ಕನ್ನಡಪ್ರಭ ವಾರ್ತೆ ಕೋಲಾರಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಕೃಷ್ಣ ನದಿ ನೀರಿನಲ್ಲಿ ನಮ್ಮ ಪಾಲು ಪಡೆಯಲು ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಲು ಜಲಾಗ್ರಹ ಸಮಾವೇಶ ನಗರದ ಪ್ರಭಾತ್ ಚಿತ್ರಮಂದಿರ ಸಮೀಪದ ಪುಡ್ ಕೋರ್ಟ್ ರಸ್ತೆಯಲ್ಲಿ ಜನವರಿ ೧೭ರಂದು ಹಮ್ಮಿಕೊಂಡಿದೆ. ಈ ಸಂಬಂಧ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನೀರಾವರಿ ಹೋರಾಟಗಾರರನ್ನು ಸಂಘಟಿಸಲು ಡಿ.೩೧ ರಂದು ಮಾಲೂರು ಮೂಲಕ ಪ್ರಾರಂಭಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಜಲಾಗ್ರಹ ಸಮಾವೇಶವು ಯಶಸ್ವಿಯಾಗಿದ್ದು, ಅದೇ ರೀತಿ ಕೋಲಾರ ಜಿಲ್ಲಾ ಮಟ್ಟದ ಸಮಾವೇಶ ಜ.೧೭ರಂದು ಆಯೋಜಿಸಿದೆ ಎಂದರು. ಎತ್ತಿನಹೊಳೆ ಯೋಜನೆ ಅವೈಜ್ಞಾನಿಕ
ಸದನದಲ್ಲಿ ತ್ಯಾಜ್ಯ ನೀರನ್ನು ೩ ಹಂತದಲ್ಲಿ ಸಂಸ್ಕರಿಸದಿದ್ದರೆ ನಮ್ಮ ಕ್ಷೇತ್ರಕ್ಕೆ ಈ ನೀರು ಬೇಡವೇ ಬೇಡ ಎಂದು ದೊಡ್ಡಬಳ್ಳಾಪುರ ಜಿಲ್ಲೆಯ ಬಿಜೆಪಿ ಶಾಸಕ ಧೀರಜ್ ಮುನಿರಾಜು ಹಾಗೂ ನೆಲಮಂಗಲದ ಕಾಂಗ್ರೇಸ್ ಶಾಸಕ ಶ್ರೀನಿವಾಸ್ ಅವರು ತಿರಸ್ಕರಿಸಿದ್ದಾರೆ. ಅವರ ದಿಟ್ಟ ನಡೆಗೆ ನಾನು ಅಭಿನಂಧಿಸುತ್ತೇನೆ. ಈ ತ್ಯಾಜ್ಯ ನೀರು ನಮಗೆ ಮಳೆ ಬೀಳದಿದ್ದರೆ ಅಪಾಯ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು, ಕಳೆದ ೩ ವರ್ಷದಲ್ಲಿ ನಮಗೆ ಬೀಳ ಬೇಕಾದ ಸರಾಸರಿ ಮಳೆಗಿಂತ ದುಪ್ಪಟ್ಟು ಮಳೆಯಾಗಿದ್ದರಿಂದ ನಾವುಗಳು ತ್ಯಾಜ್ಯ ನೀರಿನ ಅಪಾಯದಿಂದ ಪಾರಾಗಿದ್ದೇವೆ ಎಂದರು,
ಕುಪ್ಪಂನಿಂದ ಕೃಷ್ಣಾ ನೀರು ಹರಿಸಿಈಗ ಪ್ರಮುಖವಾಗಿ ನಮಗೆ ಕೃಷ್ಣ ನದಿ ನೀರನ್ನು ಚಿಕ್ಕಬಳ್ಳಾಪರಕ್ಕೆ ಪೆನ್ನಾರದಿಂದ ಹಾಗೂ ಕೋಲಾರ ಜಿಲ್ಲೆಗೆ ಕುಪ್ಪಂನಿಂದ ಹರಿಸಬೇಕೆಂಬುವುದು ಜಲಾಗ್ರಹದ ಪ್ರಮುಖ ಆಗ್ರಹವಾಗಿದೆ. ಕೃಷ್ಣ ನದಿ ನೀರು ಆಂಧ್ರ ಪ್ರದೇಶದ ಹಿಂದೂಪುರದಿಂದ ಕುಪ್ಪಂವರೆಗೆ ಹರಿಯುತ್ತಿದ್ದರೂ ನಾವುಗಳು ನಮ್ಮ ಪಾಲಿನ ನೀರನ್ನು ಪಡೆಯದೆ ತ್ಯಾಜ್ಯ ನೀರಿನಲ್ಲಿ ಮುಳಗಿದ್ದೇವೆ ಎಂದರು. ಸುದ್ದಿಗೋಷ್ಟಿಯಲ್ಲಿ ಡಾ.ರಮೇಶ್, ಹೊಳಲಿ ಪ್ರಕಾಶ, ಅಬ್ಬಣಿ ಶಿವಪ್ಪ, ದಲಿತ ನಾರಾಯಣಸ್ವಾಮಿ, ಸಲಾವುದ್ದೀನ್ ಬಾಬು, ಸಂತೋಷ್, ರಾಜೇಶ್, ಚಂಬೇ ರಾಜೇಶ್, ರೈತ ಸಂಘದ ರಾಮುಶಿವಣ್ಣ, ನಿವೃತ್ತ ಡಿ.ವೈ.ಎಸ್.ಪಿ. ವೆಂಕಟಸ್ವಾಮಿ, ಪತ್ರಕರ್ತ ಸಿ.ವಿ.ನಾಗರಾಜ್, ಎಪಿಎಂಸಿ ಪುಟ್ಟರಾಜು ಇದ್ದರು.