-ಗಾಂಧಿಸ್ಮೃತಿ, ಜನಜಾಗೃತಿ ಸಮಾವೇಶದಲ್ಲಿ ಹಿರಿಯ ವಕೀಲ ಆರ್.ಎಂ. ಹೊನ್ನಾರೆಡ್ಡಿ ಸಲಹೆ
ಕನ್ನಡಪ್ರಭ ವಾರ್ತೆ ಶಹಾಪುರ
ಸಮಾಜದಲ್ಲಿನ ಪ್ರತಿಯೊಬ್ಬರೂ ಸಾತ್ವಿಕ ಬದುಕು ಸಾಗಿಸಬೇಕು. ದೋಷಗಳನ್ನು ನಿವಾರಿಸಿಕೊಂಡು ಉನ್ನತ ದಾರಿಯಲ್ಲಿ ಸಾಗಬೇಕು ಎಂದು ಹಿರಿಯ ವಕೀಲರಾದ ಆರ್.ಎಂ. ಹೊನ್ನಾರೆಡ್ಡಿ ತಿಳಿಸಿದರು.ನಗರದ ಅಂಬಾಭವಾನಿ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಶಹಾಪುರ ಘಟಕದಿಂದ ಆಯೋಜಿಸಿದ್ದ ಗಾಂಧಿಸ್ಮೃತಿ ಮತ್ತು ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಈ ದಿಸೆಯಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಘಟಕವು ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಉತ್ತಮಕಾರ್ಯ ಮಾಡುತ್ತಿದ್ದು, ಸರ್ವರು ಸಹಾಕರ ನೀಡಿದರೆ ಕಾರ್ಯಕ್ಕೆ ಸಾರ್ಥಕತೆ ಬರುತ್ತದೆ ಮತ್ತು ದುಶ್ಚಟಕ್ಕೆ ದಾಸರಾಗದೇ ಸತ್ಯ, ಶುದ್ಧ ಕಾಯಕದಿಂದ ಬದುಕು ಪಾವನ ಮಾಡಿಕೊಳ್ಳಬೇಕು ಎಂದರು.
ಆರಕ್ಷಣೆ ಇಲಾಖೆಯ ಶ್ಯಾಮಸುಂದರ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಕ್ಷೇತ್ರ ಯೋಜನಾಧಿಕಾರಿ ಕಲ್ಲಪ್ಪ ಎ. ಯಾವಗಲ್ ತಾಲೂಕಿನಲ್ಲಿ ಕೈಗೊಂಡ ಕಾರ್ಯಯೋಜನೆಗಳ ಕುರಿತು ಮಾತನಾಡಿದರು. ಪ್ರಮುಖರಾದ ಲಿಯಾಖತ್ ಪಾಷಾ, ನಗರ ಸಭೆಯ ಸದಸ್ಯ ಸತೀಶ ಪಂಚಭಾವಿ, ತುಳಜಾರಾಮ ಬಾಸೂತ್ಕರ, ಬಸವರಾಜ ಸಾಗರ, ಅಶೋಕ ತಳವಾರ, ಪತ್ರಕರ್ತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದನೂರು, ಹಿರಿಯ ಪತ್ರಕರ್ತ ನಾರಾಯಣಾಚಾರ್ಯ ಸಗರ ಸೇರಿದಂತೆ ಪ್ರಮುಖರು ಇದ್ದರು. ಅಂಕಿತಾ, ಸಂಗೀಯಾ ಪ್ರಾರ್ಥಿಸಿದರು. ಶ್ರೀಕಾಂತ ಪವಾಡಿಗೌಡರ್ ಸ್ವಾಗತಿಸಿ, ರಾಜೇಶ್ವರಿ ನಿರೂಪಿಸಿ, ರೇಣುಕಾ ವಂದಿಸಿದರು. 2023-24ನೇ ಸಾಲಿನ ವಾರ್ಷಿಕ ಪ್ರಗತಿ ಪ್ರಸ್ತುತ ಪಡಿಸಲಾಯಿತು.
ಶಹಾಪುರ ನಗರಡಾ ಅಂಬಾಭವಾನಿ ಸಭಾಭವನದಲ್ಲಿ ನಡೆದ ಗಾಂಧಿಸ್ಮೃತಿ ಮತ್ತು ಜನಜಾಗೃತಿ ಸಮಾವೇಶದಲ್ಲಿ ಹಿರಿಯ ವಕೀಲರಾದ ಆರ್.ಎಂ. ಹೊನ್ನಾರೆಡ್ಡಿ ಮಾತನಾಡಿದರು.