ಹಳ್ಳಿಯ ಮನೆ ಮನೆಗಳಲ್ಲಿ ಕನ್ನಡದ ಹಬ್ಬ ನಡೆಯಲಿ: ರವಿ ದಳವಾಯಿ

KannadaprabhaNewsNetwork | Published : Nov 30, 2024 12:47 AM

ಸಾರಾಂಶ

ತರೀಕೆರೆ, ಸುವರ್ಣ ನುಡಿ ಸಂಭ್ರಮ 50ರ ದಶಕದ ಹೊತ್ತಿನಲ್ಲಿ ಇಡೀ ರಾಜ್ಯ ಸಂಭ್ರಮ ಪಡುತ್ತಿರುವ ರೀತಿಯಲ್ಲಿ ಹಳ್ಳಿಯ ಮನೆ ಮನೆ ಗಳಲ್ಲಿ ಕನ್ನಡದ ಹಬ್ಬ ವಿಜೃಂಭಣೆಯಿಂದ ನಡೆಯಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿ ದಳವಾಯಿ ಹೇಳಿದರು.

ಲಿಂಗದಹಳ್ಳಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಸೇವಾ ದೀಕ್ಷೆ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಸುವರ್ಣ ನುಡಿ ಸಂಭ್ರಮ 50ರ ದಶಕದ ಹೊತ್ತಿನಲ್ಲಿ ಇಡೀ ರಾಜ್ಯ ಸಂಭ್ರಮ ಪಡುತ್ತಿರುವ ರೀತಿಯಲ್ಲಿ ಹಳ್ಳಿಯ ಮನೆ ಮನೆ ಗಳಲ್ಲಿ ಕನ್ನಡದ ಹಬ್ಬ ವಿಜೃಂಭಣೆಯಿಂದ ನಡೆಯಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿ ದಳವಾಯಿ ಹೇಳಿದರು.

ತಾಲೂಕು ಕಾಸಾಪದಿಂದ ಲಿಂಗದಹಳ್ಳಿಯಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಸೇವಾ ದೀಕ್ಷೆ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು,

ಸಭೆ ಸಮಾರಂಭ, ವಿಚಾರಗೋಷ್ಠಿ ತರಹ ಚರ್ಚೆ ನಡೆಯಬೇಕು. ವಿಚಾರ ಮಂಥನ, ತರ್ಕಬದ್ಧ ವಾದಗಳು ನಡೆದಾಗ ಮಾತ್ರ ಕನ್ನಡ ಶ್ರೀಮಂತವಾಗುತ್ತದೆ. ಗಡಿ ಭಾಗದಲ್ಲಿ ಕನ್ನಡ ಕಟ್ಟುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು ಅಲ್ಲಿಯ ಸ್ಥಿತಿ ಬಹಳ ಶೋಚನೀಯವಾಗಿದೆ. ಬೇರೆ ಭಾಷೆಗಳ ಪ್ರಭಾವ ಬಹಳಷ್ಟು ಇದ್ದರೂ ಕನ್ನಡದ ಅಸ್ತಿತ್ವ ಉಳಿಸಿ ಕೊಳ್ಳಲು ಹೋರಾಡಲಾಗುತ್ತಿದೆ ಎಂದು ಹೇಳಿದರು.

ಮೈಸೂರು ಕರ್ನಾಟಕ ಎಂದು ನಾಮಕರಣಗೊಂಡು ಇಂದಿಗೆ 50 ವರ್ಷ. ಈ ಸಂಭ್ರಮದಲ್ಲಿ ಇಡೀ ರಾಜ್ಯಾದ್ಯಂತ ನುಡಿ ಜಾತ್ರೆ ಎಂಬ ತೇರು ಸಾಗಿತ್ತು. ಅದನ್ನು ತರೀಕೆರೆಯಲ್ಲೂ ಅದ್ಧೂರಿಯಾಗಿ ಬರಮಾಡಿಕೊಂಡು ರಾಜ್ಯೋತ್ಸವ ಆಚರಿಸ ಲಾಯಿತು. ಕರ್ನಾಟಕದಲ್ಲಿ ಕನ್ನಡಿಗನೇ ಸರ್ವಭೌಮ ವಿಚಾರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಇಂದಿಗೆ ನೂರಾ ಒಂಭತ್ತು ವರ್ಷ ಆಗಿದ್ದರೂ ನಿರಂತರವಾಗಿ ಕನ್ನಡದ ಬಗ್ಗೆ ಕನ್ನಡ ನೆಲ ಜಲಗಳ ಬಗ್ಗೆ ಭಾಷೆಯ ಬಗ್ಗೆ ದುಡಿಯುತ್ತಾ ಬಂದಿದೆ. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ . ಎಂ. ವಿಶ್ವೇಶ್ವರಯ್ಯ ಅಂಥಹ ಮಹನೀಯರು ಹಾಕಿಕೊಟ್ಟ ಬುನಾದಿ ಯಂತೆ ಕನ್ನಡಕ್ಕಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು.ಲಿಂಗದಹಳ್ಳಿ ಹೋಬಳಿ ಅಧ್ಯಕ್ಷರಾಗಿ ಆಯ್ಕೆಯಾದ ತಮ್ಮಯ್ಯ ನವರಿಗೆ ಅಭಿನಂದಿಸಿ ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಘಟಕಗಳನ್ನು ಆರಂಭಿಸಿ ಎಲ್ಲಾ ಪದಾಧಿಕಾರಿಗಳನ್ನು ಸಂಘಟಿಸಿ ಕನ್ನಡ ಕಟ್ಟುವ ಕೆಲಸ ನಿರಂತರವಾಗಿ ನಡೆಯಬೇಕು ಎಂದರು.ದೈಹಿಕ ಶಿಕ್ಷಕ ಚಂದ್ರಶೇಖರ್ ಮಾತನಾಡಿ ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ನಮ್ಮ ಕನ್ನಡದ ಕಥೆ ವ್ಯಥೆ ವ್ಯಕ್ತವಾಗುತ್ತದೆ. ಹಿಂದೆ ಮಹಾರಾಷ್ಟ್ರದ ಸೋಲಾಪುರ ಕರ್ನಾಟಕದ ಒಂದು ಭಾಗವಾಗಿದ್ದು ಇಂದಿಗೂ ಅಲ್ಲಿ ಕನ್ನಡ ಮಾತನಾಡುವವರು ಅತಿ ಹೆಚ್ಚು ಜನರಿದ್ದಾರೆ. ಕನ್ನಡ ಭಾಷೆ ಮಾತಾನಾಡುವವರು ಗೋದಾವರಿಯಿಂದ ಕಾವೇರಿಯವರಿಗೆ ಇದ್ದರು ಎಂಬುದು ಉಲ್ಲೇಖವಾಗಿದ್ದರು ಗೋದಾವರಿಯ ಕೆಲ ಬಾಗಗಳನ್ನು ನಾವು ಕಳೆದುಕೊಂಡಿದ್ದು ಇಂದಿಗೂ ಅಲ್ಲಿ ಕನ್ನಡ ಮಾತನಾಡು ವವರು ಹೆಚ್ಚಾಗಿದ್ದಾರೆ. ಕವಿರಾಜ ಮಾರ್ಗದ ಕಾಲದಲ್ಲಿ ಕನ್ನಡ ಅಷ್ಟು ಪ್ರಚಲಿತವಾಗಿತ್ತು ಎಂದು ಹೇಳಿದರು. ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಜಗದೀಶ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ. ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ತಾಲೂಕು ಪರಿಷತ್ತು ಮಾಡಿಕೊಂಡು ಬರುತ್ತಿದೆ. ನಾನು ಸಹ ಇದೇ ರೀತಿ ಸಂಘಟನೆಯಲ್ಲಿ ತೊಡಗಿ ಕನ್ನಡ ರಾಜ್ಯೋತ್ಸವಗಳ ಮೂಲಕ ಇಂದು ಎಲ್ಲಾ ಹಳ್ಳಿಗಳಲ್ಲೂ ನಿರಂತರವಾಗಿ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು. ಕನ್ನಡ ವಿಚಾರವಾಗಿ ಕಲೆ ಸಾಹಿತ್ಯ ಸಂಸ್ಕೃತಿ ತಿಳಿಸುವ ನಿಟ್ಟಿನಲ್ಲಿ ಉಪನ್ಯಾಸಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ಲಿಂಗದಳ್ಳಿ ಹೋಬಳಿಯಲ್ಲಿ ಅನ್ಯ ಧರ್ಮೀಯರಿದ್ದರು ಕನ್ನಡಕ್ಕಾಗಿ ಆಟೋ ಸಂಘದವರು, ಹಮಾಲಿ ಸಂಘದವರು, ಹಲೋ ಸಂಘಟನೆ ಸಂಗಡಿಗರು ಕನ್ನಡ ರಾಜ್ಯೋತ್ಸವಗಳ ಮೂಲಕ ಕನ್ನಡ ನಿತ್ಯೋತ್ಸವ ಆಚರಿಸುತ್ತಿ ದ್ದಾರೆ ಎಂದು ಹೇಳಿದರು. ಇಮ್ರಾನ್ ಅಹಮದ್ ಬೇಗ್ ಪ್ರತಿಜ್ಞಾವಿಧಿ ಬೋಧಿಸಿದರು. ಕರ್ನಲ್ ಚಂದ್ರಯ್ಯ. ಕುಮಾರಸ್ವಾಮಿ ಸೈನಿಕರಿಗೆ ಗೌರವ ಸಮರ್ಪಿಸಲಾಯಿತು.

ಬಿ. ಆರ್. ರವಿ. ಗೋಪಾಲಕೃಷ್ಣ. ಎಂ.ಬಿ ರಾಮಚಂದ್ರಪ್ಪ. ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲ ಸೋಮಶೇಖರ್, ರಮೇಶ್. ಭರತ್ ನೂತನ ಅಧ್ಯಕ್ಷ ತಮ್ಮಯ್ಯ ಮಾತನಾಡಿದರು. ಪತ್ರಕರ್ತ ರಮೇಶ್. ಲೇಖಕ ತ.ಮ. ದೇವಾನಂದ್, ನಾಗೇಶಪ್ಪ. ಗಿರೀಶ್ , ಕಿರಣ್ ಗೌಡ. ಪರಮೇಶ್ವರಪ್ಪ ಉಪಸ್ಥಿತರಿದ್ದರು.29ಕೆಟಿಆರ್.ಕೆ.2ಃ

ತರೀಕೆರೆಯ ಲಿಂಗದಹಳ್ಳಿಯಲ್ಲಿ ನಡೆದ ಸೇವಾ ದೀಕ್ಷೆ ಸಮಾರಂಭದಲ್ಲಿ ತಾ.ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ, ಲಿಂಗದಹಳ್ಳಿ ಹೋಬಳಿ ಕಸಾಪ ಅಧ್ಯಕ್ಷ ತಮ್ಮಯ್ಯ, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಜಗದೀಶ್ ಮತ್ತಿತರರು ಇದ್ದರು.

Share this article