ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವಾಗಲಿ

KannadaprabhaNewsNetwork |  
Published : Jul 16, 2026, 02:45 AM IST
ಯಲಬುರ್ಗಾದಲ್ಲಿ ಜನನಿ ಗ್ರುಪ್ ಆಫ್ ಇನ್ಸ್ಟಿಟ್ಯೂಟ್‌ನಿಂದ ರಂಗಭೂಮಿ ಕಲಾವಿದೆ ರೇಣುಕಾ ಬಾದಾಮಿ ಅವರಿಗೆ ರಾಜ್ಯಮಟ್ಟದ ಚಾಲುಕ್ಯ ನಾಡಿನ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ರಂಗಭೂಮಿ‌ ಕಲಾವಿದೆ ರೇಣುಕಾ ಬಾದಾಮಿ ಅವರು, ನಿಜಕ್ಕೂ ಕಲೆಗೆ ಜೀವ ತುಂಬುವ ಮೂಲಕ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ

ಯಲಬುರ್ಗಾ: ರಂಗಭೂಮಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು ಎಂದು ಅಪರ ಸರ್ಕಾರಿ ವಕೀಲ ಹಾಗೂ ರಂಗಭೂಮಿ ಹಿರಿಯ ಕಲಾವಿದ ಮಲ್ಲನಗೌಡ ಪಾಟೀಲ್ ಹೇಳಿದರು.

ಪಟ್ಟಣದ ಖಾಸಗಿ ಮಿಲ್‌ನಲ್ಲಿ ತರಲಕಟ್ಟಿ ಜನನಿ ಗ್ರುಪ್ ಆಫ್ ಇನ್ಸ್ಟಿಟ್ಯೂಟ್ ವತಿಯಿಂದ ಹಮ್ಮಿಕೊಂಡಿದ್ದ ರಂಗಭೂಮಿ ಕಲಾವಿದೆ ರೇಣುಕಾ ಬಾದಾಮಿ ಅವರಿಗೆ ರಾಜ್ಯಮಟ್ಟದ ಚಾಲುಕ್ಯ ನಾಡಿನ ಕಲಾ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.

ರಂಗಭೂಮಿ‌ ಕಲಾವಿದೆ ರೇಣುಕಾ ಬಾದಾಮಿ ಅವರು, ನಿಜಕ್ಕೂ ಕಲೆಗೆ ಜೀವ ತುಂಬುವ ಮೂಲಕ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.ಈ ನಿಟ್ಟಿನಲ್ಲಿ ಇವರ ಕಲಾ ಸೇವೆ ಜನನಿ ಗ್ರುಪ್ ಆಫ್ ಇನ್ಸ್ಟಿಟ್ಯೂಟ್‌ನವರು ಗುರುತಿಸಿ ಚಾಲುಕ್ಯ ನಾಡಿನ ಕಲಾ ರತ್ನ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದರು.

ಕಲಾರತ್ನ ಪ್ರಶಸ್ತಿ ಸ್ವೀಕರಿಸಿ ರೇಣುಕಾ ಬಾದಾಮಿ ಮಾತನಾಡಿ, ನನ್ನಲ್ಲಿರುವ ಕಲಾ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ ನೀಡಿರುವ ಕಲಾರತ್ನ ಪ್ರಶಸ್ತಿ ತುಂಬು ಹೃದಯದಿಂದ ಸ್ವೀಕರಿಸುತ್ತೇನೆ. ಕಲೆ ಉಳಿಸುವ ಜತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಎಲ್ಲರಿಂದ ಆಗಬೇಕು ಎಂದರು.

ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ರಂಗನಾಥ ವಲ್ಮಕೊಂಡಿ, ಪ್ರಾಣೇಶ ವಲ್ಮಕೊಂಡಿ, ಲೋಕೇಶ ಲಮಾಣಿ, ಶರಣಪ್ಪ ಅರಕೇರಿ, ಮಲ್ಲಿಕಾರ್ಜುನ ಶಾಸ್ತ್ರೀಮಠ, ಕಳಕೇಶ ಅರಕೇರಿ, ಸಂಗಪ್ಪ ರಾಮತ್ನಾಳ, ಮಂಜುನಾಥ ಅಧಿಕಾರಿ, ಮರಿಗೌಡ ಗೌಡ್ರ ಸೇರಿದಂತೆ ಅನೇಕ ಕಲಾವಿದರು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆಯ ವಸ್ತು ಸ್ಥಿತಿ, ಮಳೆಯ ಪ್ರಮಾಣ ಅರಿತು ಸರ್ಕಾರಕ್ಕೆ ವರದಿ: ಡಿಸಿ
ಬೈಕ್‌ಗೆ ಲಾರಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು