ಕುಂದಗೋಳ: ಇಲ್ಲಿಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕಂದಾಯ ಇಲಾಖೆ ಹಾಗೂ ತಾಲೂಕಾಡಳಿತದ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಯಿತು.
ಶಿಕ್ಷಣ ಇಲಾಖೆಯ ಅಧಿಕಾರಿ ಭೀಮಪ್ಪ ಸಾವಳಗಿ ಉಪನ್ಯಾಸ ನೀಡಿದರು. ಮಾಣಿಕ್ಯ ಚಿಲ್ಲೂರ, ಒಕ್ಕಲಿಗ ಸಮಾಜದ ಮಹಿಳಾ ಅಧ್ಯಕ್ಷೆ ಕುಮ್ಮಕ್ಕ ಸ್ವಾದಿ, ವಿದ್ಯಾರ್ಥಿಗಳಾದ ಶೈಲಾ ದೊಡ್ಡವಾಡ, ಬಸವರಾಜ ಗೋಜನೂರ ಮಾತನಾಡಿದರು.
ಈ ವೇಳೆ ತಹಸೀಲ್ದಾರ್ ರಾಜು ಮಾವರಕರ, ಇಒ ಜಗದೀಶ ಕಮ್ಮಾರ, ಸಿಪಿಐ ಶಿವಾನಂದ ಅಂಬಿಗೇರ, ಸಿಇಒ ಮಹಾದೇವಿ ಮಾಡಲಗೇರಿ ಹಾಗೂ ಗ್ರಾಮ ಆಡಳಿತಾಧಿಕಾರಿ ಮಮ್ಮದಲಿ ಸೌದಾಗಾರ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಒಕ್ಕಲಿಗ ಸಮಾಜದ ಶತಾಯುಶಿ ತಿಪ್ಪವ್ವ ಬಾಳಪ್ಪ ನೇಗಿನಹಾಳ, ಸಮಾಜದ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಒಕ್ಕಲಿಗ ಸಮಾಜದ ಮುಖಂಡರಾದ ಹನುಮಂತಪ್ಪ ನೇಗಿನಹಾಳ, ಹನುಮಂತಪ್ಪ ಗೊಜನೂರ, ಡಾ. ಕಲ್ಲಪ್ಪ ನವಲಗುಂದ, ನೀಲಪ್ಪ ಬಟ್ಟೂರ, ನಾಗಪ್ಪ ಬಟ್ಟೂರ, ರಾಜು ಕುಡವಕ್ಕಲರ, ನಿಂಗಪ್ಪ ಗೋಜನೂರ ಸೇರಿದಂತ ಅನೇಕರು ಉಪಸ್ಥಿತರಿದ್ದರು.