ಕನ್ನಡಪ್ರಭ ವಾರ್ತೆ ಅಮೀನಗಡ
ಈಗಿನ ಪ್ರಸ್ತುತ ಸನ್ನಿವೇಶಗಳನ್ನಾಧರಿಸಿ ಹೊಸ ಅಲೆಯ ನಾಟಕಗಳಿಂದ ಸಮಾಜವನ್ನು ತಿದ್ದುವ ಕಾರ್ಯವಾಗಬೇಕಿದೆ ಎಂದು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹೇಳಿದರು.ಸಮೀಪದ ಸೂಳೇಬಾವಿಯಲ್ಲಿ ಮನುಜಮತ ಫೌಂಡೇಶನ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ಶಕೀಲ ಅಹ್ಮದ ನಿರ್ದೇಶನದ ಜರ್ಮನ್ ದೇಶದ ಕಥೆ ಆಧಾರಿತ ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಟಕಗಳು ತಮ್ಮ ಆಂಗೀಕ ಅಭಿನಯಗಳ ಮೂಲಕ ಜನರನ್ನು ತಲಪುವ ಮಾಧ್ಯಮಗಳಾಗಿವೆ. ಸಾಮಾಜಿಕ ಸಮಸ್ಯೆಗಳು ಜನರನ್ನು ತಲಪುವಂತೆ ಮಾಡುತ್ತಿರುವುದ ಶ್ಲಾಘನೀಯ. ಹೊಸ ಕಲಾವಿದರು ಪ್ರಸ್ತುತ ಸಮಸ್ಯೆ ಆಧಾರಿತ ನಾಟಕಗಳು ಬರಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ರಾಜ್ಯದೇವಾಂಗ ಸಮಾಜದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಗ್ರಾಮೀಣ ಭಾಗದಲ್ಲಿ ಇಂಥಹ ನಾಟಕ ಪ್ರದರ್ಶನ ಸ್ವಾಗತಾರ್ಹ, ವಿಷಯಾಧಾರಿತ ನಾಟಕಗಳು ವಸ್ತು ಪ್ರಸ್ತುತ ವಿಷಯವಾಗಿರುತ್ತವೆ. ಇಂಥಹ ನಾಟಕಗಳು ದೈನಂದಿನ ಬದುಕಿಗೆ ಹತ್ತಿರವಾಗಿರುತ್ತವೆ ಎಂದರು. ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಮನುಜಮತ ಫೌಂಡೇಶನ್ ಅಧ್ಯಕ್ಷ ಪಾಂಡುರಂಗ ಮಾಶ್ಯಾಳ, ಕಸಾಪ ವಲಯ ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ನಿವೃತ್ತ ಉಪನ್ಯಾಸಕ ಅಶೋಕ ಚಿಕ್ಗಡೆ, ಕೆ.ಎಸ್.ರಾಮದುರ್ಗ, ನಾಗರಾಜ ಕಲಬುರ್ಗಿ, ಮಾನು ಹೊಸಮನಿ, ಮಹಾಂತೇಶ ಕಾಟಾಪುರ ಇದ್ದರು.ನಾಟಕ ಅಕಾಡೆಮಿ ಸದಸ್ಯ ಕೆ.ಎಸ್.ಬನ್ನಟ್ಟಿ, ರಂಗ ಸಮಾಜ ಸದಸ್ಯ ಮಹಾಂತೇಶ ಗಜೇಂದ್ರಗಡ, ಇಳಕಲ್ಲ ಕಸಾಪ ಅಧ್ಯಕ್ಷ ಮಹಾದೇವ ಕಂಬಾಗಿ, ಧುತ್ತರಗಿ ಟ್ರಸ್ಟ್ ನೂತನ ಸದಸ್ಯ ವಿಶ್ವನಾಥ ವಂಶಾಕೃತಮಠ, ಡಾ.ನಾಗರಾಜ ನಾಡಗೌಡ, ಚಿದಾನಂದ ಧೂಪದ, ಸುನಂದಾ ಕಂದಗಲ್, ಬಾಗಲಕೋಟೆ ವಕೀಲರ ಸಂಘದ ರಮೇಶ ಬದ್ನೂರ, ಸಾಹಿತಿ ಸಿದ್ದಲಿಂಗಪ್ಪ ಬೀಳಗಿರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಸಜ್ಜನ ಪ್ರಾಸ್ತಾವಿಕ ಮಾತನಾಡಿದರು. ಟಿ.ಬಿ.ಭಜಂತ್ರಿ ಸ್ವಾಗತಿಸಿ, ಮಹಾಂತೇಶ ಕಂಬಾರ ನಿರೂಪಿಸಿ, ರವಿ ರಾಮಥಾಳ ವಂದಿಸಿದರು.