ಅಂಕೋಲಾ: ಸರ್ಕಾರ ವಶಪಡಿಸಿಕೊಂಡು ತನ್ನ ತೆಕ್ಕೆಗೆ ತೆಗೆದುಕೊಂಡ ದೇವಸ್ಥಾನಗಳು ಹೆಚ್ಚಿನ ಅಭಿವೃದ್ಧಿ ಪಥದತ್ತ ಸಾಗುವ ಬದಲು ದರೋಡೆಗೆ ಒಳಗಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಭಕ್ತರು ಎಚ್ಚೆತ್ತು ಪರಂಪರೆ, ಸಂಸ್ಕೃತಿ ಮತ್ತು ನಂಬಿಕೆಯನ್ನು ಕಟ್ಟುವ ದೇವಸ್ಥಾನವನ್ನು ಉಳಿಸಿಕೊಳ್ಳಲು ಕಟಿಬದ್ಧರಾಗಬೇಕಾಗಿದೆ ಎಂದು ದೇವಾಲಯ ಸಂವರ್ಧನಾ ಸಮಿತಿಯ ರಾಜ್ಯ ಸಂಯೋಜಕ ಮನೋಹರ ಮಠದ ತಿಳಿಸಿದರು.ಪಟ್ಟಣದ ಶಾಂತಾದುರ್ಗಾ ದೇವಸ್ಥಾನದ ಸಭಾಭವನದಲ್ಲಿ ದೇವಾಲಯ ಸಂವರ್ದನಾ ಸಮಿತಿಯ ಆಶ್ರಯದಲ್ಲಿ ಸಂಘಟಿಸಿದ್ದ ಅಂಕೋಲಾ ತಾಲೂಕು ದೇವಸ್ಥಾನ ಆಡಳಿತ ಮಂಡಳಿಯವರ ಚಿಂತನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ದೇವಸ್ಥಾನಗಳು ಆಧುನಿಕತೆಯ ಸ್ಪರ್ಶಕ್ಕೆ ಒಳಗಾಗಿ ತನ್ನ ಮೂಲ ಉದ್ದೇಶವನ್ನೆ ಮರೆತಂತಿದೆ. ಈ ಹಿಂದೆ ದೇವಸ್ಥಾನಗಳೆಂದರೆ ನ್ಯಾಯ ಕೇಂದ್ರ, ಅನ್ನದಾಸೋಹ ಕೇಂದ್ರ, ಏಕತೆ ಹಾಗೂ ವಿದ್ಯಾಕೇಂದ್ರಗಳಾಗಿ ಕಂಡುಬರುತ್ತಿದ್ದವು. ಆದರೆ ಈಗೀಗ ಅದರ ಸ್ವರೂಪವೆ ಬದಲಾಗಿದೆ. ಈ ನಿಟ್ಟಿನಲ್ಲಿ ದೇವಾಲಯ ಸಂವರ್ಧನಾ ಸಮಿತಿಯಿಂದ ಸಕಾರಾತ್ಮಕ ಮತ್ತು ರಚನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸಂಘಟನೆ ಮಾಡಬೇಕಾಗಿದೆ ಎಂದರು. ಆರ್‌ಎಸ್ಎಸ್‌ನ ವಿಭಾಗ ಪ್ರಚಾರಕ ಗಣೇಶ ತೆಕ್ಕಟ್ಟೆ ಮಾತನಾಡಿ, ದೇವಸ್ಥಾನವೆಂದರೆ ಅದೊಂದು ಧರ್ಮದ ಸಾಕ್ಷಾತ್ಕಾರ. ಆದರೆ ದೇವಸ್ಥಾನದ ವ್ಯವಸ್ಥೆಯೆ ಇಂದಿನ ಕಾಲಘಟ್ಟದಲ್ಲಿ ಹಾಳಾಗುತ್ತಿರುವುದರಿಂದ ಹಿಂದುಗಳು ಆತಂಕದಲ್ಲಿರುವ ಸನ್ನಿವೇಶದಲ್ಲಿ ನಾವಿದ್ದೇವೆ ಎಂದರು.ಹೊಸಗದ್ದೆಯ ಸರ್ವೇಶರ ದೇವಸ್ಥಾನದ ಅಧ್ಯಕ್ಷ ವಾಮನ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನಗಳಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ಪರಂಪರೆಯನ್ನು ಸದೃಢಗೊಳಿಸಬೇಕಾಗಿದೆ ಎಂದರು. ದೇವಾಲಯ ಸಂವರ್ಧನಾ ಸಮಿತಿಯ ಜಿಲ್ಲಾ ಸಂಯೋಜಕ ಸಂಜು ಶೇಟ ಮಾತನಾಡಿದರು. ಸಮಿತಿಯ ಸದಸ್ಯ ಸುರೇಶ ಬೋವಿ ಸ್ವಾಗತಿಸಿದರು. ಶಶಿಧರ ಭಟ್ ಹಾಗೂ ಸುರೇಶಚಂದ್ರ ಬಾಟೆ ವೇದಘೋಷ ಸಾದರಪಡಿಸಿದರು. ಅಶೋಕ ಜೋಷಿ ನಿರೂಪಿಸಿದರು. ತಾಲೂಕು ಸಂಯೋಜಕ ಗಣೇಶ ಎನ್. ಶೆಟ್ಟಿ ವಂದಿಸಿದರು. ಚಿಂತನಾ ಸಭೆಯಲ್ಲಿ ತಾಲೂಕಿನ ದೇವಸ್ಥಾನದ ಅರ್ಚಕರು, ಧರ್ಮದರ್ಶಿಗಳು ಪಾಲ್ಗೊಂಡಿದ್ದರು.ಇಂದಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ
ಅ. ೨೧ರಂದು ೧೦.೩೦ಕ್ಕೆ ಸ್ವರ್ಣವಲ್ಲೀಯ ಶ್ರೀಗಳು ಆಗಮಿಸಿ, ಆಶೀರ್ವಾದ ಮಾಡಲಿದ್ದು, ನಿತ್ಯವೂ ವೇದ ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ, ಅ. ೨೩ರಂದು ೪.೩೦ಕ್ಕೆ ಶ್ರೀಮನ್ನೇಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ ಆಗಮಿಸಲಿದ್ದಾರೆ. ಅ. ೨೫ರಂದು ಮಾತೆಯರಿಂದ ಕುಂಕುಮಾರ್ಚನೆ, ಚಂಡೀಹವನ, ಅ. ೨೬ರಂದು ಮಾತೆಯರಿಂದ ಸಂಪೂರ್ಣ ಭಗವದ್ಗೀತೆ ಪಾರಾಯಣ, ಅ. ೨೭ರಂದು ಆದಿತ್ಯಹೃದಯ ಹೋಮ, ಪಾರಾಯಣ ಸಪ್ತಾಹದ ಮಂಗಲೋತ್ಸವ, ಸಂಜೆ ಯಜ್ಞಮಂಗಲ ಸಭೆ ನಡೆಯಲಿದೆ. ೫ರಿಂದ ಗೀತೋಪದೇಶ ತಾಳಮದ್ದಲೆ ಏರ್ಪಡಿಸಲಾಗಿದೆ. ಒಬ್ಬ ವಿದ್ವಾಂಸರಿಗೆ ಆಯುಷ್ಮಾನ ವೇದನಿಧಿ ಪುರಸ್ಕಾರ ನೀಡಲಾಗುತ್ತದೆ. ಪ್ರತಿದಿನ ೮ಕ್ಕೆ ಪ್ರಾರಂಭವಾಗುವ ಅನುಷ್ಠಾನವು ರಾತ್ರಿ ೯ರ ವರೆಗೆ ನಡೆಯಲಿದ್ದು, ಪ್ರತಿದಿನ ಅನ್ನಸಂತರ್ಪಣೆ ಇದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶಿರಸಿ ನಗರ ಭಾಗ ಪರಿಷತ್ ಅಧ್ಯಕ್ಷ ದಾಮೋದರ ಭಟ್ಟ, ಯೋಗ ಮಂದಿರದ ಕಾರ್ಯದರ್ಶಿ, ಸಿ.ಎಸ್. ಹೆಗಡೆ, ಪ್ರಮುಖರಾದ ಎಸ್.ಎನ್. ಉಪಾಧ್ಯಾ, ಭಾಸ್ಕರ ಭಟ್ಟ ಮತ್ತಿತರರು ಇದ್ದರು.