ಕನ್ನಡಪ್ರಭ ವಾರ್ತೆ ಕೋಲಾರವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆ ಸೋಲಿನಿಂದಾಗಿ ಕಾಂಗ್ರೆಸ್ ನಿರಾಸೆಪಡಬೇಕಾಗಿಲ್ಲ, ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಿಂತಲೂ ಹೆಚ್ಚಿನ ಮತಗಳನ್ನು ಪಡೆದಿದ್ದೇವೆ, ಯಾರನ್ನು ಹೊಣೆಗಾರಿಕೆ ಮಾಡುವುದು ಬೇಡ, ಪರಾಜಿತ ಅಭ್ಯರ್ಥಿಗಳನ್ನು ಬಿಟ್ಟುಕೊಡುವುದಿಲ್ಲ, ವಾರ್ಡ್‌ಗಳಲ್ಲಿ ನಿಮಗೆ ಜವಾಬ್ದಾರಿ ವಹಿಸುತ್ತೇವೆ, ಒಟ್ಟಿಗೆ ಸೇರಿ ಅಭಿವೃದ್ಧಿ ಮಾಡೋಣ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.ತಾಲೂಕಿನ ವೇಮಗಲ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನಿವಾಸದಲ್ಲಿ ಪಟ್ಟಣ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು.ಭರವಸೆ ಈಡೇರಿಸುತ್ತೇವೆ
ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಚುನಾವಣೆಯಲ್ಲಿ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆಯಲಾಗಿತ್ತು ಜೊತೆಗೆ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಕೈ ಹಿಡಿಯಲಿವೆ ಎಂದು ಭಾವಿಸಲಾಗಿತ್ತು, ಆದರೂ ಸೋಲಾಗಿದೆ. ಇವತ್ತು ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳು ಒಟ್ಟಾಗಿ ಕಾಂಗ್ರೆಸ್ ಏಕಾಂಗಿಯಾಗಿ ಎದುರಿಸಿದ್ದರಿಂದ ಸೋಲಾಗಿದೆ, ಸೋಲಿಗೆ ನಾನಾಕಾರಣಗಳು ಇವೆ. ಸೋತವರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಕಾಂಗ್ರೆಸ್ ಸರ್ಕಾರ ನಿಮ್ಮ ಜೊತೆಗೆ ಇದೆ, ಈ ಚುನಾವಣೆಯಲ್ಲಿ ನಮ್ಮ ಜೊತೆ ಹಗಲಿರುಳೆನ್ನದೆ ಶ್ರಮಿಸಿದವರಿಗೆ ಧನ್ಯವಾದ ಅರ್ಪಿಸಿ ಜೊತೆಯಲ್ಲಿ ಕರೆದುಕೊಂಡು ಅಭಿವೃದ್ಧಿಗೆ ಕೈ ಜೋಡಿಸೋಣ ಎಂದರುಸೋಲಿನಿಂದ ಆತ್ಮಸ್ಥೈರ್ಯ ಹೆಚ್ಚಳ
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಜನರ ಸೇವೆ ಮಾಡಲು ಅಧಿಕಾರವೊಂದೇ ಮಾನದಂಡವಲ್ಲ, ಕಾಂಗ್ರೆಸ್ ಚುನಾವಣೆಯ ಫಲಿತಾಂಶದಲ್ಲಿ ಸೋತಿರಬಹುದು, ಆದರೆ ಈ ಸೋಲಿಗೆ ನಮ್ಮಲ್ಲಿನ ಆತ್ಮಸ್ಥೈರ್ಯ ಹೆಚ್ಚಿಸಿದೆ ಸೋಲಿಗೆ ಏನು ಕಾರಣವಾಯಿತು, ಏನು ಮಾಡಬೇಕಾಗಿತ್ತು ಎಲ್ಲಿ ಎಡವಿದ್ದೇವೆ ಮುಂದೆ ಯಾವ ವಿಚಾರಗಳನ್ನು ಸರಿಪಡಿಸಿಕೊಳ್ಳಬೇಕು ಮುಂದೆ ಪ್ರತಿ ವಾರ್ಡ್‌ನಲ್ಲಿ ಏಳೆಂಟು ಜನರ ಸಮಿತಿ ಮಾಡಿ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಗೆ ನಿರಂತರವಾಗಿ ಸಭೆ ಮಾಡೋಣ ಎಂದರು.ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ, ಬ್ಲಾಕ್ ಅಧ್ಯಕ್ಷ ಉದಯಶಂಕರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಮುಖಂಡರಾದ ಖಾದ್ರಿಪುರ ಬಾಬು, ಕುರಬರಹಳ್ಳಿ ಕುಮಾರ್, ಮಡಿವಾಳ ಮುನಿರಾಜು, ಮೈಲಾಂಡಹಳ್ಳಿ ಮುರಳಿ, ಪೆರ್ಜೇನಹಳ್ಳಿ ನಾಗೇಶ್, ಪಟ್ಟಣ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಸದಸ್ಯರಾದ ಅಂಜಲಿ ಪ್ರಕಾಶ್, ಗಂಗಪ್ಪ, ಮಡಿವಾಳ ಮಂಜುಳಾ ತಾಸುಫ್ ಖಾನ್, ದೀಪ, ಶಶಿಕಲಾ ಇದ್ದರು.