ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ನಡೆದ ಭಗವಾನ್ ಗೌತಮ ಬುದ್ಧರ 2568ನೇ ಬುದ್ಧ ಪೂರ್ಣಿಮಾ ದಿನದ ನಿಮತ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿ ಅವರು ಮಾತನಾಡಿದರು.
ಗೌತಮ ಬುದ್ಧನ ಮೂಲ ಹೆಸರು ಸಿದ್ಧಾರ್ಥ, ಜ್ಞಾನ ಸಂಪಾದನೆಯಾದ ಮೇಲೆ ಬುದ್ಧನೆಂದು ಕರೆಯಲಾಗಿದೆ. ಬೌದ್ಧ ಧರ್ಮದಲ್ಲಿ ಕೋಪ, ಲೋಭ, ಮೌಢ್ಯಗಳನ್ನು ಸಂಪೂರ್ಣವಾಗಿ ಜಯಿಸಿದವನನ್ನು ಬುದ್ಧನೆಂದು ಕರೆಯುತ್ತಾರೆ ಎಂದು ಹೇಳಿದರು.ಈ ವೇಳೆ ಕರವೇ ಯುವ ಘಟಕದ ಅಧ್ಯಕ್ಷ ವಿಶ್ವರಾಧ್ಯ ದಿಮ್ಮೆ, ಮುಖಂಡರಾದ ಸಂತೋಷ ನಿರ್ಮಲಕರ್, ಹಣಮಂತನಾಯಕ ಖಾನಹಳ್ಳಿ, ಶರಣು ಸಾಹುಕಾರ, ಸಿದ್ದಪ್ಪ ಕುಯಿಲೂರು, ವಿಶ್ವರಾಜ ಹೋನಗೇರಾ, ಯೆಲ್ಲಪ್ಪ ಚಾಮನಳ್ಳಿ, ವಿಶ್ವಜೀತ್ ಕಟ್ಟಿ, ರಮೇಶ ಡಿ. ನಾಯಕ ಸೇರಿದಂತೆ ಇತರರಿದ್ದರು.