ಕೆ.ಎಲ್.ಕೆ. ಕಾಲೇಜು ಮೈದಾನದಲ್ಲಿ 75ನೇ ಅದ್ಧುರಿ ಗಣರಾಜ್ಯೋತ್ಸವ: ಸಂವಿಧಾನ ಸಮಗ್ರ ಮಾಹಿತಿ ಭಂಡಾರಕನ್ನಡಪ್ರಭ ವಾರ್ತೆ, ಬೀರೂರು.
ಶುಕ್ರವಾರ ಕೆಎಲ್.ಕೆ.ಕಾಲೇಜು ಮೈದಾನದಲ್ಲಿ ನಡೆದ75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, 1950 ಜನವರಿ 26 ಭಾರತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಜಾಪ್ರಭುತ್ವದ ನ್ಯಾಯಾಂಗ ಶಾಸಕಾಂಗ ಮತ್ತು ಕಾರ್ಯಾಂಗಗಳ ಸಿದ್ಧಾಂತಗಳನ್ನು ತಿಳಿಸಿದಂತಹ ನಮ್ಮ ಸಂವಿಧಾನ ಸಮಗ್ರ ಮಾಹಿತಿ ಭಂಡಾರ. ಸಂವಿಧಾನದಿಂದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳದ್ದೇ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಭಾರತೀಯರಾದ ನಾವು ಈ ಸಂದರ್ಭ ದಲ್ಲಿ ತ್ಯಾಗ ಬಲಿದಾನಗಳಿಂದ ನಿತ್ಯದ ಹಗಲಿರುಳು ನಮ್ಮ ಕಾಯುತ್ತಿರುವ ವೀರ ಯೋಧರಿಗೆ ನಮನ ಸಲ್ಲಿಸುವ ಮೂಲಕ ಉತ್ಸಾಹ, ಸಂಭ್ರಮ ಸಡಗರದಿಂದ ಆಚರಿಸೋಣ ಎಂದರು.ಭಾರತದ ಸಂವಿಧಾನ ವಿಶ್ವದಲ್ಲೇ ಅತಿದೊಡ್ಡ ಮಾದರಿ ಸಂವಿಧಾನವಾಗಿದೆ. ಅಂಬೇಡ್ಕರ್ ಬೇರೆ ಬೇರೆ ದೇಶ ಗಳ ಅಧ್ಯಯನ ನಡೆಸಿ ಕಾನೂನು, ನೀತಿ ನಿಯಮ ಒಗ್ಗೂಡಿ ರಚಿಸಿದ ಫಲದಿಂದಾಗಿ ಸಂವಿಧಾನ ನಮಗೆ ದೊರೆತಿದೆ. ಇದು ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ನೀತಿನಿಯಮ ರೂಪು ರೇಷೆಗಳ ಸಮಗ್ರ ಮಾಹಿತಿ ಭಂಡಾರ. ಸ್ವಾತಂತ್ರ್ಯ , ಸಮಾನತೆ, ಮೂಲಭೂತ ಹಕ್ಕುಗಳನ್ನು ದೊರಕಿಸಿ ಕೊಟ್ಟಿದ್ದಾರೆ ಎಂದರು.
ಸಂವಿಧಾನದ ಮುಖಾಂತರ ಜನರಿಗೆ ಮತದಾನ ಅವಕಾಶ ಸಿಕ್ಕಿದ್ದು, ಈ ಮೂಲಕ ಸೂಕ್ತ ವ್ಯಕ್ತಿ, ಸರ್ಕಾರವನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಎಲ್ಲಾ ರಂಗ ಗಳಲ್ಲಿಯೂ ಅತ್ಯಧ್ಬುತ ಸಾಧನೆಗೈಯುತ್ತಿರುವ ನಮ್ಮ ಭಾರತವನ್ನು ಇಡೀ ವಿಶ್ವವೇ ಹಿಂತಿರುಗಿ ನೋಡುವಂತೆ ಮಾಡಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ್ ಮಾತನಾಡಿ, ಭಾರತದ ಸಾರ್ವಭೌಮತೆ ಮತ್ತು ಅಖಂಡತೆಯಲ್ಲಿ ಏಕತೆಯನ್ನು ಮಕ್ಕಳು ಹಾಗೂ ಭಾರತೀಯ ಪ್ರಜೆಗಳಲ್ಲಿ ಅಳಿಯದಂತೆ ಮಾಡುವ ಸ್ಮರಣೀಯ ರಾಷ್ಟ್ರೀಯ ಹಬ್ಬವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಪುರಸಭೆಯ ಪೌರಕಾರ್ಮಿಕರು, ಚಾಲಕರು, ನೀರು ಗಂಟಿಗಳನ್ನು ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಆರ್. ಮೋಹನ್ ಕುಮಾರ್, ಪಿಎಸೈ ಸಚಿತ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್, ಸದಸ್ಯರಾದ ಮಾಣಿಕ್ ಭಾಷ, ಬಿ.ಕೆ.ಶಶಿಧರ್, ವನಿತ ಮಧುಬಾವಿ ಮನೆ, ಲೋಕೇಶಪ್ಪ, ರಾಜು, ಪುರಸಭೆ ವ್ಯವಸ್ಥಾಪಕ ಪ್ರಕಾಶ್, ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್ ಇದ್ದರು.೨೬ ಬೀರೂರು೧
ಬೀರೂರಿನ ಕೆಎಲ್‌ಕೆ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಶುಕ್ರವಾರ ನಡೆದ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ ನೆರವೇರಿಸಿದರು. ಪಿಎಸೈ ಸಚಿತ್, ಬಿಇಒ ಗಂಗಾಧರ್ ಇದ್ದರು.೨೬ ಬೀರೂರು೧
ಬೀರೂರಿನ ಕೆಎಲ್‌ಕೆ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಶುಕ್ರವಾರ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಂದ ಧ್ವಜವಂದನೆ ಸ್ವೀಕರಿಸಲಾಯಿತು.