿಕ್ಷಕ ಸೀತಾರಾಮ ನಾಯ್ಕ ನಿರೂಪಿಸಿದರು. ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ ವಂದಿಸಿದರು.

ಕಾರ್ಯಕ್ರಮದಲ್ಲಿ ನಗರ ಶಾಲಾಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷರು, ಪ್ರಾಚಾರ್ಯರು, ನಗರದ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ನಗರದಲ್ಲಿ ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ:

ಅಂಬೇವಾಡಿಯಲ್ಲಿರುವ ವಿಧಾನಸೌಧ, ಅರಣ್ಯ ಇಲಾಖೆ ಕಚೇರಿ, ನಗರದ ಎಲ್ಲ ಸರ್ಕಾರಿ ಕಚೇರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಕೇಂದ್ರ ಕಚೇರಿಯಲ್ಲಿ, ಕರ್ನಾಟಕ ಸಂಘ, ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆ, ಅಂಬೇವಾಡಿಯ ಸರಕಾರಿ ಪದವಿ ಕಾಲೇಜು, ಹಳೆ ದಾಂಡೇಲಿಯ ಪದವಿ ಪೂರ್ವ ಕಾಲೇಜು, ದಾಂಡೇಲಿ ಶಿಕ್ಷಣ ಸಂಸ್ಥೆಯ ಬಂಗೂರನಗರ ಪದವಿ ಹಾಗೂ ಪದವಿ ಪೂರ್ವ ಕಾಲೇಜು, ಜನತಾ ವಿದ್ಯಾಲಯ, ಕೆನರಾ ಬಿಇಡಿ ಕಾಲೇಜು, ಅಂಬೇವಾಡಿ ಆಶಾಕಿರಣ ಐಟಿಐ, ಕನ್ಯಾವಿದ್ಯಾಲಯ, ತೌಹಿದ ಕಾಲೇಜು, ನಗರದ ಎಲ್ಲ ಬ್ಯಾಂಕುಗಳಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹400 ಕೋಟಿ ದರೋಡೆ ಕೇಸ್‌ನ ಸಂಭಾಷಣೆ ಆಡಿಯೋ ವೈರಲ್‌!
ಇಂದಿನಿಂದ ಮತ್ತೆ ಕಲಾಪ : ಭಾರೀ ಕೋಲಾಹಲ ನಿರೀಕ್ಷೆ