ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಅವರು ಪಟ್ಟಣದ ಸಮೀಪದ ಯಡೇಹಳ್ಳಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸನಾತನ ಎಂದರೆ ಆದಿ ಮತ್ತು ಅಂತ್ಯ ಇಲ್ಲದೇ ಇರುವುದು. ಹಿಂದೂ ಎಂದರೆ ದೇವನೊಬ್ಬ ನಾಮ ಹಲವು ಎಂಬ ನಂಬಿಕೆ ಇರುವವರು. ದೇಶವನ್ನು ನಾನಾ ಹೆಸರುಗಳಿಂದ ಕರೆಯಲ್ಪಟ್ಟರೂ ಭರತನಿಂದ ಬಂದ ಹೆಸರೇ ಭಾರತ. ಸಂಸ್ಕಾರ, ಸತ್ವ, ಸ್ವಾವಲಂಬಿ, ಸ್ವಾಭಿಮಾನಿ, ಸಾಮರಸ್ಯ ಪ್ರತಿಯೊಬ್ಬ ಪ್ರಜೆಯೂ ಮೈಗೂಡಿಸಿಕೊಂಡರೆ ಭಾರತ ವಿಶ‍್ವಗುರುವಾಗುವುದರಲ್ಲಿ ಸಂದೇಹವಿಲ್ಲ ಎಂದರು.ವಿಶ್ವ ಒಂದು ಕುಟುಂಬ ಎಂದು ಬಾವಿಸುವವರು ಹಿಂದೂಗಳು. ಸಂಸ್ಕಾರ ನೀಡುತ್ತಿರುವ ಸಂಘ ವಿಶ್ವಕ್ಕೆ ಮಾದರಿಯಾಗಿದೆ. ಕುಟುಂಬಗಳಲ್ಲಿ ಸಾಮರಸ್ಯ ಬಂದರೆ ದೇಶ ತಾನಾಗಿಯೇ ಒಗ್ಗಟ್ಟಾಗುವುದು, ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ರಾಮಾಯಣ, ಮಹಾಭಾರತ, ವಚನಗಳು ಹಾಗೂ ದಾಸರ ಪದಗಳನ್ನು ಕಲಿಸುವುದರಿಂದ ಮನೆಯೊಂದು ಮೂರು ಬಾಗಿಲು ಆಗುವುದನ್ನು ತಡೆದು ಮನೆತನದ ಪರಂಪರೆಯನ್ನು ಉಳಿಸುವ ಕೆಲಸವಾಗುವುದು. ಜಾತಿ ಒಂದು ಗುರುತು. ಜಾತಿ ಒಳಗೆ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸವಾಗುತ್ತಿದೆ ಎಂದರು.
ನಮ್ಮ ದೇಶದಲ್ಲಿ ಸಾಮರ್ಥ್ಯಕ್ಕೆ ಜ್ಞಾನಕ್ಕೆ ಕೊರತೆಯಿಲ್ಲ. ಆದರೂ ಸಹ ಪರಕೀಯರ ಆಳ್ವಿಕೆಗೆ ಒಳಪಟ್ಟಿದ್ದೆವು. ಹಿಂದುತ್ವ ಭಾವನೆ ಒಡೆದು ಜಾತಿಗಳನ್ನು ಹುಟ್ಟಿಹಾಕಿ ಹಿಂದೂ ಧರ್ಮವನ್ನು ಅಂತ್ಯ ಕಾಣಿಸಲು ಹುನ್ನಾರ ನಡೆಯುತ್ತಿದೆ. ಈಗಲೇ ನಾವೆಲ್ಲ ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ಮಕ್ಕಳನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಪಟ್ಟಣದ ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಸುಬ್ರಮಣಿ, ಕೆ.ಪಿ.ಕಿರಣ್ ಕುಮಾರ್, ಯುವರಾಜ್, ಡಾ. ಮಂಜಪ್ಪ, ಸುಧಾಮಣಿ ಬೋರಯ್ಯ, ಎಂ.ಪಾಲಾಕ್ಷಪ್ಪ, ಮಹಾದೇವಪ್ಪ, ತ್ರಿಮೂರ್ತಿ, ಶಿವಕುಮಾರ್ ಕೋಮಾರನಹಳ್ಳಿ, ನಂದ್ಯಪ್ಪ ಸೇರಿದಂತೆ ಇತರರು ಇದ್ದರು.