ಆಪರೇಷನ್ ಸಿಂಧೂರ ಯಶಸ್ಸಿಗೆ ಎಲ್ಲರೂ ಪ್ರಾರ್ಥಿಸೋಣ

KannadaprabhaNewsNetwork |  
Published : May 11, 2025, 01:18 AM IST
೧೦ಶಿರಾ೧: ಶಿರಾ ತಾಲೂಕು ದೊಡ್ಡಬಾಣಗೆರೆ ಗ್ರಾಮದಲ್ಲಿ ನಡೆದ ಶ್ರೀ ಆಂಜನೇಯಸ್ವಾಮಿ, ಶಿವ ಪಾರ್ವತಿ, ಗಣಪತಿ ಹಾಗೂ ನಾಗರ ಪ್ರತಿಷ್ಟಾಪನಾ ಮಹೋತ್ಸವ ಕಾರ್ಯಕ್ರಮವನ್ನು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳು ಉದ್ಘಾಟಿಸಿದರು. ಶಾಸಕ ಟಿ.ಬಿ.ಜಯಚಂದ್ರ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ನಮ್ಮ ದೇಶದ ಹೆಮ್ಮೆಯ ಯೋಧರಿಗೆ ಜಯವಾಗಲಿ ಭಾರತಾಂಭೆಗೆ ಜಯವಾಗಲಿ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ನಡೆಸುತ್ತಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ದೇಶದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ನಮ್ಮ ದೇಶದ ಹೆಮ್ಮೆಯ ಯೋಧರಿಗೆ ಜಯವಾಗಲಿ ಭಾರತಾಂಭೆಗೆ ಜಯವಾಗಲಿ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು. ಅವರು ತಾಲೂಕಿನ ದೊಡ್ಡಬಾಣಗೆರೆ ಗ್ರಾಮದಲ್ಲಿ ನಡೆದ ಶ್ರೀವೀರ ಆಂಜನೇಯಸ್ವಾಮಿ, ಶಿವ ಪಾರ್ವತಿ ಅಮ್ಮನವರು, ಶ್ರೀ ಮಹಾಗಣಪತಿ, ಶ್ರೀನಾಗದೇವತಾ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್ಶೀವಚನ ನೀಡಿದರು. ಕೇಂದ್ರ ಸರ್ಕಾರ ಕೈಗೊಂಡಿರುವ ಎಲ್ಲಾ ನಿರ್ಧಾರಗಳಿಗೂ ಎಲ್ಲಾ ಪಕ್ಷಗಳೂ ಕೈಜೋಡಿಸುತ್ತಿದ್ದಾರೆ. ದೇಶದ ಸಾರ್ವಭೌಮತೆಯನ್ನು ದೇಶದ ಇತಿಹಾಸವನ್ನು ಜಗತ್ತಿಗೆ ತೋರ್ಪಡಿಸುವ ನಿಟ್ಟಿನಲ್ಲಿ ನಮ್ಮ ಸೈನ್ಯ ಮುನ್ನುಗ್ಗುತ್ತಿದೆ. ಯುದ್ಧದಲ್ಲಿ ನಿರತರಾಗಿರುವ ನಮ್ಮ ಹೆಮ್ಮೆಯ ಭಾರತೀಯ ಯೋಧರ ಗೆಲುವಿಗಾಗಿ ಎಲ್ಲರೂ ಪ್ರಾರ್ಥಿಸೋಣ ಎಂದರು. ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ ಭದ್ರಾ ನೀರು ತರುವಾಗ ಪ್ರಕೃತಿ ಮತ್ತು ಜನರನ್ನು ಉಳಿಸಲು ಅನೇಕ ತಂತ್ರಗಳನ್ನು ಮಾಡುವಂತಾಗಿದ್ದು ದೊಡ್ಡಬಾಣಗೆರೆ ಕೆರೆಗೆ ಅಪ್ಪರ್ ಭದ್ರಾ ಮತ್ತು ಎತ್ತಿನಹೊಳೆ ನೀರು ಕೊಡುತ್ತೇನೆ. ಬುಕ್ಕಾಪಟ್ಟಣ ಜನ ನನ್ನನ್ನು ೪ ಬಾರಿ ಗೆಲ್ಲಿಸಿದ್ದಾರೆ, ಹುಲಿಕುಂಟೆ ಹೋಬಳಿ ಜನ ೩ ಬಾರಿ ಗೆಲ್ಲಿಸಿದ್ದು ಇಬ್ಬರನ್ನೂ ಸರಿದೂಗಿಸುವ ಕೆಲಸ ಮಾಡುವೆ. ಸರಕಾರದಿಂದ ಹಣ ಕೊಡಲು ಕಷ್ಟವಾಗುತ್ತಿದ್ದು ಕೇಂದ್ರ ಸರಕಾರದಿಂದ ೫೩೦೦ ಕೋಟಿ ಹಣ ಬರಬೇಕಿದೆ. ಇಲ್ಲಿಯವರೆಗೆ ಯಾವ ಸರ್ಕಾರಗಳು ಬಿಡುಗಡೆ ಮಾಡಿಲ್ಲ. ಹೇಮಾತಿ ನೀರು ಅಧಿಕೃತವಾಗಿ ಕೇವಲ ೩೦ ಕೆರೆಗೆ ಅನುಮತಿ ನೀಡಿತ್ತು. ಆದರೆ ನಾನು ಕಳೆದ ವರ್ಷ ಹರಿಸಿದ್ದು ೩೪ ಕೆರೆಗೆ. ನೀರು ಬರುವರೆಗೂ ಲೆಕ್ಕ ಬಂದ ಮೇಲೆ ಇನ್ನೊಂದು ಲೆಕ್ಕಮಾಡಿ ಜನರಿಗೆ ನೀರು ಹರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಮಾತನಾಡಿ ಶ್ರೀವೀರಾಂಜನೇಯ, ಶಿವ, ಪಾರ್ವತಿ ದೇವಿ, ಗಣಪತಿ, ನಾಗರಪ್ರತಿಷ್ಟೆ, ಮೂರ್ನಾಲ್ಕು ದೇವರುಗಳು ಸಂಗಮದಲ್ಲಿ ಕೆರೆಯ ದಡದಲ್ಲಿ ಅತ್ಯದ್ಭುತ ದೇವಾಲಯ ನಿರ್ಮಾವಾಗಿದ್ದು ಗ್ರಾಮ ಏಳಿಗೆಗೆ ಉತ್ತಮ ಸಂದೇಶ ಸಾರುವಂತಿದೆ ಎಂದರು.ವಿ.ಎಸ್.ಎಸ್.ಎನ್ ಅಧ್ಯಕ್ಷ ಬಿ.ಹಲುಗುಂಡೇಗೌಡ ಮಾತನಾಡಿದರು. ದಾಬಸ್ಪೇಟೆ ಹೆಗ್ಗುಂದ ಶ್ರೀಕ್ಷೇತ್ರ ವನಕಲ್ಲು ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ.ಡಾ. ಬಸವರಮಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಮಾಜಿ ಮಾಜಿ ಜಿ.ಪಂ.ಸದಸ್ಯರಾದ ಬಿ.ಎಚ್.ಗುಜ್ಜಾರಪ್ಪ, ಎಸ್.ರಾಮಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜೇಗೌಡ, ವಿ.ಎಸ್.ಎಸ್.ಎನ್ ಅಧ್ಯಕ್ಷ ರಂಗನಾಥಪ್ಪ, ನಿವೃತ್ತ ಉಪಪ್ರಾಂಶುಪಾಲ ಬಿ.ವಿ.ಗುಂಡಪ್ಪ, ಗ್ರಾ.ಪಂ.ಅಧ್ಯಕ್ಷೆ ಮಲ್ಲಮ್ಮ ಕಾಂತರಾಜ್, ಉಪಾಧ್ಯಕ್ಷೆ ರೂಪಾ ನರಸಪ್ಪ, ಸದಸ್ಯ ಜಿ.ರಾಜಣ್ಣ, ಬೆಸ್ಕಾಂ ಅಧಿಕಾರಿ ಹನುಮಂತರಾಯಪ್ಪ, ಸಮಾಜ ಸೇವಕ ಶ್ರೀರಾಮೇಗೌಡ, ನಿವೃತ್ತ ಪೋಲೀಸ್ ಇಲಾಖೆ ಪುಟ್ಟೀರಪ್ಪ, ಹನುಮಂತೇಗೌಡ, ಕ್ಯಾದಿಗುಂಟೆ ತಿಪ್ಪೇಸ್ವಾಮಿ, ಜೆಡಿಎಸ್ ತಾ.ಅಧ್ಯಕ್ಷ ಪುನಿತ್, ದೇವಸ್ಥಾನ ಸಮಿತಿ ಅಧ್ಯಕ್ಷ ಈರಣ್ಣ, ಉಪಾಧ್ಯಕ್ಷ ರಾಮಚಂದ್ರಪ್ಪ, ಖಜಾಂಚಿ ಸಣ್ಣೀರಪ್ಪ ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್