‘ನಮ್ಮೂರಿಗೆ ನಮ್ಮ ಶಾಸಕ’ ಸಭೆಗೆ ಸಂಸದರೂ ಬರಲಿ

KannadaprabhaNewsNetwork |  
Published : Jun 21, 2025, 12:49 AM ISTUpdated : Jun 21, 2025, 12:35 PM IST
ಸಿಕೆಬಿ-3 ತಾಲ್ಲೂಕಿನ ಗೊಂಗಡಿಪುರ ಗ್ರಾಮದಲ್ಲಿ ಕೆಳಗೆ ಕುಳಿತು ಗ್ರಾಮಸ್ಥರ ಅಹವಾಲು ಪರಿಶೀಲಿಸುತ್ತಿರುವ ಶಾಸಕ ಪ್ರದೀಪ್ ಈಶ್ವರ್ | Kannada Prabha

ಸಾರಾಂಶ

ಕ್ಷೇತ್ರದ ಜನತಯೆ ಸಮಸ್ಯೆಗಳನ್ನು ಪರಿಹರಿಸಲು ನಡೆಸುತ್ತಿರುವ ನಮ್ಮೊರಿಗೆ ನಮ್ಮ ಶಾಸಕ ಕಾರ್ಯಕ್ರಮಕ್ಕೆ ನಮ್ಮ ಜೊತೆ ಬನ್ನಿ ಮೆಚ್ಚುಗೆ ವ್ಯಕ್ತಪಡಿಸಿ ನಾನು ನಿಮ್ಮ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ  ಎಂದಿದ್ದಾರೆ ಶಾಸಕ ಪ್ರದೀಪ್‌ ಈಶ್ವರ್

 ಚಿಕ್ಕಬಳ್ಳಾಪುರ : ಸಂಸದ ಡಾ.ಕೆ.ಸುಧಾಕರ್ ಅವರೇ ದಯವಿಟ್ಟು ‘ನಮ್ಮೊರಿಗೆ ನಮ್ಮ ಶಾಸಕ’ ಕಾರ್ಯಕ್ರಮಕ್ಕೆ ತಾವು ನನ್ನ ಜೊತೆ ಬನ್ನಿ ಇಬ್ಬರು ಒಂದೇ ಚಾಪೇಮೇಲೆ ಕುಳಿತು ಜನರ ಸಮಸ್ಯೆ ಕೇಳಿ ಪರಿಹಾರ ಕಲ್ಪಿಸಸೂಣ ಎಂದು ಶಾಸಕ ಪ್ರದೀಪ್ ಈಶ್ವರ್ ಆಹ್ವಾನ ನೀಡಿದರು.

ಕಾರ್ಯಕ್ರಮದಡಿ ಶುಕ್ರವಾರ ತಾಲೂಕಿನ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೈಯೂರು,ಇಟ್ಟಪನಹಳ್ಳಿ ಮತ್ತು ಗೊಂಗಡಿಪುರ ಗ್ರಾಮಗಳಿಗೆ 36 ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಗ್ರಾಮದ ಜನತೆಯ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ದ್ವೇಷದ ರಾಜಕಾರಣ ಬೇಡ,

ಕ್ಷೇತ್ರದ ಜನತಯೆ ಸಮಸ್ಯೆಗಳನ್ನು ಪರಿಹರಿಸಲು ನಡೆಸುತ್ತಿರುವ ನಮ್ಮೊರಿಗೆ ನಮ್ಮ ಶಾಸಕ ಕಾರ್ಯಕ್ರಮಕ್ಕೆ ನಮ್ಮ ಜೊತೆ ಬನ್ನಿ ಮೆಚ್ಚುಗೆ ವ್ಯಕ್ತಪಡಿಸಿ ನಾನು ನಿಮ್ಮ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ದ್ವೇಶದ ರಾಜಕಾರಣ ಬೇಡ, ಬರುವುದಾದರೆ ತಿಳಿಸಿ ನಿಮಗೆ ಕುರ್ಚಿ, ಮಿನರಲ್ ವಾಟರ್ ವ್ಯವಸ್ಥೆ ಮಾಡಿಸುವೆ. ನಾನು ಬಡವ ಚಾಪೇಮೇಲೆ ಕುಳಿತು ಜನರ ಸಮಸ್ಯೆ ಕೇಳ್ತೀನಿ ಎಂದರು.

ಇನ್ನೂ ನಗರ ನಿವಾಸಿಗಳಿಗೆ ಬಿ ಖಾತೆ ನೀಡುವುದರಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಆರೋಪಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ನಗರಸಭೆ ಕಾರ್ಯಗಳಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಖಾತೆ ತಯಾರಿದ್ದರೇ ಅಧ್ಯಕ್ಷರು, ಪೌರಾಯುಕ್ತರು ವಿತರಿಸಲಿ, ಯಾವುದೋ ಕಾರಣಕ್ಕೆ ಪೌರಾಯುಕ್ತರ ಮೇಲೆ ಕೇಸು ದಾಖಲು ಮಾಡುತ್ತೇವೆ ಎಂದರೆ ಪೌರಾಯುಕ್ತರು ಏನು ಮಾಡಬೇಕು ಎಂದರು.

ಜು. 2ರಂದು ನಂದಿಯಲ್ಲಿ ಸಂಪುಟ ಸಭೆ

ಇನ್ನೂ ನಂದಿ ಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ಬಗ್ಗೆ ಮಾತನಾಡಿ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಚಿಕ್ಕಬಳ್ಳಾಪುರಕ್ಕೆ ಏನನ್ನೂ ಘೋಷಣೆ ಮಾಡಿಲ್ಲ ಎಂದರೆ ಜಿಲ್ಲೆಯ ಜನರಿಗೆ ಬೇಸರವಾಗುತ್ತೆ. ಹಾಗಾಗಿ ನಾವೆ ಖುದ್ದು ಸಭೆಯನ್ನು ಮುಂದೂಡಲು ಮನವಿ ಮಾಡಿದ್ದು, ಜುಲೈ 2 ರಂದು ನಂದಿ ಬೆಟ್ಟದಲ್ಲೇ ಸಚಿವ ಸಂಪುಟ ಸಭೆ ನಡೆಯಲಿದ್ದು ಚಿಕ್ಕಬಳ್ಳಾಪುರಕ್ಕೆ ಯೋಜನೆ ಹಾಗೂ ಅನುದಾನ ಘೋಷಣೆಯಾಗುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಮಸ್ಯೆ ಪರಿಹರಿಸಲು ಸೂಚನೆ

ವಿವಿಧ ಗ್ರಾಮಗಳಲ್ಲಿ ಜನತೆ ಚರಂಡಿ ಸಮಸ್ಯೆ, ರಸ್ತೆ ಸಮಸ್ಯೆ, ವಿದ್ಯುತ್ ದೀಪದ ಸಮಸ್ಯೆ, ಆರೋಗ್ಯ ಸಮಸ್ಯೆ, ಹೊಲಗಳಿಗೆ ತೆರಳುವ ರಸ್ತೆಯ ಸಮಸ್ಯೆ,ಜಾಗದ ಒತ್ತುವರಿ ತೆರವು, ಪಿಂಚಣಿ ಸೌಲಭ್ಯ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಶಾಸಕರ ಬಳಿ ಹೇಳಿಕೊಂಡಿದ್ದು ಜನರ ಸಮಸ್ಯೆಗಳನ್ನು ಅರಿತು ಅಲ್ಲೆ ಇದ್ದ ಅಧಿಕಾರಿಗಳಿಗೆ ಬಗೆಹರಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಈ ವೇಳೆ ತಾಲೂಕು ತಹಶೀಲ್ದಾರ್ ರಶ್ಮೀ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ಎಡಿಎಲ್ಆರ್ ವಿವೇಕ್ ಮಹದೇವ್,ತಾಲ್ಲೂಕು ಆರೋಗ್ಯಾಧಿಕಾರಿ, ಪಿಡಿಓ ಸತ್ಯಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್, ರಕ್ಷಿತ್ ರೆಡ್ಡಿ,ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ,ಟಿಎಪಿಸಿಎಂಎಸ್ ನಿರ್ದೇಶಕ ಬಿಸೇಗಾರಹಳ್ಳಿ ನಾಗೇಶ್,ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಮೀಮ್ ಮತ್ತಿತರರು ಇದ್ದರು.

PREV
Read more Articles on

Recommended Stories

ಕಾನೂನು ಮುಂದೆ ಎಲ್ಲರೂ ಒಂದೇ ಎಂದ ನಟಿ ರಮ್ಯಾ
ಬಂಧನಕ್ಕೂ ಮೊದಲು ಪತ್ನಿ,ಮಗನ ಭೇಟಿಯಾದ ದರ್ಶನ್‌