ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಈ ವೇಳೆ ಮಾತನಾಡಿದ ಕೆಪಿಆರ್‌ಎಸ್ ನ ಜಂಟಿ ಕಾರ್ಯದರ್ಶಿ ಟಿ.ಅಪ್ಪಯ್ಯಣ್ಣ, ರಾಜ್ಯ ಎಂದೂ ಕಂಡರಿಯದ ಬರಗಾಲಕ್ಕೆ ಸಿಲುಕಿ ಒದ್ದಾಡುತ್ತಿದೆ. ರಾಜ್ಯ ಸರ್ಕಾರವೇ ೨೩೬ ತಾಲೂಕುಗಳ ಪೈಕಿ ೨೨೩ ತಾಲೂಕುಗಳು ತೀವ್ರ ಬರಪೀಡಿತ ತಾಲೂಕುಗಳು ಎಂದು ಘೋಷಿಸಿದೆ. ಕೃಷಿ ಇಲಾಖೆ ವರದಿ ಪ್ರಕಾರ ಸುಮಾರು ಐವತ್ತು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದರು.
ಹೆಚ್ಚುತ್ತಿರುವ ರೈತರ ಸಂಕಷ್ಟಮುಂಗಾರು ವೈಫಲ್ಯದಿಂದ ಉಂಟಾದ ಬರಗಾಲ, ನಂತರದ ಯಾವ ಮಳೆ ಋತುವಿನಲ್ಲೂ ಉಪಶಮನ ಕಾಣದೇ ಮುಂದುವರೆಯುತ್ತಾ ಬಂದಿರುವುದು ರೈತಾಪಿ ಸಮುದಾಯದ ಸಂಕಟವನ್ನು ದಿನೇ ದಿನೇ ಹೆಚ್ಚು ಉಲ್ಬಣಗೊಳ್ಳುವಂತೆ ಮಾಡುತ್ತಿದೆ ಆದ್ದರಿಂದ ರಾಷ್ಟೀಯ ವಿಪತ್ತು ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.ಬೇಡಿಕೆಗಳು:ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಿಸಬೇಕು, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬರ ಪರಿಹಾರವನ್ನು ಒದಗಿಸಬೇಕು. ಒಂದು ಹೆಕ್ಟರ್‌ಗೆ ಬೆಳೆ ನಷ ಪರಿಹಾರವಾಗಿ ೫೦,೦೦೦ ರೂ ನೀಡಬೇಕು, ಇಡೀ ರಾಜ್ಯವನ್ನು ಸಂಪೂರ್ಣ ಬರಗಾಲ ಪಿಡೀತ ಪ್ರದೇಶ ಎಂದು ಘೋಷಿಸಬೇಕು. ಬರಗಾಲ ಘೋಷಣೆಗೆ ಸಂಬAಧಿಸಿ, ಕೇಂದ್ರ ಸರ್ಕಾರವು ತನ್ನ ವಸಾಹತುಶಾಹಿ ಕಾಲಘಟ್ಟದ ಮಾನದಂಡಗಳಿಗೆ ಬದಲಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾನದಂಡಗಳನ್ನು ರೂಪಿಸಬೇಕು.
ನೋಡಲ್ ಅಧಿಕಾರಿ ನೇಮಿಸಿ
ಈ ಸಂದರ್ಭದಲ್ಲಿ ತಾಲ್ಲೂಕು ಖಜಾಂಚಿ ಎ.ಪಿಚ್ಚಕಣ್ಣು, ಗ್ರಾ.ಪಂ ಸದಸ್ಯ ಜಿ.ಗಣೇಶನ್, ಮುಖಂಡ ಹನುಮಂತರಾಯ, ಸಹ ಕಾರ್ಯದರ್ಶಿ ವಿ.ಸೋಮಶೇಖರ್, ತಾಲ್ಲೂಕು ಮುಖಂಡ ಬಿ.ಎಲ್.ಕೇಶವರಾವ್, ವಿ.ವೆಂಕಟೇಶಪ್ಪ ಹಾಗೂ ಇನ್ನಿತರರು ಇದ್ದರು.