ವಿದ್ಯಾರ್ಥಿಗಳಲ್ಲಿ ಸಹಾನುಭೂತಿ ಬೆಳೆಯಲಿ

KannadaprabhaNewsNetwork |  
Published : May 15, 2026, 02:30 AM IST
ಹಗರಿಬೊಮ್ಮನಹಳ್ಳಿಯ ರೇಣುಕಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ‍್ಯಕ್ರಮದಲ್ಲಿ ಶಿಕ್ಷಕರನ್ನು ಗೌರವಿಸಲಾಯಿತು. | Kannada Prabha

ಸಾರಾಂಶ

ಶಾಲಾ ಕಾಲೇಜುಗಳಲ್ಲಿ ಮಕ್ಕಳಲ್ಲಿ ಸಹಾನುಭೂತಿ, ಪರಸ್ಪರ ಗೌರವಿಸುವ ಸಂಸ್ಕಾರ ಬೆಳೆಸುವಲ್ಲಿ ಶಿಕ್ಷಕರು ಶ್ರಮಿಸಬೇಕು.

ಹಗರಿಬೊಮ್ಮನಹಳ್ಳಿ: ಮಕ್ಕಳಲ್ಲಿ ಶೈಕ್ಷಣಿಕ ಅಭ್ಯುದಯದ ಜೊತೆಗೆ ಹೃದಯವಂತಿಕೆ ಬೆಳೆಸಿದರೆ ಶಿಕ್ಷಣದ ಸಾರ್ಥಕತೆಗೆ ಅರ್ಥ ಬರುತ್ತದೆ ಎಂದು ಕಡಬಾಳು ಶಾಖಾ ಗವಿಮಠದ ಮರಿ ಶಾಂತವೀರ ಶ್ರೀ ಹೇಳಿದರು.

ಪಟ್ಟಣದ ರೇಣುಕಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದ ಸಾನಿಧ್ಯವನ್ನು ವಹಿಸಿ ಅವರು ಆಶೀರ್ವಚನ ನೀಡಿದರು.

ಶಾಲಾ ಕಾಲೇಜುಗಳಲ್ಲಿ ಮಕ್ಕಳಲ್ಲಿ ಸಹಾನುಭೂತಿ, ಪರಸ್ಪರ ಗೌರವಿಸುವ ಸಂಸ್ಕಾರ ಬೆಳೆಸುವಲ್ಲಿ ಶಿಕ್ಷಕರು ಶ್ರಮಿಸಬೇಕು. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಏಕಾಗ್ರತೆ ಸಾಧಿಸುವ ಹಂಬಲವಿರಬೇಕು. ವೈಚಾರಿಕ ಮನೋಭಾವ ಹೊಂದುವ ಮೂಲಕ ಸಾಧನೆಯತ್ತ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ನಿವೃತ್ತ ಮುಖ್ಯ ಶಿಕ್ಷಕ ಎಚ್.ಎಂ. ಕೊಟ್ರಯ್ಯ, ಶಿಕ್ಷಕರಾದ ಜಾತಪ್ಪ, ಪದ್ಮಣ್ಣ, ರಹೆಮಾನ್, ಕಾಲೇಜಿನ ಮುಖ್ಯಸ್ಥ ಕೆ.ಎಂ.ಟಿ. ಸಿದ್ದೇಶ, ಶಿವ ಪ್ರಕಾಶ, ಅಕ್ಕಿ ಪ್ರಕಾಶ, ಬಣಕಾರ, ಹರ್ಷವರ್ಧನ, ಶಂಭುಲಿಂಗಯ್ಯ, ಶಿವಮೂರ್ತಿ, ಶಂಕ್ರಪ್ಪ, ರೂಪಾದೇವಿ, ಬೆಟ್ಟಪ್ಪ, ಆಶೋಕ, ವಿದ್ಯಾರ್ಥಿಗಳಾದ ಎಚ್.ಎಂ.ರವಿ, ಚೇತನ, ಹರೀಶ ರೆಡ್ಡಿ, ಗುಡದಯ್ಯ, ಲೋಕೇಶ, ಖಾಜಾ, ಕೊಟ್ರೇಶ, ಪಂಪಾಪತಿ, ಗಂಗಾಧರ, ಜಗದೀಶ ಗೌಡ, ಬೆಣ್ಣಿಗೌಡ್ರ ಆನಂದ, ರಾಜಾವಲಿ ಗಡ್ಡದ್, ವೀರಭ್ರದಯ್ಯ, ಹೊನ್ನೂರಪ್ಪ, ಪ್ರಮೋದಿನಿ, ಹರಿಣಾಕ್ಷಿ, ಕುಸುಮಾ, ನಂದಿನಿ, ಸುಮಿತ್ರಾ, ವೀಣಾ, ಮಮತಾ, ಜಾಹ್ನವಿ ಮತ್ತಿತರರಿದ್ದರು.

ಆಯೇಷಾ ಗಡ್ಡದ್, ಸನಾ ಫರ್ಹಿನ್ ಗಡ್ಡದ್ ಪ್ರಾರ್ಥಿಸಿದರು. ಆಶ್ವಿನಿ ನಿರೂಪಿಸಿದರು. ಸುಮಿತ್ರಾ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಲೂಕು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪಗೆ ಆಹ್ವಾನ
ಸುನಿಲ್ ಕುಮಾರ್ ಮೇಲೆ ಕ್ರಮಕ್ಕೆ ಮಹಿಳಾ ಕಾಂಗ್ರೆಸ್ ಮನವಿ