ಕೇಂದ್ರದ ವಿಶ್ವಕರ್ಮ ಯೋಜನೆ ಜನಸಾಮಾನ್ಯರಿಗೆ ಒಂದು ದೊಡ್ಡ ಶಕ್ತಿ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ

KannadaprabhaNewsNetwork |  
Published : Nov 13, 2025, 12:05 AM IST
ಬೆಟ್ಟತಾವರೆಕೆರೆಯಲ್ಲಿ ಗುರುಶಿಷ್ಯ ಹಸ್ತಶಿಲ್ಪ ಪ್ರಶಿಕ್ಷಣ ಯೋಜನೆ ಸಮಾರೋಪ ಸಮಾರಂಭ | Kannada Prabha

ಸಾರಾಂಶ

ತರೀಕೆರೆಕುಂಬಾರಿಕೆ ಇತ್ಯಾದಿ ಸಾಂಪ್ರದಾಯಿಕ ವೃತ್ತಿ ಕಲೆಗಳು ಉಳಿದು ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆ ಜನಸಾಮಾನ್ಯರಿಗೆ ಒಂದು ದೊಡ್ಡ ಶಕ್ತಿಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಪಾದಿಸಿದರು.

- ಬೆಟ್ಟತಾವರೆಕೆರೆಯಲ್ಲಿ ಗುರುಶಿಷ್ಯ ಹಸ್ತಶಿಲ್ಪ ಪ್ರಶಿಕ್ಷಣ ಯೋಜನೆ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಕುಂಬಾರಿಕೆ ಇತ್ಯಾದಿ ಸಾಂಪ್ರದಾಯಿಕ ವೃತ್ತಿ ಕಲೆಗಳು ಉಳಿದು ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆ ಜನಸಾಮಾನ್ಯರಿಗೆ ಒಂದು ದೊಡ್ಡ ಶಕ್ತಿಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಪಾದಿಸಿದರು.

ಬುಧವಾರ ಮಡಿಕೆ ಮಾಡುವವರ ಕುಶಲ ಕೈಗಾರಿಕೆ ಸಹಕಾರ ಸಂಘ ನಿಯಮಿತ ಬೆಟ್ಟತಾವರೆಕೆರೆ, ಗುರುಶಿಷ್ಯ ಹಸ್ತಶಿಲ್ಪ ಪ್ರಶಿಕ್ಷಣ ಯೋಜನೆಯಿಂದ ಬೆಟ್ಟತಾವರಕೆರೆ ಗೌರಮ್ಮದೇವಿ ಸಮುದಾಯ ಭವನದಲ್ಲಿ ನಡೆದ ಸಮಾರೋಪ, 30 ಜನರ 50 ದಿನಗಳ ತರಬೇತಿ ಪಡೆದವರಿಗೆ ಮತ್ತು ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮದ ಅಭಿನಂದನಾ ಪ್ರಮಾಣ ಪತ್ರ ವಿತರಣೆ ಸಮಾರಂಭದ ಉದ್ಘಾಟಿಸಿ ಮಾತನಾಡಿದರು.ಕುಂಬಾರಿಕೆ ಇತ್ಯಾದಿ ಸಾಂಪ್ರದಾಯಕ ವೃತ್ತಿ ಕಲೆಗಳನ್ನು ಕುರಿತು ತರಬೇತಿ ನೀಡಿ, ಅರ್ಥಿಕ ಶಕ್ತಿ ತುಂಬಬೇಕು. ನಮ್ಮ ಬದುಕು ಬದಲಾದಂತೆ ನಮ್ಮ ಕಲೆ, ವೃತ್ತಿಯನ್ನೂ ಆಧುನೀಕರಿಸಬೇಕು. ಕುಂಬಾರಿಕೆ ಇತ್ಯಾದಿ ಬೇರೆ ಬೇರೆ ಸಾಂಪ್ರ ದಾಯಕ ವೃತ್ತಿ ಕಲೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆಯಡಿ ₹12 ಸಾವಿರ ಕೋಟಿ ಮಂಜೂರು ಮಾಡಿದೆ. ಸಾಂಪ್ರದಾಯಕ ವೃತ್ತಿ ಕಲೆಗಳಲ್ಲಿ 6552 ಮಂದಿ ತರಬೇತಿ ಪಡೆದಿದ್ದು 2043 ಮಂದಿಗೆ ಸಾಲ ಮಂಜೂ ರಾಗಿದೆ. ಅಂಚೆ ಇಲಾಖೆ ಮೂಲಕ 15 ಸಾವಿರ ಜನರಿಗೆ ಕಿಟ್ ಗಳನ್ನು ವಿತರಿಸಲಾಗಿದೆ. 15 ಸಾವಿರ ಜನರಿಗೆ ₹1 ಲಕ್ಷ ಅರ್ಥಿಕ ನೆರವು ಕೊಡಲಾಗುತ್ತಿದೆ. ವೃತ್ತಿ ಕಲೆಗಳಲ್ಲಿ ಸಿದ್ಧಪಡಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲಾಗಿದೆ ಎಂದು ಹೇಳಿದರು. ಈ ಸಾಂಪ್ರದಾಯಕ ಉದ್ದಿಮೆಗಳು ಉನ್ನತೀಕರಣಕ್ಕೆ ಆದ್ಯತೆ ನೀಡಬೇಕಿದೆ. ಬಹಳ ಸುಂದರ ಅಲಂಕಾರಿಕ ಮಡಿಕೆಗಳನ್ನು ತಯಾರಿಸಲಾಗಿದೆ. ಕಲೆಗಳಿಗೆ ರಾಷ್ಟ್ರಮಟ್ಟದಲ್ಲಿ ಬೇಡಿಕೆ ಹೆಚ್ಚಾಗಲಿ, ಸಾಂಪ್ರದಾಯಕ ಕಲೆ ಉದ್ಯೋಗ ಗಳು ಹೆಚ್ಚಾಗಲಿ ಎಂದು ಹಾರೈಸಿದರು.ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ಸ್ವದೇಶಿ ವಸ್ತುಗಳನ್ನು ಬಳಸಬೇಕು ಎಂಬುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಶಯ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳು ನಮ್ಮ ಜನರಿಗೆ ತಲುಪಬೇಕೆಂದು ಸಂಸದರು ಸಂಬಂದಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಿದರು.ವಿಶ್ವಕರ್ಮ ಯೋಜನೆ ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಶಸ್ವಿಯಾಗಿ ಪ್ರಥಮ ಸ್ಥಾನ ಪಡೆದಿದೆ. ಬೆಟ್ಟತಾವರೆ ಕೆರೆಯಲ್ಲಿ ತಯಾರಾಗುವ ಸಾಂಪ್ತದಾಯಕ ವೃತ್ತಿ ಕಲೆಗಳಿಗೆ ಬಹಳ ಬೇಡಿಕೆ ಇದೆ. ಬೆಟ್ಟತಾವರೆಕೆರೆಯಲ್ಲಿ ವಿವಿಧ ಶೈಲಿ ಯಲ್ಲಿ ಮಡಕೆ, ದೀಪಾವಳಿ ದೀಪಗಳು ಇತ್ಯಾದಿ ವಿವಿಧ ವಸ್ತುಗಳು ತಯಾರಾಗುತ್ತಿದೆ, ಬೆಟ್ಟತಾವರೆಕೆರೆಯಲ್ಲಿ 30 ಜನರಿಗೆ 50 ದಿನಗಳಿಂದ ತರಬೇತಿ ನೀಡಲಾಗಿದೆ., ತರಬೇತಿ ಪಡೆದವರಿಗೆ ಸಂಸದರೇ ಅಗಮಿಸಿ ಅಭಿನಂದನಾ ಪ್ರಮಾಣ ಪತ್ರ ನೀಡಬೇಕೆಂಬ ಆಶಯ ಈಡೇರಿದೆ. ಮುಂದಿನ ದಿನಗಳಲ್ಲಿ ನಡೆಯುವ ವಸ್ತು ಪ್ರದರ್ಶನದಲ್ಲಿ ಎಲ್ಲರೂ ಭಾಗವಹಿಸಿ ಎಂದರು.ಚಿಕ್ಕಮಗಳೂರು ದಿಶಾ ಸಮಿತಿ ನಾಮ ನಿರ್ದೇಶಿತ ಸದಸ್ಯರು, ದೋರನಾಳು ಗ್ರಾಪಂ ಮಾಜಿ ಅಧ್ಯಕ್ಷೆ ರಾಜೇಶ್ವರಿ ರಾಜಶೇಖರ್ ಮಾತನಾಡಿ ಇಂದಿನ ಯಾಂತ್ರಿಕ ಯುಗದಲ್ಲೂ ಈ ಮಣ್ಣಿನ ಕಲೆ ಜೀವಂತವಾಗಿರಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ತರಬೇತಿಯ ಉದ್ದೇಶವೇ ಅದು. ಕುಂಬಾರರಿಗೆ ತಾಂತ್ರಿಕ ಮತ್ತು ಸೃಜನಾತ್ಮಕ ತರಬೇತಿ ನೀಡಿ ಅವರ ಕೌಶಲ್ಯ ಹೊಸ ವಿನ್ಯಾಸ ಶೈಲಿಗಳಲ್ಲಿ ಮಡಿಕೆ ಮತ್ತು ಅಲಂಕಾರಿಕ ಸಾಮಗ್ರಿಗಳನ್ನು ತಯಾರಿಸಲಾಗುತ್ತಿದೆ ಎಂದು ಹೇಳಿದರು.ನಾವು ಎಲ್ಲರೂ ಈ ಕುಂಬಾರಿಕೆಗೆ ಗೌರವ, ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು. ಈನಿಟ್ಟಿನಲ್ಲಿ 50 ದಿನಗಳ ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಹೇಳಿದರು.ಕುಂಟಿನಮಡು ಜಿಪಂ ಮಾಜಿ ಅಧ್ಯಕ್ಷ ಕೆ.ಆರ್.ದೃವಕುಮಾರ್ ಮಾತನಾಡಿ, ವಿಶ್ವಕರ್ಮ ಯೋಜನೆ ಯಶಸ್ವಿಯಾಗಿ ಜಾರಿಯಾಗಲು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವಕರ್ಮ ಯೋಜನೆ ಅನುಷ್ಠಾನಕ್ಕೆ ತಂದು ಹೆಚ್ಚು ಉತ್ತೇಜನ ಮತ್ತು ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ಹೇಳಿದರು.ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ ಮಾತನಾಡಿ ಕೇಂದ್ರ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಸಂಸದರು ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಅನೇಕ ಸಭೆ ಗಳನ್ನು ನಡೆಸಿದ್ದಾರೆ. ಅವರು ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚು ಪ್ರವಾಸ ಮಾಡಿ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ ಎಂದು ಹೇಳಿದರು.

ಬೆಟ್ಟತಾವರೆಕೆರೆ ಕುಂಬಾರ ಸಂಘ ಅಧ್ಯಕ್ಷ ಬಿ.ವಿ.ರವಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅದ್ಯಕ್ಷೆ ಜಯಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಕಲ್ಲೇಶಪ್ಪ, ಸುಮಿತ್ರ, ಬಿಜೆಪಿ ತಾಲೂಕು ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ, ಮುಖಂಡರಾದ ರಾಜಶೇಖರ್, ನಂಜುಂಡಪ್ಪ, ಸುರೇಶ್, ಪಾಟ್ರಿ ಅರ್ಟ್ ಟ್ರೈನ್ ಮಾಸ್ಟರ್ ಎನ್.ಬಿ.ಭಾಗ್ಯವತಿ, ಮೈಸೂರು ಕರಕುಶಲ ಅಭಿವೃದ್ಧಿ ಅಧಿಕಾರಿ ಶಬೀರಾ, ಸಹಾಯಕ ನಿರ್ದೇಶಕ ವಿನೋದ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

-

12ಕೆಟಿಆರ್.ಕೆ.1ಃ

ತರೀಕೆರೆ ಸಮೀಪದ ಬೆಟ್ಟತಾವರೆಕೆರೆಯಲ್ಲಿ ನಡೆದ ಕಾರ್ಯಕ್ರಮವನ್ನು ಉಡುಪಿ-ಚಿಕ್ಕಮಗಳೂರು ಸಂಸದ

ಕೋಟಾ ಶ್ರೀನಿವಾಸ ಪೂಜಾರಿ ನೆರವೇರಿಸಿದರು. ಮಾಜಿ ಶಾಸಕ ಡಿ.ಎಸ್.ಸುರೇಶ್, ಚಿಕ್ಕಮಗಳೂರು ದಿಶಾ ಸಮಿತಿ ನಾಮ ನಿರ್ದೇಶಿತ ಸದಸ್ಯೆ ರಾಜೇಶ್ವರಿ ರಾಜಶೇಖರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ, ಜಿಪಂ ಮಾಜಿ ಅಧ್ಯಕ್ಷ ಕೆ.ಆರ್.ದೃವಕುಮಾರ್, ಪಾಟ್ರಿ ಅರ್ಟ್ ಟ್ರೈನ್ ಮಾಸ್ಟರ್ ಎನ್.ಬಿ.ಭಾಗ್ಯವತಿ ಮತ್ತಿತರರು ಇದ್ದರು.

PREV

Recommended Stories

250 ಕೋಟಿ ಹಗರಣ ಕಡತ ನಾಶ ಮಾಡಿದ್ರೂ ಸಿಕ್ಕಿದವು!?
ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ