ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವಾಗಲಿ

KannadaprabhaNewsNetwork |  
Published : Dec 31, 2024, 01:02 AM IST
ಫೋಟೋ- ಕಮಲಾಪುರ ಮುದ್ದಣ ಜಯಂತ | Kannada Prabha

ಸಾರಾಂಶ

ರೈತ ದೇಶದ ಬೆನ್ನುಲುಬು. ಆತನ ಫಸಲಿಗೆ ಯೋಗ್ಯ ಬೆಲೆ, ಗೌರವ ದೊರೆಯಬೇಕು. ರೈತನ ಬದುಕು ಹಸನಾಗಬೇಕು. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಪ್ರಯತ್ನ ಮಾಡಬಾರದು. ಸಮಾಜ, ಸರ್ಕಾರ ರೈತರಲ್ಲಿ ಆತ್ಮವಿಶ್ವಾಸ ತುಂಬಿ, ಗೌರವಿಸುವ ಕಾರ್ಯವಾಗಬೇಕಾಗಿದೆ ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಅಭಿಪ್ರಾಯಪಟ್ಟರು.

ಮಹಾಗಾಂವನಲ್ಲಿ ಎಳ್ಳ ಅಮವಾಸ್ಯೆ, ಶರಣ ಒಕ್ಕಲಿಗ ಮುದ್ದಣ್ಣ ಜಯಂತಿ, ಪ್ರಗತಿಪರ ರೈತರಿಗೆ ಸತ್ಕಾರಕನ್ನಡ ಪ್ರಭ ವಾರ್ತೆ ಕಮಲಾಪುರ ರೈತ ದೇಶದ ಬೆನ್ನುಲುಬು. ಆತನ ಫಸಲಿಗೆ ಯೋಗ್ಯ ಬೆಲೆ, ಗೌರವ ದೊರೆಯಬೇಕು. ರೈತನ ಬದುಕು ಹಸನಾಗಬೇಕು. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಪ್ರಯತ್ನ ಮಾಡಬಾರದು. ಸಮಾಜ, ಸರ್ಕಾರ ರೈತರಲ್ಲಿ ಆತ್ಮವಿಶ್ವಾಸ ತುಂಬಿ, ಗೌರವಿಸುವ ಕಾರ್ಯವಾಗಬೇಕಾಗಿದೆ ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಅಭಿಪ್ರಾಯಪಟ್ಟರು.ತಾಲೂಕಿನ ಮಹಾಗಾಂವ ಗ್ರಾಮದ ಅಯ್ಯಪ್ಪ ಕಮಠಾಣ ಅವರ ಹೊಲದಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ಎಳ್ಳ ಅಮವಾಸ್ಯೆ, ಶರಣ ಒಕ್ಕಲಿಗ ಮುದ್ದಣ್ಣನವರ ಜಯಂತಿ ಮತ್ತು ಪ್ರಗತಿಪರ ರೈತರಿಗೆ ಸತ್ಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣ ಒಕ್ಕಲಿಗ ಮುದ್ದಣ್ಣನವರು ಬಸವಾದಿ ಶರಣರಲ್ಲಿ ಒಬ್ಬರಾಗಿದ್ದು, ಕೃಷಿ ಕಾಯಕದ ಮಹತ್ವವನ್ನು ನೂರಾರು ವರ್ಷಗಳ ಹಿಂದೆಯೇ ಸಾರಿದ್ದಾರೆ. ‘ಕಾಮಭೀಮ ಜೀವಧನದೊಡೆಯ’ ಎಂಬ ಅಂಕಿತದೊಂದಿಗೆ ವಚನಗಳನ್ನು ರಚಿಸಿದ್ದು 12 ವಚನಗಳು ಲಭ್ಯವಾಗಿವೆ. ಅದರಲ್ಲಿ ಅವರು ರೈತನ ಕಾಯಕ, ದಾಸೋಹ, ನಿಸ್ವಾರ್ಥ ಸೇವೆಯ ಬಗ್ಗೆ ಮನೋಜ್ಞವಾಗಿ ವಿವರಿಸಿದ್ದಾರೆ. ಇಂಥ ಮಹನೀಯರ ಜಯಂತಿಗಳನ್ನು ಆಚರಿಸುವ ಮೂಲಕ ಬಳಗವು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಭೂಮಿಯನ್ನು ತಾಯಿಯ ಸ್ವರೂಪದಲ್ಲಿ ಕಾಣುತ್ತಾರೆ. ಅವರು ಸಸ್ಯಜೀವಿಗಳೊಂದಿಗೆ ಅವಿನಾಭಾವ ಸಂಬಧ ಹೊಂದಿದ್ದು, ಭೂತಾಯಿಯನ್ನು ಆರಾಧಿಸಿ, ಹೊಲದಲ್ಲಿ ಸಾಮೂಹಿಕ ಪೂಜೆ ಮತ್ತು ಭೋಜನ ಮಾಡುವುದು, ಬೆಳೆಗೆ ನಮಿಸಿ, ಫಸಲು ಉತ್ತಮವಾಗಿ ಬರಬೆಕು ಎಂದು ಪ್ರಾರ್ಥಿನೆ ಮಾಡುವ ಸಂಕೇತದ ಉತ್ತರ ಕರ್ನಾಟಕ ಪ್ರಮುಖ ರೈತರ ಎಳ್ಳ ಅಮವಾಸ್ಯೆಯಾಗಿದೆ ಎಂದರು.

ಕುಟುಂಬದ ಸದಸ್ಯರು, ಸ್ನೇಹಿತರು, ಬಂಧು-ಬಾಧವರನ್ನು ತಮ್ಮ ಹೊಲಕ್ಕೆ ಕರೆದುಕೊಂಡು ಹೋಗಿ ಚರಗವನ್ನು ಚೆಲ್ಲಲಾಗುತ್ತದೆ. ಇದರಿಂದ ಹಕ್ಕಿಗಳು ಆಹಾರವನ್ನು ಸೇವಿಸಲು ಆಗಮಿಸಿ, ಅದರ ಜೊತೆಗೆ ಹುಳ-ಹುಪ್ಪಡಿಗಳನ್ನು ಸೇವಿಸಿ ರೈತರಿಗೆ ಅನಕೂಲ ಮಾಡಿಕೊಡುತ್ತವೆ. ಸಾಮೂಹಿಕವಾಗಿ ಭೋಜನ ಸವಿಯಲಾಗುತ್ತೆದೆ. ಎಳ್ಳ ಅಮವಾಸ್ಯೆ ನಂತರ ಚಳಿಯು ಕಡಿಮೆಯಾಗುತ್ತಾ ಹೋಗಿ ಎಳ್ಳಕಾಳಿನಷ್ಟು ಬಿಸಿಲು ಹೆಚ್ಚಾಗುತ್ತಾ ಹೋಗುತ್ತದೆ ಎಂಬುವದರಿದ ಇದಕ್ಕೆ ‘ಎಳ್ಳ ಅಮವಾಸ್ಯೆ’ ಎಂದು ಹೆಸರು ಪಡೆದಿದೆ. ರೈತರು ಬೆಳೆದ ಉತ್ತಮ ಬೆಲೆ ದೊರೆತು ಅವರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದರು.

ಕಮಲಾಪುರ ಕಸಾಪ ತಾಲೂಕಾಧ್ಯಕ್ಷ ಸುರೇಶ ಲೇಂಗಟಿ ಮಾತನಾಡಿದರು. ರೈತರಾದ ಮಾಣಿಕ ಕಮಠಾಣ, ಮಲ್ಲಿಕಾರ್ಜುನ ಹೀರಾಪೂರ, ಸಾತಮ್ಮ ಕೆ.ಜಯಶ್ರೀ ಎಚ್.ಅವರಿಗೆ ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಅಯ್ಯಪ್ಪ ಕಮಠಾಣ, ಶರಣು ಎ. ಕಮಠಾಣ, ಸುಮಿತ್ರಾಬಾಯಿ ಕಮಠಾಣ, ಚನ್ನವೀರ ಮಾಂಗ, ನಿಜದೇವಿ, ಪೂಜಾ ಕೆ.ಲೇಂಗಟಿ, ಚಂದ್ರಕಲಾ, ಸೂರ್ಯಕಾಂತ ಯಳವಂತಗಿ, ಬಸವಪ್ರಭು ಜಿ.ಮುಡಬಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದಲ್ಲಿ 70 ದಿನಕ್ಕೆ ಆಗವಷ್ಟು ತೈಲ ದಾಸ್ತಾನು ಇದೆ: ಜೋಶಿ
ಹೋಳಿ ಸಂಭ್ರಮದಲ್ಲಿ ಮಿಂದೆದ್ದ ಬೆಂಗಳೂರಿನ ಯುವ ಸಮೂಹ