ಅಂಬೇಡ್ಕರ್‌ ಜಯಂತಿ ಅದ್ಧೂರಿಯಾಗಿ ಆಚರಿಸೋಣ

KannadaprabhaNewsNetwork | Published : Mar 15, 2025 1:06 AM

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಬಾಬಾ ಸಾಹೇಬ್ ಅಂಬೇಡ್ಕರ್ ಒಂದು ಜಾತಿ, ಧರ್ಮಕ್ಕೆ ಸೀಮಿತರಾಗದೇ ಸರ್ವ ಜನಾಂಗದ ನಾಯಕರಾಗಿದ್ದಾರೆ. ಎಲ್ಲಾ ವರ್ಗದ ಜನರು ಕೂಡಿಕೊಂಡು ಅವರ ಜಯಂತಿ ಆಚರಿಸೋಣ ಎಂದು ಮುಖಂಡರಾದ ಗುರುರಾಜ ಆಕಳವಾಡಿ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಬಾಬಾ ಸಾಹೇಬ್ ಅಂಬೇಡ್ಕರ್ ಒಂದು ಜಾತಿ, ಧರ್ಮಕ್ಕೆ ಸೀಮಿತರಾಗದೇ ಸರ್ವ ಜನಾಂಗದ ನಾಯಕರಾಗಿದ್ದಾರೆ. ಎಲ್ಲಾ ವರ್ಗದ ಜನರು ಕೂಡಿಕೊಂಡು ಅವರ ಜಯಂತಿ ಆಚರಿಸೋಣ ಎಂದು ಮುಖಂಡರಾದ ಗುರುರಾಜ ಆಕಳವಾಡಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರವರ 134ನೇ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಕೇವಲ ದಲಿತರಿಂದ ಮಾತ್ರವಲ್ಲದೇ ಸರ್ವ ಸಮಾಜದದಿಂದ ಆಚರಿಸುವಂತಾಗಬೇಕು ಎಂಬುದು ಎಲ್ಲ ಜನತೆ ಆಶಯವಾಗಿದೆ. ಈ ಬಾರಿ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸೋಣ ಎಂದರು.ಮುಖಂಡ ಕಾಶಿನಾಥ ತಳಕೇರಿ ಮಾತನಾಡಿ.ಇಲ್ಲಿ ಯಾರೊಬ್ಬರ ವೈಯಕ್ತಿಕ ಹಿತಾಸಕ್ತಿಗೆ ಮಣಿಯದೇ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಕ್ಕೆ ಮಾತ್ರ ಅವಕಾಶವಿದೆ. ಅಂಬೇಡ್ಕರ್ ಅವರ ಜಯಂತಿ ಆಚರಣೆಗಷ್ಟೇ ಸೀಮಿತವಾಗಿರದೆ ಪ್ರತಿ ಎಲ್ಲ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಏಪ್ರಿಲ್- 20 ರಂದು ಬೆಳಿಗ್ಗೆ 11ಕ್ಕೆ ಮೆರವಣಿಗೆ ಪ್ರಾರಂಭವಾಗಲಿದೆ. ಸಂಜೆ ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಹಳೆ ಶಾಲಾ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ ಜ್ಯಾತ್ಯಾತೀತವಾಗಿ ಜನರಿಗೆ ಸಂವಿಧಾನದ ಆಶಯ ತಿಳಿಸುವುದಾಗಿದೆ ಎಂದರು.ಸಂದರ್ಭದಲ್ಲಿ ಮುಖಂಡರಾದ ರಾಜು ಮೇಟಗಾರ, ಜಾನು ಗುಡಿಮನಿ, ಪ್ರಕಾಶ ಮಲ್ಹಾರಿ, ಅರವಿಂದ ನಾಯ್ಕೋಡಿ, ರಹಿಮಾನ್ ಕನಕಲ್, ಪ್ರಶಾಂತ ಹಾಗೂ ಡಿ.ಕೆ.ದೊಡ್ಡಮನಿ ಮಾತನಾಡಿ, ಮುನಿಕೊಂಡಿರುವ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯ ಮಾಡಬೇಕು. ಸದ್ಯ ಜನರ ಮನಸ್ಸಿನಲ್ಲಿ ದ್ವಂದ ನಿಲುವು ಇರುವುದರಿಂದ ಅದನ್ನು ಕೊನೆಗಾಣಿಸಿ ಎಲ್ಲರೂ ಸೇರಿ ಒಂದೇ ಜಯಂತಿ ಆಚರಣೆ ಮಾಡುವಂತಾಗಬೇಕು. ಸಮಾಜದ ವಿಷಯ ಬಂದಾಗ ಸ್ವಪ್ರತಿಷ್ಠೆ, ಸ್ವಾರ್ಥ ಬಿಟ್ಟು ಒಂದಾಗಬೇಕು. ಅಂಬೇಡ್ಕ‌ರ್ ಚಿಂತನೆಗಳಿಗೆ ಬೆಲೆ ಕೋಡಬೇಕೇ ವಿನಹಃ ವೈಯಕ್ತಿಕ ಹಿತಾಸಕ್ತಿಗಲ್ಲ ಎಂಧು ಹೇಳಿದರು.ಈ ವೇಳೆ ಡಿಎಸ್ಎಸ್ ಸಂಚಾಲಕ ಮಾಂತೇಶ್ ಕುಟನೂರ, ಸಂಚಾಲಕರಾದ ಸುಭಾಷ ನಾಟಿಕಾರ, ನಬಿ ಮೊಮಿನ್‌, ದೇವು ಬನಸೊಡೆ, ಸಿದ್ದು, ಪ್ರಕಾಶ ಹರನಾಳ, ಅರುಣಕುಮಾರ ಕೋರವಾರ, ರಾಘವೇಂದ್ರ ಗುಡಿಮನಿ ಸೇರಿ ವಿವಿಧ ಸಂಘಟನೆ ಮುಖಂಡರು ಹಾಜರಿದ್ದರು.

ರಾಜ್ಯಮಟ್ಟದ ಪ್ರಶಸ್ತಿಗೆ ಅರ್ಜಿದೇವರಹಿಪ್ಪರಗಿ: ಸಮೀಪದ ಕೋರವಾರ ಗ್ರಾಮದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ. ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ಪ್ರಯುಕ್ತ ರಾಜ್ಯಮಟ್ಟದ ''''''''ಅತ್ಯುತ್ತಮ ಶಿಕ್ಷಕ'''''''' ಪ್ರಶಸ್ತಿ ಹಾಗೂ ರಾಜ್ಯಮಟ್ಟದ ''''''''ಸ್ಫೂರ್ತಿದಾಯಕ ವ್ಯಕ್ತಿ'''''''' ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಶಿಕ್ಷಕರಿಗಾಗಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ. ಸಾಮಾಜಿಕ ಕಳಕಳಿಯಿಂದ ಹೋರಾಟ ಮಾಡುತ್ತಿರುವ ವ್ಯಕ್ತಿಗಳಿಗೆ ಸ್ಫೂರ್ತಿದಾಯಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅರ್ಹ ಆಸಕ್ತರು ಕಾರ್ಯಕ್ರಮ ಸಂಘಟಕ ಹಾಗೂ ಪ್ರಶಸ್ತಿ ಪ್ರದಾನ ಸಮಿತಿ ಅಧ್ಯಕ್ಷ ಅರುಣ ಕೋರವಾರ (ಮೊ.9980411727) ಅವರನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Share this article