ದೇಶ ಪರಿವರ್ತನೆ, ಅಭಿವೃದ್ಧಿಗೆ ಸರ್ವರೂ ಕೈ ಜೋಡಿಸಿ

KannadaprabhaNewsNetwork | Published : Apr 4, 2025 12:49 AM

ಸಾರಾಂಶ

ರಾಷ್ಟ್ರಿಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ. ಅದರ ಅಂಗ ಸಂಸ್ಥೆ ರಾಷ್ಟ್ರೊತ್ಥಾನ ಪರಿಷತ್‌ಗೆ ೬೦ ವರ್ಷ ತುಂಬಿದ ಈ ಗಳಿಗೆ ಪ್ರತಿಯೊಬ್ಬ ಭಾರತೀಯನಿಗೆ ಅತ್ಯಂತ ಪವಿತ್ರ ಕ್ಷಣ. ದೇಶ ಪರಿವರ್ತನೆ, ಅಭಿವೃದ್ಧಿಗೆ ಸರ್ವರೂ ಕೈ ಜೋಡಿಸಬೇಕು ಎಂದು ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತೀಯ ರಾಜ್ಯ ಸಂಚಾಲಕ ಬಸವರಾಜ ಟಿ.ಎಸ್ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ರಾಷ್ಟ್ರಿಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ. ಅದರ ಅಂಗ ಸಂಸ್ಥೆ ರಾಷ್ಟ್ರೊತ್ಥಾನ ಪರಿಷತ್‌ಗೆ ೬೦ ವರ್ಷ ತುಂಬಿದ ಈ ಗಳಿಗೆ ಪ್ರತಿಯೊಬ್ಬ ಭಾರತೀಯನಿಗೆ ಅತ್ಯಂತ ಪವಿತ್ರ ಕ್ಷಣ. ದೇಶ ಪರಿವರ್ತನೆ, ಅಭಿವೃದ್ಧಿಗೆ ಸರ್ವರೂ ಕೈ ಜೋಡಿಸಬೇಕು ಎಂದು ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತೀಯ ರಾಜ್ಯ ಸಂಚಾಲಕ ಬಸವರಾಜ ಟಿ.ಎಸ್ ಹೇಳಿದರು.

ಮಹಾಲಿಂಗಪುರ, ಸೈದಾಪುರ, ತೇರದಾಳ, ರಬಕವಿ-ಬನಹಟ್ಟಿ ಪಟ್ಟಣಗಳ ಪ್ರಬುದ್ಧರನ್ನು ಭೇಟಿ ಮಾಡಿ ರಾಷ್ಟ್ರೋತ್ಥಾನ ಪರಿಷತ್ ಸಾಹಿತ್ಯ, ಶಿಕ್ಷಣ, ಆರೋಗ್ಯ, ಸೇವೆಗಳೆಂಬ ನಾಲ್ಕು ಪ್ರಮುಖ ವಿಭಾಗಗಳಲ್ಲಿ ಮಾಡುತ್ತಿರುವ ಸೇವಾ ಕಾರ್ಯ ವಿವರಿಸಿದ ಅವರು, ಪ್ರಬುದ್ಧರ ಮೂಲಕ ವ್ಯಕ್ತಿ ಪರಿವರ್ತ್ ಹಾಗೂ ಸಮಾಜ ಪರಿವರ್ತನೆಯಾಗಬೇಕು ಎಂದರು.ಸಾಹಿತ್ಯ ವಿಭಾಗದಲ್ಲಿ ೧೭೩ ರಾಷ್ಟ್ರೋತ್ಥಾನ ಸಾಹಿತ್ಯ, ೧೨೯ ಸಾಹಿತ್ಯ ಸಿಂಧು ಪ್ರಕಾಶನ, ೬೧೦ ಭಾರತ-ಭಾರತಿ(ಕನ್ನಡ), ೨೨೫ ಭಾರತ-ಭಾರತಿ (ಇಂಗ್ಲಿಷ್) ಪ್ರಕಟಣೆಗಳು, ೨೬ ಶಾಲೆಗಳನ್ನು ಹೊಂದಿದ್ದು, ಶಿಕ್ಷಣ ಕ್ಷೇತ್ರದಲ್ಲಿ ೨೫ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಾಧನಾ ಮತ್ತು ತಪಸ್ ಮೂಲಕ ಪ್ರತಿಭಾವಂತ ಕಡುಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದು, ೧೩೪ ವಿದ್ಯಾರ್ಥಿಗಳು ಐಐಟಿ, ಎನ್‌ಐಟಿ, ೧೦೩ ವಿದ್ಯಾರ್ಥಿಗಳು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಆರೋಗ್ಯ ವಿಭಾಗದಲ್ಲಿ ೨೩ ಯೋಗ ಕೇಂದ್ರಗಳು, ೬ ಸಾವಿರ ರಕ್ತದಾನ ಶಿಬಿರಗಳ ಮೂಲಕ ೫ ಲಕ್ಷಕ್ಕೂ ಅಧಿಕ ರಕ್ತದಾನಿಗಳಿಂದ ೧೧.೫೦ಕ್ಕೂ ಅಧಿಕ ಲಕ್ಷ ಯೂನಿಟ್ ರಕ್ತ ಸಂಗ್ರಹ ಮಾಡಿ ೪ ಲಕ್ಷಕ್ಕೂ ಅಧಿಕ ಫಲಾನುಭವಿಳಿಗೆ ತಲುಪಿಸಿದ ಹಿರಿಮೆಯಾಗಿದೆ ಎಂದರು.

೪೦೦ಕ್ಕೂ ಅಧಿಕ ಮಕ್ಕಳಿಗೆ ತಲಸ್ಸೆಮಿಯಾ ಉಚಿತ ಚಿಕಿತ್ಸೆ, ೧೬೨ ಹಾಸಿಗೆಗಳ ಸಮಗ್ರ ಚಿಕಿತ್ಸಾ ಆಸ್ಪತ್ರೆಗಳ ಮೂಲಕ ಸ್ವಸ್ಥ ಸಮುದಾಯಗಳ ಪೋಷಣಾ ಕಾರ್ಯ, ಸೇವಾ ವಿಭಾಗದಲ್ಲಿ ಬೆಂಗಳೂರಿನ ಕೊಳಗೇರಿಗಳಲ್ಲಿ ೨೦೫ ಸೇವಾ ವಸತಿಗಳಲ್ಲಿ ೧ ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಸೇವೆ, ೬೫೦ಕ್ಕೂ ಅಧಿ ಗೋಸಂರಕ್ಷಣೆ, ೧೫ ಸಾವಿರಕ್ಕೂ ಅಧಿಕ ವೃಕ್ಷಾರೋಪಣ, ೩೦ ಸೇವಾ ವಸತಿಗಳ ೩೬೦ ಶಿಕ್ಷಣ ಕೇಂದ್ರಗಳಲ್ಲಿ ೬ ಸಾವಿರಕ್ಕೂ ಅಧಿಕ ಮಕ್ಕಳಿಗೆ ಶಿಕ್ಷಣ, ೧೦ ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಸ್ವಾವಲಂಬನ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.ಶಾಸಕ ಸಿದ್ದು ಸವದಿ ಸೇರಿದಂತೆ ಪ್ರಮುಖರನ್ನು ಭೇಟಿ ಮಾಡಲಾಯಿತು. ಸಮಿತಿ ಸದಸ್ಯೆ ರೇವತಿ.ಎಚ್, ವಿಭಾಗ ಸಂಯೋಜಕ ಶ್ರೀನಿವಾಸ ಪಾಟೀಲ, ಜಿಲ್ಲಾ ಸಂಯೋಜಕ ಹನುಮಂತ, ಸಂಪನ್ಮೂಲ ವ್ಯಕ್ತಿಗಳಾದ ನಾರನಗೌಡ ಉತ್ತಂಗಿ, ಶಿವಲಿಂಗ ಸಿದ್ನಾಳ, ಸಪ್ನಾ ಅನಿಗೋಳ ಇತರಿದ್ದರು.ರಾಷ್ಟ್ರೋತ್ಥಾನ ಪ್ರಕಟಿತ ಸಾಹಿತ್ಯ ಅತ್ಯಂತ ಮೌಲ್ಯವುಳ್ಳದ್ದಾಗಿದ್ದು, ₹೨ ಲಕ್ಷ ಮೌಲ್ಯದ ರಾಷ್ಟ್ರೋತ್ಥಾನ ಪುಸ್ತಕಗಳನ್ನು ಖರೀದಿಸಿ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿತರಿಸುವ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೂ ತಲುಪಿಸಲಾಗುವುದು.

-ಶಾಸಕ ಸಿದ್ದು ಸವದಿ, ತೇರದಾಳ ಮತಕ್ಷೇತ್ರ.

Share this article