ಶರಣ ಮೊಗ್ಗಿಮಾಯಿದೇವರ ಬಗ್ಗೆ ಇನ್ನಷ್ಟು ಸಂಶೋಧನೆಯಾಗಲಿ

KannadaprabhaNewsNetwork |  
Published : Mar 05, 2025, 12:30 AM IST
 ಹಿರೇಮಾಗಿ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಮೊಗ್ಗಿಮಾಯಿದೇವರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ವಿಜಯನಗರ ಅರಸರ ಕಾಲದಲ್ಲಿದ್ದ, ಶ್ರೇಷ್ಠ ವಚನಕಾರ ಮೊಗ್ಗಿಮಾಯಿದೇವರ ಬಗ್ಗೆ ಹೆಚ್ಚು ಪ್ರಚಾರವಿಲ್ಲ, ಅವರ ಬಗ್ಗೆ ಇನ್ನಷ್ಟು ಸಂಶೋಧನೆ ಆಗಬೇಕಿದೆ. ಅವರ ಹುಟ್ಟೂರಲ್ಲಿ ಅವರ ಹೆಸರಿನಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ, ಗೌರವಿಸುತ್ತಿರುವ ಇಲ್ಲಿನ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘದ ಕಾರ್ಯ ಸ್ತುತ್ಯಾರ್ಹ ಎಂದು ಸಾಹಿತಿ ಡಾ.ಅಶೋಕ ನರೋಡೆ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಅಮೀನಗಡ

ವಿಜಯನಗರ ಅರಸರ ಕಾಲದಲ್ಲಿದ್ದ, ಶ್ರೇಷ್ಠ ವಚನಕಾರ ಮೊಗ್ಗಿಮಾಯಿದೇವರ ಬಗ್ಗೆ ಹೆಚ್ಚು ಪ್ರಚಾರವಿಲ್ಲ, ಅವರ ಬಗ್ಗೆ ಇನ್ನಷ್ಟು ಸಂಶೋಧನೆ ಆಗಬೇಕಿದೆ. ಅವರ ಹುಟ್ಟೂರಲ್ಲಿ ಅವರ ಹೆಸರಿನಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ, ಗೌರವಿಸುತ್ತಿರುವ ಇಲ್ಲಿನ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘದ ಕಾರ್ಯ ಸ್ತುತ್ಯಾರ್ಹ ಎಂದು ಸಾಹಿತಿ ಡಾ.ಅಶೋಕ ನರೋಡೆ ಬಣ್ಣಿಸಿದರು.

ಸಮೀಪದ ಹಿರೇಮಾಗಿ ಗ್ರಾಮದಲ್ಲಿ ಜರುಗಿದ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ, ಮೊಗ್ಗಿ ಮಾಯಿದೇವರ 643ನೇ ಜಯಂತ್ಯೋತ್ಸವ ಹಾಗೂ 2ನೇ ವರ್ಷದ ರಥೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದೇ ವೇಳೆ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 10 ಜನ ಸಾಧಕರಿಗೆ ಮೊಗ್ಗಿ ಮಾಯಿದೇವರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಿದ್ದರಾಮಯ್ಯ ಮಠಪತಿ (ಸಂಗೀತ), ನೀಲಪ್ಪ ತೆಗ್ಗಿ (ಶಿಕ್ಷಣ), ಗವಿಸಿದ್ದಯ್ಯ ಹಳ್ಳಿಕೇರಿಮಠ (ಕಲೆ), ಲಿಂಗರಾಜ ಜಾಡರ ಹಾಗೂ ಮಲ್ಲಯ್ಯ ಕೋಮಾರಿ (ರಂಗಭೂಮಿ), ಡಾ.ಅಶೋಕ ನರೋಡೆ, ಡಾ.ತಿಪ್ಪೇಸ್ವಾಮಿ (ಸಾಹಿತ್ಯ), ಅಮರೇಶ ನಾಗೂರ (ಪತ್ರಿಕೋದ್ಯಮ), ರವಿ ಸಜ್ಜನ (ಕೃಷಿ), ಸಿ.ಎಲ್. ಗೋಪಾಲಕೃಷ್ಣಪ್ಪ (ಜನಪದ) ಸಾಧಕರಿಗೆ ಮೊಗ್ಗಿಮಾಯಿದೇವರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪುರತಗೇರಿ ಹಿರೇಮಠದ ಅಭಿನವ ಕೈಲಾಸಲಿಂಗ ಶಿವಾಚಾರ್ಯಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಹನುಮಂತ ಎಮ್ಮೆಟ್ಟಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಪಿ.ಎಚ್.ಪವಾರ ಹಾಗೂ ಗ್ರಾಮದ ಗಣ್ಯರು,ಸಂಘದ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ