ಬಾಗಲಕೋಟೆ: ಮಹಾತ್ಮ ಗಾಂಧೀಜಿ ಅವರು ಹೇಳಿದಂತೆ ಸ್ವಚ್ಛತೆಯೂ ಉಸಿರಾದರೆ ಜೀವನ ಹಸಿರು ಮನೆಯಾಗುತ್ತದೆ. ಅದಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಮಹಾತ್ಮ ಗಾಂಧೀಜಿ ಅವರ ಪರಂಪರೆಯನ್ನು ಗೌರವಿಸಲು ಮತ್ತು ಸ್ವಚ್ಛತೆ ಜೀವನದ ಮಾರ್ಗವನ್ನಾಗಿ ಮಾಡಲು ಶ್ರಮದಾನದ ಮೂಲಕ ಸಮಾಜದ ಸಹಭಾಗಿತ್ವದ ಮೂಲಕ ಸ್ವಚ್ಛತೆಯ ಅರಿವನ್ನು ಮೂಡಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಮಹಾವಿದ್ಯಾಲದ ಪ್ರಾಚಾರ್ಯರ ಡಾ. ಜಗನ್ನಾಥ ಚವ್ಹಾಣ ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರೊ.ಎಸ್.ಐ.ಪತ್ತಾರ ಮಾತನಾಡಿದರು. ನೆಹರು ಯುವ ಕೇಂದ್ರದ ಮುಖ್ಯಸ್ಥ ಸುಷ್ಮಾ ಗೌಳಿ ಮಾತನಾಡಿದರು.ಐ.ಕ್ಯೂ.ಎ.ಸಿ ಸಂಯೋಜಕ ಜಿ.ಎಂ ನಾವದಗಿ, ಸಿಬ್ಬಂದಿ ಕಾರ್ಯದರ್ಶಿ ಎಂ ನಂಜುಂಡಸ್ವಾಮಿ, ಎನ್.ಎನ್.ಎಸ್ ಅಧಿಕಾರಿ ಡಾ.ಎಂ.ಎಂ.ಹುದ್ದಾರ, ಗೌರಿ ಗಣೇಶ ಸಾಂಸ್ಕೃತಿಕ ಸಂಘ ಅಧ್ಯಕ್ಷ ಪವಿತ್ರ ಜಕ್ಕಣ್ಣವರ, ನೆಹರು ಯುವ ಕೇಂದ್ರದ ಪದಾಧಿಕಾರಿ ರಾಮರಾವ್ ಬಿರಾದಾರ, ಮಹಾವಿದ್ಯಾಲಯದ ಪ್ರಾಧ್ಯಾಪಕ ಎಂ.ಎಚ್.ಚನ್ನಪ್ಪಗೋಳ, ದೈಹಿಕ ನಿರ್ದೇಶಕ ಡಾ.ಎಸ್.ಎಸ್.ಕೋಟ್ಯಾಳ, ಡಾ.ಬ.ವೀ.ಖೋತ, ಅಮೃತ ಗದ್ದನಕೇರಿ, ಪಿ.ಎಸ್. ಮಠದ ಅವರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿವಿದ್ಯಾರ್ಥಿಗಳಿಗೆ ನೆಹರು ಯುವ ಕೇಂದ್ರದವರು ಟೀ ಶರ್ಟ್, ಕ್ಯಾಪ್ ಹಾಗೂ ನೋಟ್ ಪ್ಯಾಡ್‌ಗಳನ್ನು ವಿತರಿಸಿಲಾಯಿತು. ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಿಂದ ಪ್ರಾರಂಭವಾಗ ಜಾಗೃತಿ ಜಾಥಾ ಹಳೇ ಬಸ್ ನಿಲ್ದಾಣದ ವರೆಗೆ ನಡೆದು ಅಲ್ಲಿ ಎಲ್ಲ ವಿದ್ಯಾರ್ಥಿಗಳು ಶ್ರಮದಾನ ಮೂಲಕ ಸ್ವಚ್ಛತೆಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.---
(ಪೊಟೋ 1ಬಿಕೆಟಿ2