ಹಬ್ಬದ ರೂಪದಲ್ಲಿ ಸಾಹಿತ್ಯ ಸಮ್ಮೇಳನ ಆಚರಿಸೋಣ: ಶೈಲೇಶ ಪರಮಾನಂದ

KannadaprabhaNewsNetwork |  
Published : Nov 20, 2025, 01:15 AM IST
ಎಚ18.11-ಡಿಎನ್‌ಡಿ1: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ  ಲಾಂಛನ ಬಿಡುಗಡೆ | Kannada Prabha

ಸಾರಾಂಶ

ಇಲ್ಲಿ ಡಿ. 13 , 14, 15ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯಕ್ರಮ ನಗರದ ಆಡಳಿತ ಸೌಧದ ಸಭಾಭವನದಲ್ಲಿ ಮಂಗಳವಾರ ನಡೆಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿದ ತಹಶೀಲ್ದಾರ್ಕನ್ನಡಪ್ರಭ ವಾರ್ತೆ ದಾಂಡೇಲಿ

ಇಲ್ಲಿ ಡಿ. 13 , 14, 15ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯಕ್ರಮ ನಗರದ ಆಡಳಿತ ಸೌಧದ ಸಭಾಭವನದಲ್ಲಿ ಮಂಗಳವಾರ ನಡೆಯಿತು.

ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ತಹಶೀಲ್ದಾರ್ ಶೈಲೇಶ ಪರಮಾನಂದ, ಇದು 25ನೇ ವರ್ಷದ ಸಮ್ಮೇಳನವಾಗಿದ್ದರಿಂದ ರಜತ ಮಹೋತ್ಸವದ ಸಂಭ್ರಮ ನಮ್ಮೆಲ್ಲರಲ್ಲಿಯೂ ಇರಬೇಕು. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನ ಪ್ರತಿಯೊಂದು ಮನೆ, ಮನಗಳಲ್ಲಿ ಹಬ್ಬದೋಪಾದಿಯಲ್ಲಿ ನಡೆಯಬೇಕು. ಪ್ರತಿಯೊಬ್ಬರೂ ಕೂಡ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕು ಎಂದರು. ಸಮ್ಮೇಳನದ ಭಾಗವಾಗಿ ಆಕರ್ಷಕವಾದ ಲಾಂಛನವನ್ನು ತಯಾರಿಸಲಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯಿಕ, ಸಾಂಸ್ಕೃತಿಕ, ಪ್ರಾಕೃತಿಕವಾದ ಹಿರಿಮೆಯನ್ನು ಈ ಲಾಂಛನದಲ್ಲಿ ಅಳವಡಿಸಲಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್ . ವಾಸರೆ ಮಾತನಾಡಿ, ಸಮ್ಮೇಳನದ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಇದು ದಾಂಡೇಲಿಯ ಒಂದು ಐತಿಹಾಸಿಕ ಕಾರ್ಯಕ್ರಮವಾಗಿ ದಾಖಲಾಗಿದೆ ಎಂದರು.

ನಗರಸಭಾ ಅಧ್ಯಕ್ಷ ಅಷ್ಪಾಕ್ ಶೇಖ್ ಮಾತನಾಡಿ, ಈ ಸಮ್ಮೇಳನ ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ತಾಪಂ ಇಒ ಟಿ.ಸಿ. ಹಾದಿಮನಿ ಮಾತನಾಡಿದರು.

ಸಮ್ಮೇಳನಕ್ಕಾಗಿ ಆಗಮಿಸುವ ಅತಿಥಿಗಳ ವಸತಿ ವ್ಯವಸ್ಥೆ, ಊಟದ ವ್ಯವಸ್ಥೆ ಹಾಗೂ ಮೂರು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಯಿತು.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ್, ಕರ್ನಾಟಕ ಸಂಘದ ಉಪಾಧ್ಯಕ್ಷ ರಾಜೇಶ ತಿವಾರಿ, ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ, ಶಿರಸಿ ಅರ್ಬನ್ ಬ್ಯಾಂಕ್ ನಿರ್ದೇಶಕ ಟಿ.ಎಸ್. ಬಾಲಮಣಿ, ಕಲಾಶ್ರೀ ಸಂಸ್ಥೆಯ ಅಧ್ಯಕ್ಷ ಎಸ್. ಪ್ರಕಾಶ್ ಶೆಟ್ಟಿ, ಕಸಾಪ ಕೋಶಾಧ್ಯಕ್ಷ ಶ್ರೀಮಂತ ಮದರಿ, ಪದಾಧಿಕಾರಿಗಳಾದ ಕಲ್ಪನಾ ಪಾಟೀಲ್, ಸುರೇಶ್ ಕಾಮತ್, ವೆಂಕಮ್ಮ ನಾಯಕ್, ಸುರೇಶ್ ಪಾಲನಕರ್, ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ಆರ್. ಪಿ. ನಾಯ್ಕ, ರೋಟರಿ ಕ್ಲಬ್ ಅಧ್ಯಕ್ಷ ಅಶೋತೋಷಕುಮಾರ ರಾಯ್, ಪ್ರಮುಖರಾದ ಸುಧಾಕರ್ ಶೆಟ್ಟಿ, ರವಿ ಸುತಾರ್, ಶಾರದಾ ಪುರಶುರಾಮ, ರೇಣುಕಾ ಬಂದಮ್, ನೀಲಾ ಮಾದರ, ಪ್ರಮೀಳಾ ಅನುರಾಧ ಜಾದವ್, ಸರಸ್ವತಿ ಚೌಹಾಣ, ಸಾವಿತ್ರಿ ಬಡಿಗೇರ, ಫ್ರಾನ್ಸಿಸ್ ಮಸ್ಕರಿನಸ್, ಅಮೃತ್ ರಾಮರಥ್, ಉಜ್ವಲಾ ಗಾವಡೆ ಮುಂತಾದವರಿದ್ದರು. ಜಿಲ್ಲೆಯ ಹಿರಿಮೆಯನ್ನೊಳಗೊಂಡ ಲಾಂಛನ:

ಕಲಾವಿದ ಮಹೇಶ ಪತ್ತಾರ ಸಿದ್ದಪಡಿಸಿದ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ದಾಂಡೇಲಿಯ ಅಭಯಾರಣ್ಯ, ಕಾಗದ ಕಂಪನಿ, ಇಲ್ಲಿಯ ಗುರುತುಗಳಾದ ಹಾರ್ನಬಿಲ್, ಹುಲಿ, ಕಾಳಿನದಿ, ರಾಪ್ಟಿಂಗ್, ಜಿಲ್ಲೆಯ ಹೆಮ್ಮೆಯ ಕಲೆ ಯಕ್ಷಗಾನ, ಜಲಪಾತ ಸೇರಿದಂತೆ ಹಲವು ಸಂಗತಿಗಳ ಜೊತೆಗೆ ಇಡೀ ಜಿಲ್ಲೆಯ ಸಾಂಸ್ಕೃತಿಕ ಪ್ರಾಕೃತಿಕ ಭೌಗೋಳಿಕ ಸೊಬಗನ್ನ ಒಳಗೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗಾಯತರು ಭೇದ ಭಾವ ಮರೆತು ಒಗ್ಗಟ್ಟಾಗಬೇಕಿದೆ
ತಂತ್ರಜ್ಞಾನ ಸಹಾಯದಿಂದ ದೇಶದ ಅಭಿವೃದ್ಧಿಗೆ ಶ್ರಮಿಸಿ