ಸರ್ಕಾರಗಳು ರೈತನಿಗೆ ತೊಂದರೆ ಆಗದಂತೆ ತೆರಿಗೆ ವಿಧಿಸಲಿ

KannadaprabhaNewsNetwork |  
Published : Aug 25, 2025, 01:00 AM IST
24ಕೆಆರ್ ಎಂಎನ್ 1.ಜೆಪಿಜಿರಾಮನಗರದ ಆದಿ ಚುಂಚನಗಿರಿ ಅರ್ಚಕರಹಳ್ಳಿ ಶಾಖಾ ಮಠದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕುಮಾರಸ್ವಾಮಿ ಹಾಗೂ ಕಾರ್ಯದರ್ಶಿಯಾಗಿ ಮಂಜುನಾಥ್ ಅವರಿಗೆ ಸಂಘದ ಬಾವುಟ ನೀಡಿ ನೇಮಕ ಮಾಡಲಾಯಿತು. | Kannada Prabha

ಸಾರಾಂಶ

ರಾಮನಗರ: ಬ್ರಿಟೀಷರ ಆಳ್ವಿಕೆಯ ಕಾಲದಿಂದ ಹಿಡಿದು ರಾಜ ಮಹಾರಾಜರ ಆದಿಯಾಗಿ ಆಳುವ ಸರ್ಕಾರಗಳು ಮುಂದುವರಿಸಿಕೊಂಡು ಬಂದಿರುವ ತೆರಿಗೆ ವ್ಯವಸ್ಥೆ ಹಾಗೂ ಪೂರಕವಾದ ಕಾರ್ಯಕ್ರಮಗಳನ್ನು ಜಾರಿ ಮಾಡದಿರುವುದೇ ಕೃಷಿ ಕ್ಷೇತ್ರ ಕ್ಷೀಣಿಸಿ, ರೈತರು ಸಂಕಷ್ಟದಲ್ಲಿ ಸಿಲುಕಲು ಕಾರಣವಾಗಿದೆ ಎಂದು ಭಾರತೀಯ ಕಿಸಾನ್ ಸಂಘ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಬೇಸರ ವ್ಯಕ್ತಪಡಿಸಿದರು.

ರಾಮನಗರ: ಬ್ರಿಟೀಷರ ಆಳ್ವಿಕೆಯ ಕಾಲದಿಂದ ಹಿಡಿದು ರಾಜ ಮಹಾರಾಜರ ಆದಿಯಾಗಿ ಆಳುವ ಸರ್ಕಾರಗಳು ಮುಂದುವರಿಸಿಕೊಂಡು ಬಂದಿರುವ ತೆರಿಗೆ ವ್ಯವಸ್ಥೆ ಹಾಗೂ ಪೂರಕವಾದ ಕಾರ್ಯಕ್ರಮಗಳನ್ನು ಜಾರಿ ಮಾಡದಿರುವುದೇ ಕೃಷಿ ಕ್ಷೇತ್ರ ಕ್ಷೀಣಿಸಿ, ರೈತರು ಸಂಕಷ್ಟದಲ್ಲಿ ಸಿಲುಕಲು ಕಾರಣವಾಗಿದೆ ಎಂದು ಭಾರತೀಯ ಕಿಸಾನ್ ಸಂಘ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಬೇಸರ ವ್ಯಕ್ತಪಡಿಸಿದರು.

ನಗರದ ಆದಿ ಚುಂಚನಗಿರಿ ಅರ್ಚಕರಹಳ್ಳಿ ಶಾಖಾ ಮಠದ ಸಭಾಂಗಣದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಕುಮಾರಸ್ವಾಮಿ ಹಾಗೂ ಕಾರ್ಯದರ್ಶಿ ಮಂಜುನಾಥ್‌, ಮತ್ತಿತತರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಆಳುವ ಸರ್ಕಾರಗಳು ರೈತನಿಗೆ ತೊಂದರೆ ಆಗದಂತೆ ತೆರಿಗೆ ವಿಧಿಸಬೇಕು. ಆ ತೆರಿಗೆ ಹಣವನ್ನು ನೀರಾವರಿ ಯೋಜನೆ, ಮಾರುಕಟ್ಟೆ, ರಸ್ತೆ ನಿರ್ಮಾಣ, ಬೀಜ ವಿತರಣೆಗಳಿಗೆ ಉಪಯೋಗಿಸಬೇಕು ಎಂದು ಹೇಳಿದರು.

ಇಲ್ಲಿ ರೈತರು ಮಾತ್ರವಲ್ಲ ದೇವ ಮಾನವರು ಹಾಗೂ ರಾಜ ಮಹಾರಾಜರು ಉಳುಮೆ ಮಾಡುತ್ತಿದ್ದ ಉಲ್ಲೇಖವಿದ್ದು, ಅದು ತಲೆಮಾರುಗಳಿಂದ ಹಸ್ತಾಂತರವಾಗಿದೆ. ನಮ್ಮದು ಸಾಮಾನ್ಯ ಕೃಷಿ ಅಲ್ಲ, ವೈಜ್ಞಾನಿಕ ಕೃಷಿಯಾಗಿದೆ. ವಿಶ್ವದಲ್ಲಿ ಎಲ್ಲೂ ನಡೆಯದಂತಹ ಕೃಷಿ ಭಾರತದಲ್ಲಿ ನಡೆಯುತ್ತದೆ. ಆದರೂ ಇಂದು ದೇಶದಲ್ಲಿ ಕೃಷಿ ಉತ್ತಮ ಸ್ಥಿತಿಯಲ್ಲಿ ಇಲ್ಲವಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಆಹಾರದ ಹಾಹಾಕಾರ ಇತ್ತು. ಅದನ್ನು ಹಸಿರು ಕ್ರಾಂತಿ ನೀಗಿಸಿತು. ವಿಜ್ಞಾನಿಗಳು ಹೇಳುತ್ತಾರೆ. ಏಕೆ ಹಾಹಾಕಾರ ಇತ್ತೆಂಬುದನ್ನು ಯಾರೂ ಸಹ ಹೇಳುತ್ತಿಲ್ಲ. ಬ್ರಿಟೀಷರು, ರಾಜ ಮಹಾರಾಜರು ಹಾಗೂ ಈಗಿನ ಸರ್ಕಾರಗಳು ಕೃಷಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸದಿರುವುದೇ ರೈತರು ಸಂಕಷ್ಟಕ್ಕೆ ಸಿಲುಕಲು ಕಾರಣವಾಗಿದೆ ಎಂದು ಹೇಳಿದರು.

ಜನಪ್ರತಿನಿಧಿಗಳು ಕೃಷಿಕರ ಕೆಲಸ ಮಾಡುತ್ತಿಲ್ಲ:

ದೇಶದಲ್ಲಿ ಅನೇಕ ಕೃಷಿ ಸಂಘಟನೆಗಳಿದ್ದು, ಅ‍ವುಗಳ ದೃಷ್ಟಿ ಕೋನಗಳು ಬೇರೆ ಬೇರೆಯಾಗಿವೆ. ವ್ಯಕ್ತಿ ಆಧಾರಿತ, ವಿಷಯ ಆಧಾರಿತ ಸಂಘಟನೆಗಳು ಮೂಲೆ ಗುಂಪಾಗಿವೆ. ಇದರ ಪರಿಣಾಮ ಶೇ.70ರಷ್ಟಿರುವ ರೈತರಿಂದ ನ್ಯಾಯ ದಕ್ಕಿಸಿಕೊಳ್ಳಲು ಆಗುತ್ತಿಲ್ಲ. ರೈತರ ಮತದಿಂದ ಆಯ್ಕೆಯಾಗುತ್ತಿರುವ ಜನಪ್ರತಿನಿಧಿಗಳು ಕೃಷಿಕರ ಕೆಲಸ ಮಾಡಿಕೊಡುತ್ತಿಲ್ಲ.

ಇದೆಲ್ಲವನ್ನು ಗಂಭೀರವಾಗಿ ಆಲೋಚನೆ ಮಾಡಿಯೇ ಪ್ರತಿಯೊಬ್ಬ ರೈತನು ನಮ್ಮ ನಾಯಕರ ಘೋಷವಾಕ್ಯದೊಂದಿಗೆ ಭಾರತೀಯ ಕಿಸಾನ್ ಸಂಘ ಆರಂಭವಾಯಿತು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರತಿ ಜಿಲ್ಲೆಗಳಲ್ಲಿ ಸಂಘ ಹಂತ ಹಂತವಾಗಿ ಸಂಘಟನೆಯಾಗುತ್ತಿದೆ. ರಾಜಕೀಯ ರಹಿತ ರೈತ ಸಂಘಟನೆಯಾಗಿ ರೈತರ ಧ್ವನಿಯಾಗಿದೆ ಎಂದು ರಮೇಶ್ ರಾಜು ತಿಳಿಸಿದರು.

ಈ ಮೊದಲು ಕೃಷಿ ಸಾಲದ ಮೇಲೆ ಶೇಕಡ 16ರಿಂದ 17ರಷ್ಟು ಬಡ್ಡಿ ದರ ಇತ್ತು. ಕಿಸಾನ್ ಸಂಘದ ಹೋರಾಟದ ಈಗ ಶೇಕಡ 3ರಿಂದ ಶೂನ್ಯ ದರಕ್ಕೆ ಇಳಿದಿದೆ. ಬಡ್ಡಿ ಪಾವತಿಸಿದರೆ ಮರು ಪಾವತಿಸುವ ವ್ಯವಸ್ಥೆಯೂ ಇದೆ. 2010ರಲ್ಲಿ 400 ರುಪಾಯಿ ಇದ್ದ ರಾಗಿ ಬೆಲೆ 4 ಸಾವಿರ ರು.ಗೆ ಬಂದಿದೆ. ವಿದೇಶದಿಂದ ರಫ್ತು ಆಮದು ನೀತಿ ಪಾಲಿಸಿ ಸರ್ಕಾರ ಮಾಡುತ್ತಿತ್ತು. ಇದರಲ್ಲಿ ರೈತರೇ ಇರಲಿಲ್ಲ. ಈಗ ಆ ಸಮಿತಿಯಲ್ಲಿ ರೈತರಿದ್ದು, ಯಾವ ಕೃಷಿ ಉತ್ಪನ್ನ ಭಾರತಕ್ಕೆ ಬರಬೇಕು ಬೇಡ ಎಂಬ ನಿರ್ಧಾರ ಮಾಡುತ್ತದೆ.

24 ಗಂಟೆ ಕೃಷಿಗೆ ವಿದ್ಯುತ್ ಪೂರೈಕೆ ಆಗುತ್ತಿದೆ. ಸಾವಯವ ಕೃಷಿ ಸಾವಯವ ಸಂತೆ, ಮಾರುಕಟ್ಟೆ ನಿರ್ಮಾಣವಾಗಿವೆ. ಕಿಸಾನ್ ಸಮ್ಮಾನ್ ಯೋಜನೆ ಕೇಂದ್ರದಿಂದ 6 ಸಾವಿರ ನೀಡುತ್ತಿದೆ. ರಾಜ್ಯ ಸರ್ಕಾರ ಸ್ಥಗಿತಗೊಳಿಸಿರುವ 4 ಸಾವಿರ ನೀಡಬೇಕು ಹಾಗೂ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಾಗಿ ಕಿಸಾನ್ ಸಂಘ ನಿರಂತರವಾಗಿ ಹೋರಾಟ ನಡೆಸುತ್ತಿದೆ ಎಂದು. ಈಗಿನ ಸರ್ಕಾರಗಳು ಕೃಷಿ ಭೂಮಿ ಕಬಳಿಸುವ ಹುನ್ನಾರ ನಡೆಸುತ್ತಿವೆ. ಇದಕ್ಕಾಗಿ ರೈತರಿಗೆ ಹಣದ ಆಮಿಷವೊಡ್ಡುತ್ತಿವೆ. ಒಮ್ಮೆ ಭೂಮಿ ಕಳೆದುಕೊಂಡರೆ ರೈತರಿಗೆ ನೆಲೆ ಇಲ್ಲದಂತಾಗುತ್ತದೆ. ಆದ್ದರಿಂದ ಕೃಷಿಕರು ಜಾಗೃತರಾಗಿ ಸಂಘಟಿತರಾಗಬೇಕು ಎಂದು ರಮೇಶ್ ರಾಜು ಕವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ನೂತನ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಮತ್ತು ಹಾಗೂ ಕಾರ್ಯದರ್ಶಿಯಾಗಿ ಮಂಜುನಾಥ್ ಅವರಿಗೆ ಸಂಘದ ಬಾವುಟ ನೀಡಿ ನೇಮಕ ಮಾಡಲಾಯಿತು.

ಆದಿ ಚುಂಚನಗಿರಿ ಅರ್ಚಕರಹಳ್ಳಿ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಅಪ್ಪಾಜಿಗೌಡ, ನಿವೃತ್ತ ಯೋಧ ಓಂಕಾರೇಶ್ವರ, ರೈತ ಮುಖಂಡರಾದ ಸಂಪತ್ ಕುಮಾರ್, ನಾಗರಾಜು, ನವೀಶ್ , ಸ್ವಾಮಿ, ರಾಜಣ್ಣ, ಶಂಕರ್, ಅಭಿಷೇಕ್ ಗೌಡ, ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಕೋಟ್‌.....

ದೇಶದ 600ಕ್ಕೂ ಹೆಚ್ಚು ಜಿಲ್ಲೆಗಳು, 4 ಸಾವಿರಕ್ಕೂ ಹೆಚ್ಚು ತಾಲೂಕುಗಳಲ್ಲಿ ಕಿಸಾನ್ ಸಂಘ ಕಾರ್ಯನಿರ್ವಹಿಸುತ್ತಿದೆ. ಒಟ್ಟಾರೆ ದೇಶದಲ್ಲಿ 82 ಲಕ್ಷ ಸದಸ್ಯತ್ವ, 60 ಸಾವಿರ ಗ್ರಾಮ ಸಮಿತಿಗಳನ್ನು ಹೊಂದಿದೆ. ಕರ್ನಾಟಕದ ದಕ್ಷಿಣ ಪ್ರಾಂತ್ಯದಲ್ಲಿ 2500 ಗ್ರಾಮ ಸಮಿತಿಗಳನ್ನು ಹೊಂದಿದೆ.

-ನಾರಾಯಣಸ್ವಾಮಿ, ಸಂಘಟನಾ ಕಾರ್ಯದರ್ಶಿ

ಕೋಟ್‌.............ಕಿಸಾನ್ ಸಂಘ ರಚನಾತ್ಮಕ, ಸಂಘಟನಾತ್ಮಕ ಹಾಗೂ ಆಂದೋಲನಾತ್ಮಕವಾಗಿ ಕೆಲಸ ಮಾಡುತ್ತಿದೆ. ಗ್ರಾಮಗಳಲ್ಲಿ ಸಮಿತಿಗಳ ರಚನೆಗೆ ಒತ್ತು ನೀಡುವ ಮೂಲಕ ರೈತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇವೆ.

-ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ

ಬಾಕ್ಸ್ .................

ಜಿಲ್ಲಾ ಪದಾಧಿಕಾರಿಗಳು:

ಭಾರತೀಯ ಕಿಸಾನ್ ಸಂಘ ದಕ್ಷಿಣ ಪ್ರಾಂತ್ಯ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾಗಿ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ರಾವ್ , ಉಪಾಧ್ಯಕ್ಷರಾಗಿ ಎ.ಸಿ.ರಾಜು , ಸಹ ಕಾರ್ಯದರ್ಶಿಯಾಗಿ ಓಂಕಾರೇಶ್ವರ, ಕಾರ್ಯಕರಣಿ ಸದಸ್ಯರಾಗಿ ಅರುಣ್, ಶಂಕರ್, ಸಿದ್ದಮರಿಗೌಡ, ಸೋಮೇಶ್ ಗೌಡ , ಜಿಲ್ಲಾ ಯುವ ಪ್ರಮುಖರಾಗಿ ಅಭಿಷೇಕ್ ಗೌಡ, ಕನಕಪುರ ನಗರ ಅಧ್ಯಕ್ಷರಾಗಿ ಕೆ.ಎಸ್.ಸೋಮೇಖರ್ , ತಾಲೂಕು ಕಾರ್ಯಕಾರಣಿಯಾಗಿ ರವಿಕುಮಾರ್, ನಾಗರಾಜು, ಕುಮಾರ್, ಕಾಂತರಾಜು ನೇಮಕಗೊಂಡಿದ್ದಾರೆ.

24ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಆದಿ ಚುಂಚನಗಿರಿ ಅರ್ಚಕರಹಳ್ಳಿ ಶಾಖಾ ಮಠದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕುಮಾರಸ್ವಾಮಿ ಹಾಗೂ ಕಾರ್ಯದರ್ಶಿಯಾಗಿ ಮಂಜುನಾಥ್ ಅವರಿಗೆ ಸಂಘದ ಬಾವುಟ ನೀಡಿ ನೇಮಕ ಮಾಡಲಾಯಿತು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ