ಪ್ರತಿಯೊಬ್ಬರೂ ರಕ್ತದಾನ ಮಾಡುವ ಪ್ರತಿಜ್ಞೆ ಮಾಡುವಂತಾಗಲಿ: ಸಿದ್ಧ ಶಿವಯೋಗಿ ಶ್ರೀಗಳು

KannadaprabhaNewsNetwork |  
Published : Jun 16, 2026, 02:00 AM IST
ಹುಬ್ಬಳ್ಳಿ ನೀಲಿಜಿನ್‌ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ದತ್ತಮೂರ್ತಿ ಕುಲಕರ್ಣಿ, ವಿನೋದ ಪಟವಾ, ಶ್ರೀಧರ ಜೋಶಿ ರಕ್ತದಾನ ಮಾಡಿದರು. | Kannada Prabha

ಸಾರಾಂಶ

ರಕ್ತದಾನ ಶ್ರೇಷ್ಠವಾದ ಕೆಲಸ. ಈ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಪ್ರತಿಯೊಬ್ಬರೂ ರಕ್ತದಾನ ಮಾಡುವ ಪ್ರತಿಜ್ಞೆ ಮಾಡುವಂತಾಗಲಿ ಎಂದು ದೇವರಹುಬ್ಬಳ್ಳಿ ಸಿದ್ಧಾರೂಢ ಮಠದ ಸಿದ್ಧ ಶಿವಯೋಗಿಗಳು ಹೇಳಿದರು.

ಹುಬ್ಬಳ್ಳಿ: ರಕ್ತದಾನ ಶ್ರೇಷ್ಠವಾದ ಕೆಲಸ. ಈ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಪ್ರತಿಯೊಬ್ಬರೂ ರಕ್ತದಾನ ಮಾಡುವ ಪ್ರತಿಜ್ಞೆ ಮಾಡುವಂತಾಗಲಿ ಎಂದು ದೇವರಹುಬ್ಬಳ್ಳಿ ಸಿದ್ಧಾರೂಢ ಮಠದ ಸಿದ್ಧ ಶಿವಯೋಗಿಗಳು ಹೇಳಿದರು.

ಇಲ್ಲಿನ ನಿಲಿಜಿನ್‌ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದಿಂದ ಸೋಮವಾರ ವಿಶ್ವ ರಕ್ತದಾನಿಗಳ ದಿನದ ನಿಮಿತ್ತ ಜಾಗೃತಿ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಗವಂತ ಪ್ರತಿಯೊಬ್ಬರಿಗೆ ಎಲ್ಲವನ್ನು ಕೊಟ್ಟಿದ್ದಾನೆ. ಅದರಂತೆ ರಕ್ತವೂ ಒಂದಾಗಿದೆ. ರಕ್ತದಾನ ಮಾಡುವುದು ಉತ್ತಮ ಕಾರ್ಯ. ಅದರಿಂದ ಸಿಗುವ ಆನಂದ, ಲಾಭ ಹೆಚ್ಚು. ಹೀಗಾಗಿ, ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಎಂದರು.

ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ರಾಷ್ಟ್ರೋತ್ಥಾನ ರಕ್ತದಾನ ಜಾಗೃತಿ ಹಾಗೂ ರಕ್ತ ಸಂಗ್ರಹ ಮಾಡುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದೆ. ನಿತ್ಯ 80 ಸಾವಿರ ಯುನಿಟ್ ರಕ್ತ ಅಗತ್ಯವಿದ್ದರೆ, ಕೇವಲ 40 ಸಾವಿರ ಯೂನಿಟ್ ಮಾತ್ರ ಸಿಗುತ್ತಿದೆ. ರಕ್ತದಾನ ಜಾಗೃತಿ ಹೆಚ್ಚಾಗಬೇಕು. ಜನರು ಸ್ವಇಚ್ಛೆಯಿಂದ ರಕ್ತದಾನ ಮಾಡಬೇಕು ಎಂದರು.

ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಸಿಸ್ಟೆಂಟ್ ಡ್ರಗ್ಸ್ ಕಂಟ್ರೋಲರ್‌ಗಳಾದ ನೀಲಿಮಾ ಕೊಟ್ಟನ, ಅಜಯ ಮುದುಗಲ್ಲ ಮಾತನಾಡಿದರು. ದತ್ತಮೂರ್ತಿ ಕುಲಕರ್ಣಿ, ವಿನೋದ ಪಟವಾ, ಶ್ರೀಧರ ಜೋಶಿ ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ ರಕ್ತದಾನಿಗಳನ್ನು ಸನ್ಮಾನಿಸಲಾಯಿತು.

ಉದ್ಯಮಿ ಶಿವಲಿಂಗಯ್ಯ ಶಿವಯೋಗಿಮಠ, ಕಟ್ಟಡ ದಾನಿ, ಉದ್ಯಮಿ ವೀರೇಂದ್ರ ಛೇಡಾ, ಚಿಂತನ್ ಛೇಡಾ, ಮುಖ್ಯ ವೈದ್ಯಾಧಿಕಾರಿ ಡಾ. ಎಸ್.ಎಸ್. ಸಂಗೊಳ್ಳಿ, ಶ್ರೀಧರ ಹಳ್ಯಾಳ, ಸಿದ್ದು ಅಂಗಡಿ ಸೇರಿದಂತೆ ಹಲವರಿದ್ದರು. ಕಿರಣ ಗಡಿ ಸ್ವಾಗತಿಸಿದರು. ಗುರು ಬನ್ನಿಕೊಪ್ಪ ನಿರೂಪಿಸಿದರು. ಶ್ರೀಧರ್ ಜೋಶಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂರು ದಶಕದ ಸಾರ್ಥಕ ಸೇವೆ ಸಲ್ಲಿಸಿ ಮಣ್ಣಲ್ಲಿ ಲೀನವಾದ ಗೋವಿಂದವಾಡ
ಅರಣ್ಯ ನಾಶ ನಾಗರಿಕತೆಯ ವಿನಾಶವೂ ಹೌದು: ಸೈಯದ್ ಫಯಾಜ್‌ ಅಹ್ಮದ್‌