ಕನ್ನಡ ಉಳಿಸುವತ್ತ ನಮ್ಮ ಪ್ರಯತ್ನ ಸಾಗಲಿ

KannadaprabhaNewsNetwork |  
Published : Nov 13, 2025, 12:05 AM IST
ಫೋಟೋ 12ಪಿವಿಡಿ1ಕನ್ನಡ ರಾಜ್ಯೋತ್ಸವದ ಅಂಗವಾಗಿ ಎಎಪಿಯಿಂದ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಎಪಿಯ ಜಿಲ್ಲಾ ಅಧ್ಯಕ್ಷ ಜಯರಾಮಯ್ಯ ಹಾಗೂ ಎನ್‌.ರಾಮಾಂಜಿನಪ್ಪ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡ ಉಳಿಸಿ ಬೆಳೆಸುವತ್ತ ನಮ್ಮ ಪ್ರಯತ್ನ ಸಾಗಲಿ ಎಂದು ಆಮ್‌ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾವಗಡದ ಎನ್‌.ರಾಮಾಂಜಿನಪ್ಪ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಕನ್ನಡ ಉಳಿಸಿ ಬೆಳೆಸುವತ್ತ ನಮ್ಮ ಪ್ರಯತ್ನ ಸಾಗಲಿ ಎಂದು ಆಮ್‌ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾವಗಡದ ಎನ್‌.ರಾಮಾಂಜಿನಪ್ಪ ಕರೆ ನೀಡಿದರು.

ಅವರು ಕನ್ನಡ ರಾಜ್ಯೋತ್ಸವ ಅಂಗವಾಗಿ ಬುಧವಾರದಂದು ತಾಲೂಕಿನ ಬ್ಯಾಡನೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಎಎಪಿಯ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರಿಂದ ತಾಲೂಕಿನದ್ಯಂತ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬ್ಯಾಡನೂರಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.ರಾಷ್ಟ್ರ ರಕ್ಷಣೆ ಸೇರಿದಂತೆ ಕನ್ನಡ ಉಳಿಸಿ ಬೆಳೆಸುವತ್ತ ಜಾಗೃತಿ ಮೂಡಿಸಲಾಗುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದರು. ಇದೇ ವೇಳೆ ತಾಲೂಕು ಎಎಪಿಯ ಅಧ್ಯಕ್ಷರನ್ನಾಗಿ ಬ್ಯಾಡನೂರು ವಕೀಲ ಆರ್‌.ತಿಪ್ಪೇಸ್ವಾಮಿ ಅವರನ್ನು ನೇಮಕಗೊಳಿಸಿ ಘೋಷಿಸಿದ ಬಳಿಕ ಇತರೆ ಪಕ್ಷ ತೊರೆದು ಎಎಪಿಗೆ ಸೇರ್ಪಡೆಯಾದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ತಾಲೂಕಿನ ಜನತೆಗೆ ರಾಜ್ಯೋತ್ಸವದ ಶುಭಾಶಯ ಕೋರಿದರು.

ಗಡಿನಾಡು ಸಾಹಿತಿ ಕರಿಯ ನಿಷಾದ ಅವರು ಪ್ರಧಾನ ಭಾಷಣ ಮಾಡಿ, ಕನ್ನಡ ಅಳಿವು ಉಳಿವಿಗಾಗಿ ಶ್ರಮಿಸಬೇಕು. ಕನ್ನಡಕ್ಕಾಗಿ ಉಳಿವಿಗೆ ಶ್ರಮಿಸಿದ ಸಾಹಿತಿ ಹೋರಾಟಗಾರರ ಸೇವೆ ಸ್ಮರಿಸಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಟೋಲ್ ಗೆಟ್ ಬಳಿಯ ಡಾ.ಬಿ.ಆರ್‌.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಕನ್ನಡಾಂಬೆಯ ತೇರು ಪ್ರವಾಸಕ್ಕೆ ಚಾಲನೆ ನೀಡಲಾಯಿತು. ರ್ಯಾಲಿಯೂ ಚಳ್ಳಕೆರೆ ಸರ್ಕಲ್ ಮೂಲಕ ಹಾಯ್ದು, ನಗರದ ಕನಕ ವೃತ್ತ, ಶನಿಮಹಾತ್ಮ ದೇವಸ್ಥಾನದ ಮಾರ್ಗವಾಗಿ ಗುಂಡಾರ್ಲಹಳ್ಳಿ, ಬ್ಯಾಡನೂರು, ಕಿಲಾರ್ಲಹಳ್ಳಿ, ವಡ್ಡರಹಟ್ಟಿ, ಬಿ ದೊಡ್ಡಹಟ್ಟಿ,ಸಿ.ಕೆ ಪುರ, ಮಂಗಳವಾಡ, ಅರಸೀಕೆರೆ,ಲಿಂಗದಹಳ್ಳಿ, ರಂಗಸಮುದ್ರ,ಇತರೆ ಗ್ರಾಮಗಳಲ್ಲಿ ಸಂಚರಿಸಿತು.

ಈ ವೇಳೆ ಕರ್ನಾಟಕ ರಾಜ್ಯ ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ರಾಜ್ಯ ಕಾರ್ಯದರ್ಶಿ ರವಿಕುಮಾರ್, ಸುರೇಶ್ ಮತ್ತು ತಂಡ , ಜಿಲ್ಲಾ ಅಧ್ಯಕ್ಷರು ಜಯರಾಮಯ್ಯ, ತಾಲೂಕು ಅಧ್ಯಕ್ಷ ಆರ್‌.ತಿಪ್ಪೇಸ್ವಾಮಿ ಸೇರಿದಂತೆ ಇತರರಿದ್ದರು.

PREV

Recommended Stories

250 ಕೋಟಿ ಹಗರಣ ಕಡತ ನಾಶ ಮಾಡಿದ್ರೂ ಸಿಕ್ಕಿದವು!?
ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ