ಕೊಪ್ಪಳ: ನಾವು ನಮ್ಮ ಬದುಕನ್ನು ಸ್ವಾರ್ಥದಿಂದ ಕಟ್ಟಿ ಹಾಕದೇ, ನಮ್ಮ ಕುಟುಂಬ, ಸಮಾಜ ಮತ್ತು ಇತರರ ಹಿತಕ್ಕಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುಂಡರಗಿಯ ಶ್ರೀಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು.
ಪರೋಪಕಾರಂ ಇದಂ ಶರೀರಂ ಬದುಕಿನ ಸಾರ್ಥಕತೆ ಅಡಗಿರುವುದೇ ಇತರರ ಸೇವೆಯಲ್ಲಿ ಕನಿಷ್ಠ ನಮಗಾಗಿ ಮತ್ತು ನಮ್ಮವರಿಗಾಗಿ ಜೊತೆಯಲ್ಲಿ ಇತರರಿಗಾಗಿ ಎಂಬುದು ಹೆಚ್ಚು ಅರ್ಥಪೂರ್ಣ ಎನಿಸುತ್ತದೆ, ಮನುಷ್ಯ ಇತರರ ಒಳ್ಳೆಯದಕ್ಕಾಗಿ ಎಷ್ಟು ದುಡಿಯುತ್ತಾನೋ ಅಷ್ಟು ದೊಡ್ಡ ವ್ಯಕ್ತಿಯಾಗುತ್ತಾನೆ ಎಂದು -ಮಹಾತ್ಮ ಗಾಂಧೀಜಿ ಹೇಳಿದ್ದಾರೆ, ಗೌತಮ ಬುದ್ಧ, ಮಹಾವೀರ, ಬಸವಣ್ಣ, ವಿವೇಕಾನಂದ, ಬಾಬಾ ಸಾಹೇಬ್ ಅಂಬೇಡ್ಕರ್ ಮುಂತಾದ ಅನೇಕ ಮಹಾತ್ಮರು ತಮ್ಮ ಮನೆಯವರಿಗಾಗಿ ಹೆಚ್ಚಾಗಿ ಏನನ್ನೂ ಮಾಡಲಿಲ್ಲ. ಆದರೆ ನಾವುಗಳು ಮತ್ತು ಇಡೀ ದೇಶ ಈಗಲೂ ಅವರನ್ನು ನೆನಪಿಸಿಕೊಳ್ಳುತ್ತದೆ ಮತ್ತು ಅವರ ಜನ್ಮದಿನವನ್ನು ಅತ್ಯಂತ ಅಭಿಮಾನದಿಂದ ಆಚರಿಸಲಾಗುತ್ತದೆ ಆದ್ದರಿಂದ ಈ ಬದುಕು ಸಮಾಜಮುಖಿಯಾಗಿರಬೇಕು ಹಾಗೂ ಕುಕನೂರಿನ ಶ್ರೀಗಳ ಕಾರ್ಯಶೀಲತೆ ಶ್ಲಾಘನೀಯ ಅವರಲ್ಲಿರುವ ಗುರುಭಕ್ತಿ ದೊಡ್ಡದು ಎಂದರು.
ಮಹಾದೇವ ಸ್ವಾಮೀಜಿ ಮಾತನಾಡಿ, ಗುರುವಿನ ಮಹಿಮೆ ಅಪಾರ ಏಕೆಂದರೆ ಅವರು ಜ್ಞಾನ ಹಂಚುವ, ಅಜ್ಞಾನ ನಿವಾರಿಸುವ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಶಕ್ತಿಯಾಗಿದ್ದಾರೆ. ಗುರುವು ಶಿಷ್ಯನ ಭವಿಷ್ಯ ರೂಪಿಸುವ ಸೃಷ್ಟಿಕರ್ತ, ತತ್ವ ನೀಡುವ ಮಾರ್ಗದರ್ಶಕ ಮತ್ತು ತಪ್ಪುಗಳಿಂದ ಸರಿಪಡಿಸುವ ಶ್ರೇಷ್ಠ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಗುರುವಿನ ಮಹಿಮೆಯನ್ನು ಹರ ಮುನಿದರೆ ಗುರು ಕಾಯುವನು, ಗುರು ಮುನಿದರೆ ಯಾರು ಕಾಯುವರು? ಎಂಬ ಮಾತಿನಿಂದ ತಿಳಿಯಬಹುದು ಇಂತಹ ಶ್ರೇಷ್ಠ ಗುರುಗಳಾದ ಮಂಡರಗಿ ಶ್ರೀ ಜಗದ್ಗುರುಗಳನ್ನ ಪಡೆದ ನಾವೇ ದನ್ಯರು ಎಂದರು.ಈ ಸಂದರ್ಭದಲ್ಲಿ ಬೆಟಗೇರಿ ಗ್ರಾಮದ ಸಮಸ್ತ ಸದ್ಭಕ್ತರು ಮುಂಡರಗಿಯ ವಿದ್ಯಾಸಮಿಯ ಶತಮಾನೋತ್ಸವಕ್ಕೆ 51 ಸಾವಿರ ದೇಣಿಗೆ ನೀಡಿ ಗುರುವಂದನೆ ಸಲ್ಲಿಸಿದರು.
ಬಸವರಾಜ ಬಳ್ಳೊಳ್ಳಿ, ರಮೇಶ ಹಟ್ಟಿ, ವಿರೇಶ ಸಜ್ಜನ, ಗುರುಬಸಯ್ಯ ಬೃಹನ್ಮಠ, ಸೋಮಪ್ಪ ಮತ್ತೂರು, ಪ್ರಭು ಶಿವಸಿಂಪರ, ರಾಜೇಂದ್ರಪ್ಪ ಕಡಹಳ್ಳಿ, ಮುತ್ತಯ್ಯ ಹಿರೇಮಠ, ಸೋಮಣ್ಣ ಅರಕೇರಿ, ಬಸವರಾಜ ನಾಗರೆಡ್ಡಿ, ಯಮನೂರಪ್ಪ, ವಿಜಯ, ನಾರಾಯಣಪ್ಪ, ಬಾಬುಸಾಬ್ ಮತ್ತು ಇತರರು ಇದ್ದರು.