ಕನ್ನಡಪ್ರಭ ವಾರ್ತೆ ಕಾರ್ಕಳ
ಅವರು ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ವತಿಯಿಂದ ಬೈಲೂರಿನ ಮಾರಿಗುಡಿ ಸಭಾಂಗಣದಲ್ಲಿ ಶನಿವಾರ ನಡೆದ ಪರಶುರಾಮನ ನೈಜ ಕಂಚಿನ ಪ್ರತಿಮೆ ನಿರ್ಮಾಣಕ್ಕಾಗಿ ಸಂಕಲ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ, ಕಾರ್ಕಳಕ್ಕೆ ಸುನಿಲ್ ಕುಮಾರ್ ಬಂದ ಬಳಿಕ ಕಾರ್ಕಳದಲ್ಲಿ ರಾಜಕೀಯ ದ್ವೇಷ ಹುಟ್ಟಿದೆ. ಸರ್ಕಾರದಿಂದ ತಿರಸ್ಕಾರವಾದ ಪ್ರಸ್ತಾವನೆಗೆ ಯಾವ ಮುಖವಿಟ್ಟುಕೊಂಡು ಅನುದಾನ ಕೇಳುತ್ತಾರೆ? ರಾಜಕೀಯ ಲಾಭಕ್ಕಾಗಿ ಚುನಾವಣೆ ದೃಷ್ಟಿ ಮುಂದಿಟ್ಟು ಗೆಲ್ಲಲು ಪರಶುರಾಮ ಮೂರ್ತಿ ನಿರ್ಮಾಣ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಳ್ಳಲಿ ಎಂದು ಆಗ್ರಹಿಸಿದರು.ಸಭೆಯಲ್ಲಿ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ನೀರೆ ಕೃಷ್ಣ ಶೆಟ್ಟಿ, ಜ್ಯೋತಿ ಹೆಬ್ಬಾರ್, ಸುನಂದಾ ನಾಯಕ್, ಸದಾಶಿವ ದೇವಾಡಿಗ, ಆಶಾ ಬೈಲೂರು, ಪ್ರದೀಪ್ ಕುಮಾರ್ ಯರ್ಲಪಾಡಿ, ಸುಬೀತ್ ಎನ್.ಆರ್., ರಮೇಶ್ ಕಾಂಚನ್, ಸುರೇಂದ್ರ ಶೆಟ್ಟಿ, ವಿಶ್ವಾಸ್, ರಮಾನಂದ ಪೈ, ಭೋಜ ಶೆಟ್ಟಿ ಯರ್ಲಪಾಡಿ, ನಿತಿನ್ ಮತ್ತಿತರಿದ್ದರು. ಸುಭದ ರಾವ್ ಕಾರ್ಯಕ್ರಮ ನಿರೂಪಿಸಿದರು.