ರಾಯಣ್ಣರ ದೇಶಭಕ್ತಿ ಎಲ್ಲರಲ್ಲಿ ಬೆಳೆಯಲಿ

KannadaprabhaNewsNetwork |  
Published : Aug 18, 2024, 01:48 AM IST
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 228ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅದ್ದೂರಿ ಮೆರವಣಿಗೆಗೆ ಉಮೇಶಗೌಡ ಪಾಟೀಲ ಚಾಲನೆ ನೀಡಿದರು. | Kannada Prabha

ಸಾರಾಂಶ

ಅಪ್ಪಟ ದೇಶಭಕ್ತ ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರ ರಾಣಿ ಚೆನ್ನಮ್ಮ ಗುಣಗಳನ್ನು ಎಲ್ಲ ಯುವಕರು ಅಳವಡಿಸಿಕೊಳ್ಳಬೇಕು

ಲಕ್ಷ್ಮೇಶ್ವರ: ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಜನರನ್ನು ಜಾಗೃತಗೊಳಿಸಿ ನಾಡಿಗಾಗಿ ಹೋರಾಡಿದ ಕೀರ್ತಿ ರಾಯಣ್ಣನವರಿಗೆ ಸಲ್ಲುತ್ತದೆ. ಕಿತ್ತೂರು ರಾಣಿ ಚೆನ್ನಮ್ಮಳ ಭಂಟನಾಗಿ ಸದಾ ದೇಶಭಕ್ತನಾಗಿ ನಾಡಿನ ಜನರನ್ನು ಸಂಘಟನೆ ಮಾಡಿ ಯುದ್ದ ಮಾಡಿ ಬ್ರಿಟಿಷರ ಎದೆಯಲ್ಲಿ ನಡುಕು ಹುಟ್ಟಿಸಿದ ಶೂರನಾಗಿದ್ದನು. ವೀರಮರಣ ಹೊಂದಿದ ರಾಯಣ್ಣ ಯುವಕರ ಮನಸ್ಸಿನಲ್ಲಿ ಸದಾ ಉಳಿಯುವಂತಾಗಿದ್ದಾನೆ. ರಾಯಣ್ಣನ ದೇಶಭಕ್ತಿ ಎಲ್ಲರಲ್ಲಿ ಬೆಳೆದು ಬರಬೇಕು ಅಂತಹ ಸ್ವಾಮಿ ನಿಷ್ಠ ಮತ್ತೊಮ್ಮೆ ಈ ನಾಡಿನಲ್ಲಿ ಜನಿಸುವಂತಾಗಬೇಕು ಎಂದು ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ನಡೆದ ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಶ್ರೀರಾಮನ ಭವ್ಯ ಮೂರ್ತಿಯ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಸುರೇಶ ಗೋಕಾಕ ಹಾಗೂ ಯುವ ಮುಖಂಡ ವಿನೋದ ಅಸೂಟಿ ಮಾತನಾಡಿ, ಅಪ್ಪಟ ದೇಶಭಕ್ತ ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರ ರಾಣಿ ಚೆನ್ನಮ್ಮ ಗುಣಗಳನ್ನು ಎಲ್ಲ ಯುವಕರು ಅಳವಡಿಸಿಕೊಳ್ಳಬೇಕು ಎಂದರು.

ಮೆರವಣಿಗೆಯು ಹಳೆ ಬಸ್ ನಿಲ್ದಾಣದಲ್ಲಿರುವ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಪಂಪ ವೃತ್ತ, ಮ್ಯಾಗೇರಿ ಓಣಿ, ಹಾವಳಿ ಹನಮಂತ ದೇವಸ್ಥಾನ, ಬಜಾರ ರಸ್ತೆ ಮುಖಾಂತರ ಶಿಗ್ಲಿ ನಾಕಾದಲ್ಲಿರುವ ರಾಯಣ್ಣ ವೃತ್ತದವರೆಗೂ ಡೊಳ್ಳು ಸೇರಿದಂತೆ ಸಕಲ ವಾದ್ಯವೃಂದದೊಂದಿಗೆ ಅದ್ಧೂರಿಯಾಗಿ ನಡೆಯಿತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸವರಾಜ ಹಿರೇಮನಿ, ತಾಲೂಕಾಧ್ಯಕ್ಷ ಸುರೇಶ ಹಟ್ಟಿ, ಡಿಎಸ್‌ಎಸ್ ಸಂಚಾಲಕ ಸುರೇಶ ನಂದೆಣ್ಣನವರ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ, ಸಮ್ಮೇದ ಗೋಗಿ, ಪ್ರಶಾಂತ ನಾಯಕ ನವೀನ ಬೆಳ್ಳಟ್ಟಿ, ನಿಂಗಪ್ಪ ಬನ್ನಿ, ಮಂಜುನಾಥ ಮುಳಗುಂದ, ಲೆಂಕೆಪ್ಪ ಶೆರಸೂರಿ, ಪರಸಪ್ಪ ಇಮ್ಮಡಿ, ಮಹೇಶ ಮೇಟಿ, ಜಗದೀಶಗೌಡ ಪಾಟೀಲ್, ಮೈಲಾರಿ ಹೆಗ್ಗಣ್ಣನವರ, ಮಂಜು ಗದ್ದಿ, ಭರಮಪ್ಪ ಶೆರಸೂರಿ, ಅಭಯ ಜೈನ್,ಮಹಾಂತೇಶ ಗುದ್ನಾಳ, ನವೀನ ಶೇರಸೂರಿ,ಹರೀಶ ಶೇರಸೂರಿ, ನಿಂಗಪ್ಪ ಕುರಹಟ್ಟಿ, ಫಕ್ಕೀರೇಶ ಗದ್ದಿ, ಸಂತೋಷ ಬಾಲೆಹೊಸೂರ, ಸದಾನಂದ ಗದ್ದಿ ಮುಂತಾದವರಿದ್ದರು. ಮಂಜುನಾಥ ಕೊಕ್ಕರಗುಂದಿ ನಿರೂಪಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ