ಗ್ರಾಮ ಸ್ವರಾಜ್ ಫೌಂಡೇಷನ್ ಉತ್ತಮ ಛಾಪು ಮೂಡಿಸಲಿ: ವಿಷ್ಣುಕಾಂತ್ ಚಟ್ಪಲ್ಲಿ

KannadaprabhaNewsNetwork |  
Published : Jun 07, 2026, 01:45 AM IST
6ಕೆಎಂಎನ್ ಡಿ18 | Kannada Prabha

ಸಾರಾಂಶ

ಗ್ರಾಮ ಸ್ವರಾಜ್ ಫೌಂಡೇಷನ್ ರಾಜ್ಯದ ಉದ್ದಗಲಕ್ಕೂ ತನ್ನ‌ ಕಾರ್ಯಜಾಲ ಹೊಂದಿ 20ಕ್ಕೂ‌ ಹೆಚ್ಚು ವರ್ಷಗಳ ಸುದೀರ್ಘ ಅವಧಿಯಿಂದ ಗ್ರಾಮೀಣಾಭಿವೃದ್ಧಿ ‌ಕ್ಷೇತ್ರದಲ್ಲಿ‌ ಕಾರ್ಯ ನಿರ್ವಹಿಸಿ ಅನುಭವ ಉಳ್ಳ ಸಂಪನ್ಮೂಲ ವ್ಯಕ್ತಿಗಳನ್ನು ಒಳಗೊಂಡಿಹ ಸಮೂಹ ಹೊಂದಿರುವುದು ಉತ್ತಮ ಕಾರ್ಯದಕ್ಷತೆ ಪ್ರತಿಬಿಂಬಿಸುತ್ತದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಗ್ರಾಮ ಸ್ವರಾಜ್ ಆಶಯಗಳ‌ ಜಾರಿಗಾಗಿ ಅಸ್ಥಿತ್ವಕ್ಕೆ ಬಂದಿರುವ ಗ್ರಾಮ ಸ್ವರಾಜ್ ಫೌಂಡೇಷನ್ ಉತ್ತಮ ಕಾರ್ಯಚಟುವಟಿಕೆ ಮೂಲಕ ರಾಜ್ಯದಲ್ಲಿ ತನ್ನದೇ ವಿಶೇಷ ಛಾಪು‌ ಮೂಡಿಸಲಿ ಎಂದು ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯುತ್ ರಾಜ್ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ವಿಷ್ಣುಕಾಂತ್ ಚಟ್ಪಲ್ಲಿ ಅಶಯ ವ್ಯಕ್ತಪಡಿಸಿದರು.

ತಾಲೂಕಿನ ಸೋಮನಹಳ್ಳಿ ಎಜುಕೇಷನ್ ಸೊಸೈಟಿ ಆವರಣದಲ್ಲಿ ನಡೆದ ಗ್ರಾಮ ಸ್ವರಾಜ್ ಫೌಂಡೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸರ್ಕಾರಗಳ ಯೊಜನೆಗಳು‌ ಪರಿಣಾಮಕಾರಿಯಾಗಿ ಜಾರಿಯಾಗುವಲ್ಲಿ ಎನ್ ಜಿ ಒ‌ಗಳ‌ ಪಾತ್ರ ಮಹತ್ವವಾದದ್ದು ಎಂದರು.

ಸರ್ಕಾರ ಹಾಗೂ ಖಾಸಗಿ ವಲಯಗಳಿಗೂ ಕೂಡ ಇದೀಗ ತಮ್ಮ ಕಾರ್ಯಚಟುವಟಿಕೆ ಅನುಷ್ಠಾನಕ್ಕೆ ಎನ್ ಜಿಒಗಳ ಅಗತ್ಯತೆ ಹೆಚ್ಚಿದೆ. ಗ್ರಾಮ ಸ್ವರಾಜ್ ಫೌಂಡೇಷನ್ ರಾಜ್ಯದ ಉದ್ದಗಲಕ್ಕೂ ತನ್ನ‌ ಕಾರ್ಯಜಾಲ ಹೊಂದಿ 20ಕ್ಕೂ‌ ಹೆಚ್ಚು ವರ್ಷಗಳ ಸುದೀರ್ಘ ಅವಧಿಯಿಂದ ಗ್ರಾಮೀಣಾಭಿವೃದ್ಧಿ ‌ಕ್ಷೇತ್ರದಲ್ಲಿ‌ ಕಾರ್ಯ ನಿರ್ವಹಿಸಿ ಅನುಭವ ಉಳ್ಳ ಸಂಪನ್ಮೂಲ ವ್ಯಕ್ತಿಗಳನ್ನು ಒಳಗೊಂಡಿಹ ಸಮೂಹ ಹೊಂದಿರುವುದು ಉತ್ತಮ ಕಾರ್ಯದಕ್ಷತೆ ಪ್ರತಿಬಿಂಬಿಸುತ್ತದೆ ಎಂದು ಬಣ್ಣಿಸಿದರು.

ಫೌಂಡೇಶನ್ ಉದ್ಘಾಟಿಸಿದದ ಶೃತ್ ಅಂಡ್ ಸ್ಮಿತ್ ಫೌಂಡೇಷನ್ ಅಧ್ಯಕ್ಷ ಕರಣ್ ಕುಮಾರ್ ಅವರು, ಸುದೀರ್ಘ ಅವಧಿಯಿಂದ ಸಮಾಜ ಪರತೆಯಿಂದ ಗ್ರಾಮೀಣಾಭಿವೃದ್ಧಿ ‌ಕ್ಷೇತ್ರದಲ್ಲಿ‌ ಕಾರ್ಯನಿರ್ವಹಿಸಿ‌ ಸಮಾಜದ ಬದಲಾವಣೆ ಹಾಗೂ ಬೆಳವಣಿಗೆಗೆ ಶ್ರಮಿಸಿದ ಸಂಪನ್ಮೂಲ ವ್ಯಕ್ತಿಗಳ‌ ದೊಡ್ಡ ಸಮೂಹ ರಾಜ್ಯಾದ್ಯಂತ ಜಾಲದೊಂದಿಗೆ ಗ್ರಾಮ ಸ್ವರಾಜ್ ಫೌಂಡೇಷನ್ ಆರಂಭಿಸಿರುವುದು ಸಂತಸದ ಸಂಗತಿ ಎಂದರು.

ವಿಧಾನ‌ ಪರಿಷತ್ ಮಾಜಿ ಸದಸ್ಯ ಮನೊಹರ್ ಮಸ್ಕಿ ಮಾತನಾಡಿ, ಪರಿಸರ ದಿನದಂದು ಉದ್ಘಾಟನೆಗೊಳ್ಳುತ್ತಿರುವ ಗ್ರಾಮಸ್ವರಾಜ್ ಫೌಂಡೇಷನ್ ಸಮಾಜದಲ್ಲಿ ಉತ್ತಮ‌ ವಾತವಾರಣ ನಿರ್ಮಿಸುವಲ್ಲಿ‌, ಜನಸಾಮಾನ್ಯರಿಗೆ ಸರ್ಕಾರದ ಯೊಜನೆ ಪರಿಚಯಿಸಿ ಅವುಗಳನ್ನು ಪಡೆಯುವ ಸಾಮರ್ಥ್ಯ ಹೆಚ್ಚಿಸಿ ಯೋಜನೆಗಳ ಫಲ‌ ಅರ್ಹರಿಗೆ ದಕ್ಕುವಂತೆ ಕೆಲಸ ಮಾಡಲಿ ಎಂದು ಆಶಿಸಿದರು.

ಗ್ರಾಮ ಸ್ವರಾಜ್ ಫೌಂಡೇಷನ್ ಅಧ್ಯಕ್ಷ ನ.ಲಿ.ಕೃಷ್ಣ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು‌ ಪಂಚಾಯುತ್ ರಾಜ್ ಕ್ಷೇತ್ರದ ಬಲವರ್ಧನೆ‌ ಮೂಲಕ‌ ಗ್ರಾಮಗಳ ಸ್ವಾವಲಂಬನೆಗಾಗಿ ನಮ್ಮ ಎನ್ ಜಿ ಒ ಸರ್ಕಾರ ಹಾಗು ಖಾಸಗಿ ವಲಯ ಸಂಘ ಸಂಸ್ಥೆ ಮತ್ತು ಸಮಾನ ಮನಸ್ಕ‌‌ಜನರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವ ಅಭಿಲಾಷೆ ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಸೊಮನಹಳ್ಳಿ ಎಜುಕೇಷನ್ ಸೊಸೈಟಿ ಜಿ.ಸಿ‌ಮೊಹನ್, ಕೃಷಿಕ ಸ್ವಾವಲಂಬಿ ಸಂಘದ ಸಿ.ಪುಟ್ಟಸ್ವಾಮಿ, ಗ್ರಾಮ ಸ್ವರಾಜ್ ಫೌಂಡೇಷನ್ ಉಪಾಧ್ಯಕ್ಷ ನಂಜನಗೂಡು ಬಸವರಾಜ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬಡಗನ್ನೂರು, ಸಹಕಾರ್ಯದರ್ಶಿ ಹಾಸನ ದಿನೇಶ್, ತುಮಕೂರು ಬಿ.ವಿ.ರಘುನಾಥ್, ಸುಲೊಚನ ಅಕ್ಕಾ, ವಿಜಯನಗರ ಮೀರಾಬಾಯಿ, ಚಾಮರಾಜನಗರ ಎನ್ರೀಚ್ ಮಹದೇವಸ್ವಾಮಿ, ಬಸವಣ್ಣ, ದಾವಣಗೆರೆ ವಿನುತಾ, ವನಿತಾ, ಚಿತ್ರದುರ್ಗ ದಿನೇಶ್, ಕೆ.ರವಿಕುಮಾರ್, ಎಂ.ಇ‌.ಕೃಷ್ಣ, ಅಬ್ದುಲ್ಲಾ, ಹಾವೇರಿ ಶಿವಕುಮಾರ್, ಮಳವಳ್ಳಿ ಎ.ಬಿ.ಚೇತನಕುಮಾರ, ವಿಷಕಂಠ, ಮರಿಸ್ವಾಮಿ, ಬಲರಾಮು, ಹುರುಗಲವಾಡಿ ರಾಮಯ್ಯ, ಮಂಜುಳ ಸೇರಿದಂತೆ ಹಲವರು ಇದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಆಚರಿಸಲಿ
ಮಕ್ಕಳಿಗೆ ಪರಿಸರ ಸಂರಕ್ಷಣೆ ಪಾಠ ಬಹುಮುಖ್ಯ: ವೈ.ಕೆ.ತಿಮ್ಮೇಗೌಡ