ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ಸಮಿತಿಗಳ ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಹೊರತುಪಡಿಸಿದರೆ, ಶಿವಮೊಗ್ಗಯಲ್ಲಿ ವೈವಿಧ್ಯಮಯ ದಸರಾ ಸಂಘಟಿಸ ಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಹದಿನಾಲ್ಕು ಉತ್ಸವಗಳ ಜೊತೆಗೆ ಸಮಾಜಮುಖಿಯಾದ ಇನ್ನೂ ಮೂರು ಉತ್ಸವ ಗಳನ್ನು ನಡೆಸಲು ಚಿಂತನೆ ನಡೆದಿದೆ ಎಂದರು.
ಈ ಬಾರಿ ಚುನಾಯಿತ ಪಾಲಿಕೆಯಲ್ಲಿ ಪ್ರತಿನಿಧಿಗಳಿಲ್ಲ. ಆದರೆ, ಈ ಹಿಂದಿನ ಪಾಲಿಕೆ ಸದಸ್ಯರು ಮೇಯರ್, ಉಪ ಮೇಯರ್ ಸೇರಿದಂತೆ ಎಲ್ಲರನ್ನೂ ಒಳಗೊಂಡು, ಅವರ ಸಲಹೆ ಸೂಚನೆ ಮೇರೆಗೆ ಕಾರ್ಯಪ್ರವೃತ್ತರಾಗಬೇಕಿದೆ. ಇದು ಯಾರಿಗೋ ಒಬ್ಬರಿಗೆ ಜವಾಬ್ದಾರಿ ಕೊಟ್ಟು, ಈವೆಂಟ್ ಮ್ಯಾನೇಜ್‍ಮೆಂಟ್ ಮಾಡುವ ಕೆಲಸ ಅಲ್ಲ. ಅದು ನಾಡಹಬ್ಬ, ಜನರ ಹಬ್ಬ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲರನ್ನೂ ಒಳಗೊಂಡು ಕಾರ್ಯನಿರ್ವಹಿಸಿ. ಇದಕ್ಕಾಗಿ ಪ್ರತ್ಯೇಕ ಸಲಹಾ ಸಮಿತಿಯನ್ನು ರಚಿಸಿ ಎಂದು ಸಲಹೆ ನೀಡಿದರು.ವಿಶೇಷವಾಗಿ ಅಲಂಕಾರ ಸಮಿತಿ, ಸ್ವಾಗತ ಸಮಿತಿಯ ಜವಾಬ್ದಾರಿ ಹೆಚ್ಚಿದೆ. ಯಾವುದೇ ಕಾರಣಕ್ಕೂ ಎಲ್ಲಿಯೂ ಕೊರತೆ ಯಾಗದಂತೆ ಎಚ್ಚರಿಕೆಯಿಂದ ಗಮನಿಸಿ, ಸಮಷ್ಟಿ ಪ್ರಯತ್ನದಿಂದ ದಸರಾವನ್ನು ಯಶಸ್ವಿಗೊಳಿಸೋಣ ಎಂದು ಆಶಿಸಿದ ಅವರು, ಪ್ರಸ್ತುತ ರಾಜ್ಯ ಸರ್ಕಾರದಿಂದ 1.50 ಕೋಟಿ ಹಣ ನಿಗ„ಯಾಗಿದೆ. ಇದನ್ನು ಹೆಚ್ಚಿಸಲು ಸಂಬಂ„ಸಿದ ಅ„ಕಾರಿಗಳು ಹಾಗೂ ಸಚಿವರನ್ನು ಭೇಟಿ ಮಾಡಿ ಪ್ರಯತ್ನ ಮಾಡಲಾಗುವುದು. ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗವುದು ಎಂದು ಭರವಸೆ ನೀಡಿದರು.
ಅಲಂಕಾರ ದಸರಾ, ಕಲಾ ದಸರಾ, ಚಲನಚಿತ್ರ ದಸರಾ, ರಂಗ ದಸರಾ, ಸಾಂಸ್ಕೃತಿಕ ದಸರಾ, ಮಹಿಳಾ ದಸರಾ, ಯೋಗ ದಸರಾ, ರೈತ ದಸರಾ ಸೇರಿದಂತೆ ವಿವಿಧ ಹದಿನಾಲ್ಕು ವಿಭಾಗಗಳಲ್ಲಿ ನಡೆಯುವ ದಸರಾವನ್ನು ಎಲ್ಲರೂ ಸೇರಿ ಅಚ್ಚುಕಟ್ಟಾಗಿ ನಿರ್ವಹಿಸೋಣ ಎಂದ ಅವರು, ಈ ಬಾರಿಯೂ ಸಹ ಅಂಬಾರಿ ಉತ್ಸವ ನಡೆಯಲಿದೆ. ಇದಕ್ಕಾಗಿ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ಗೊಂದಲಕ್ಕೆ ಅವಕಾಶ ಬೇಡ:
ಗಮಕಕಲೆ, ಪೌರಕಾರ್ಮಿಕ, ಪತ್ರಕರ್ತರ ದಸರಾಚರಣೆ
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಬಲ್ಕಿಶ್ ಭಾನು, ಡಾ.ಧನಂಜಯ್ ಸರ್ಜಿ, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಹಾಗೂ ವಿವಿಧ ಸಮಿತಿಗಳ ಕಾರ್ಯದರ್ಶಿಗಳು, ಸದಸ್ಯರು ಉಪಸ್ಥಿತರಿದ್ದರು.