.ಧರ್ಮ ರಕ್ಷಣೆ, ಅಧರ್ಮದ ನಾಶವೇ ಭಗವದ್ಗೀತೆ ಸಾರ

KannadaprabhaNewsNetwork |  
Published : Aug 25, 2025, 01:00 AM IST
೨೪ಕೆಎಲ್‌ಆರ್-೭ಕೋಲಾರದಲ್ಲಿ ಜಿಲ್ಲಾ ಯಾದವ ಸಂಘದ ಸಹಯೋಗದಲ್ಲಿ ನಡೆದ ಶ್ರೀಕೃಷ್ಣಜಯಂತಿಯ ಸ್ಥಬ್ದಚಿತ್ರಗಳು,ಪಲ್ಲಕ್ಕಿಗಳ ಭವ್ಯ ಮೆರವಣಿಗೆಗೆ ಡಿಸಿಪಿ ದೇವರಾಜ್, ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್ ಚಾಲನೆ ನೀಡಿದರು. ಜಿಲ್ಲಾ ಯಾದವ ಸಂಘದ ಅಧ್ಯಕ್ಷ ವಕ್ಕಲೇರಿ ನಾರಾಯಣಸ್ವಾಮಿ ಇದ್ದರು. | Kannada Prabha

ಸಾರಾಂಶ

ಸಮಾಜಕ್ಕೆ ಭಗವದ್ಗೀತೆಯಂತಹ ಮಹಾನ್ ಗ್ರಂಥ ನೀಡುವ ಮೂಲಕ ಸಂಸ್ಕಾರದ ಪಾಠ ಹೇಳಿಕೊಟ್ಟ ಶ್ರೀಕೃಷ್ಣ ಪರಮಾತ್ರ ಎಲ್ಲರಿಗೂ ದೇವರೇ, ಸಮಾಜದಲ್ಲಿ ಇಂದಿಗೂ ಸಂಸ್ಕಾರ, ಸಂಸ್ಕೃತಿ ಉಳಿದಿದೆ ಎಂದರೆ ಅದಕ್ಕೆ ನಮ್ಮಲ್ಲಿನ ದೇವರ ಮೇಲಿನ ಭಕ್ತಿಯೇ ಕಾರಣ. ಕೃಷ್ಣನ ಮೇಲಿನ ಭಕ್ತಿ ಎಂತದ್ದು ಎಂಬುದಕ್ಕೆ ಕನಕದಾಸರಿಗೆ ಮೂರ್ತಿಯೇ ಹಿಂದಿರುಗಿ ನೀಡಿದ ದರ್ಶನವೇ ನಿದರ್ಶನ

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾ ಯಾದವ ಸಂಘದಿಂದ ನಗರದ ಟೇಕಲ್ ರಸ್ತೆಯ ಯಾದವ ಸಮುದಾಯ ಭವನದ ಮುಂಭಾಗ ಆರಂಭಗೊಂಡ ಶ್ರೀ ಕೃಷ್ಣಜನ್ಮಾಷ್ಟಮಿ ಭವ್ಯ ಮೆರವಣಿಗೆಗೆ ಬೆಂಗಳೂರು ಪೂರ್ವ ಡಿಸಿಪಿ ದೇವರಾಜ್ ಹಾಗೂ ಜೆಡಿಎಸ್ ಮುಖಂಡ ಸಿ.ಎಂ.ಆರ್.ಶ್ರೀನಾಥ್ ಚಾಲನೆ ನೀಡಿದರು.ಡಿಸಿಪಿ ದೇವರಾಜ್ ಮಾತನಾಡಿ, ಶ್ರೀ ಕೃಷ್ಣನ ಭಗವದ್ಗೀತೆ ಇಡೀ ವಿಶ್ವಕ್ಕೆ ಪ್ರೇರಣೆ, ಧರ್ಮ ಉಳಿಸುವ ಅಧರ್ಮವನ್ನು ಮುಗಿಸುವ ಸಂದೇಶದ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಸಾಕಾರವಾಗಿದೆ ಎಂದು ಅಭಿಪ್ರಾಯಪಟ್ಟರು.ಸಮಾಜಕ್ಕೆ ಕಂಟಕರಾಗಿದ್ದ ರಾಕ್ಷಸರನ್ನು ಮುಗಿಸಿದ ಶ್ರೀಕೃಷ್ಣ ಮಹಿಳೆಯರು, ಹೆಣ್ಣು ಮಕ್ಕಳ ರಕ್ಷಕನಾಗಿ ಅವರ ಆರಾಧಕನಾಗಿ ಕಂಡು ಬಂದಿದ್ದಾನೆ, ಸಮಾಜದಲ್ಲಿ ದುಷ್ಟ ಶಕ್ತಿಗಳ ಅಟ್ಟಹಾಸ ಮುಗಿಲುಮುಟ್ಟಿದಾಗ ತಾನೇ ಅವತರಿಸುವುದಾಗಿ ಹೇಳಿದ್ದು, ಕೃಷ್ಣನ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪ ಎಂದರು.ಗೀತೆಯಿಂದ ಸಂಸ್ಕಾರದ ಪಾಠ

ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್ ಮಾತನಾಡಿ, ಸಮಾಜಕ್ಕೆ ಭಗವದ್ಗೀತೆಯಂತಹ ಮಹಾನ್ ಗ್ರಂಥ ನೀಡುವ ಮೂಲಕ ಸಂಸ್ಕಾರದ ಪಾಠ ಹೇಳಿಕೊಟ್ಟ ಶ್ರೀಕೃಷ್ಣ ಪರಮಾತ್ರ ಎಲ್ಲರಿಗೂ ದೇವರೇ, ಸಮಾಜದಲ್ಲಿ ಇಂದಿಗೂ ಸಂಸ್ಕಾರ, ಸಂಸ್ಕೃತಿ ಉಳಿದಿದೆ ಎಂದರೆ ಅದಕ್ಕೆ ನಮ್ಮಲ್ಲಿನ ದೇವರ ಮೇಲಿನ ಭಕ್ತಿಯೇ ಕಾರಣ. ಕೃಷ್ಣನ ಮೇಲಿನ ಭಕ್ತಿ ಎಂತದ್ದು ಎಂಬುದಕ್ಕೆ ಕನಕದಾಸರಿಗೆ ಮೂರ್ತಿಯೇ ಹಿಂದಿರುಗಿ ನೀಡಿದ ದರ್ಶನವೇ ನಿದರ್ಶನ ಎಂದರು.

ಶ್ರೀಕೃಷ್ಣನ ಭವ್ಯ ಮೆರವಣಿಗೆಗೆ ಡೊಳ್ಳು ಕುಣಿತ, ಕೇರಳದ ತಂಡೆ ವಾದ್ಯ, ಗಾರುಡಿ ಗೊಂಬೆ, ಹಾಸ್ಯ ಕಲಾವಿದರು, ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು ಮೆರಗು ನೀಡಿದ್ದವು.

ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಉದ್ಯಮಿ ವಕ್ಕಲೇರಿ ನಾರಾಯಣಸ್ವಾಮಿ, ಮುಖಂಡರಾದ ಬಣಕನಹಳ್ಳಿ ನಟರಾಜ್, ನಗರಸಭಾ ಸದಸ್ಯ ಎಸ್.ಆರ್.ಮುರಳಿಗೌಡ, ವರದೇನಹಳ್ಳಿ ವೆಂಕಟೇಶ್, ವಕ್ಕಲೇರಿ ರಾಜಪ್ಪ, ಗಂಗಮ್ಮನಪಾಳ್ಯ ರಾಮಯ್ಯ, ಯಾದವ ಸಂಘದ ನಿಕಟಪೂರ್ವ ಅಧ್ಯಕ್ಷ ಗೋಕುಲ ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಅಮರನಾಥ್, ರಾಜ್ಯಕಾರ್ಯಕಾರಿ ಸದಸ್ಯ ಶ್ರೀನಿವಾಸಯಾದವ್‌ ಇದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ