ನಮ್ಮ ಪರಂಪರೆ ಬಿಂಬಿಸುವ ಭರತ ನಾಟ್ಯ ಕಲಿಸಿ

KannadaprabhaNewsNetwork |  
Published : Mar 05, 2025, 12:30 AM IST
ಪೊಟೋ೪ಸಿಪಿಟಿ೪: ನಗರದ ಶತಮಾನೋತ್ಸವ ಭವನದಲ್ಲಿ ಶ್ರೀ ಭವಾನಿ ಕಲಾನಿಕೇತನ ಸಂಸ್ಥೆ (ಭರತನಾಟ್ಯ ಹಾಗೂ ಸಂಗೀತ ಶಾಲೆ) ಯ ನಾಲ್ಕನೇ ವರ್ಷದ ವಾರ್ಷಿಕೋತ್ಸವದಲ್ಲಿ ಭರತನಾಟ್ಯ ಕಲಾವಿದರಿಗೆ ಪಾರಿತೋಷಕ ನೀಡಲಾಯಿತು. | Kannada Prabha

ಸಾರಾಂಶ

ಪ್ರಾಚೀನ ಕಲೆಯಾದ ಭರತ ನಾಟ್ಯ ಕಲೆಯನ್ನು ಮಕ್ಕಳಿಗೆ ಕಲಿಸಿ, ಉಳಿಸಿ ಬೆಳೆಸಬೇಕು. ನಮ್ಮ ಸಂಸ್ಕೃತಿಯ ಉಳಿವಿಗಾಗಿ ಈ ಕಲೆ ಶ್ರೀಮಂತಗೊಳ್ಳುವ ಅವಶ್ಯಕತೆ ಇದೆ ಎಂದು ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಪ್ರಾಚೀನ ಕಲೆಯಾದ ಭರತ ನಾಟ್ಯ ಕಲೆಯನ್ನು ಮಕ್ಕಳಿಗೆ ಕಲಿಸಿ, ಉಳಿಸಿ ಬೆಳೆಸಬೇಕು. ನಮ್ಮ ಸಂಸ್ಕೃತಿಯ ಉಳಿವಿಗಾಗಿ ಈ ಕಲೆ ಶ್ರೀಮಂತಗೊಳ್ಳುವ ಅವಶ್ಯಕತೆ ಇದೆ ಎಂದು ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ಅಭಿಪ್ರಾಯಪಟ್ಟರು.ನಗರದ ಶತಮಾನೋತ್ಸವ ಭವನದಲ್ಲಿ ಶ್ರೀ ಭವಾನಿ ಕಲಾನಿಕೇತನ ಸಂಸ್ಥೆ (ಭರತನಾಟ್ಯ ಹಾಗೂ ಸಂಗೀತ ಶಾಲೆ) ಯ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದ ಅವರು, ಪಾಶ್ಚಿಮಾತ್ಯ ಕಲೆ, ಸಂಸ್ಕೃತಿಯನ್ನು ತಿರಸ್ಕರಿಸಿ, ಪ್ರಪಂಚದಲ್ಲೇ ಗೌರವ-ಘನತೆ ತಂದುಕೊಟ್ಟಿರುವ ಭಾರತೀಯ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಭರತ ನಾಟ್ಯ ಕಲೆಯನ್ನು ತಮ್ಮ ಮಕ್ಕಳಿಗೆ ಕಲಿಸಿ, ಉಳಿಸಿ ಬೆಳೆಸಲು ಪಾಲಕರು ಮತ್ತು ಸಂಘ ಸಂಸ್ಥೆಗಳು ಮುಂದಾಗಬೇಕು ಎಂದರು.ಸಮಾಜ ಸೇವಕ, ಉದ್ಯಮಿ ಪ್ರಸನ್ನ ಪಿ.ಗೌಡ ಮಾತನಾಡಿ, ಶ್ರೀಮಂತರ ಕಲೆ ಎಂದೇ ಬಿಂಬಿತವಾಗಿರುವ ಭರತನಾಟ್ಯ ಕಲೆಯನ್ನು ಜನ ಸಾಮಾನ್ಯರ ಬಳಿಗೆ ತರುತ್ತಿರುವುದು ಶ್ಲಾಘನೀಯ. ಇಂತಹ ಸಂಘ ಸಂಸ್ಥೆಗಳಿಗೆ ಸರ್ಕಾರ ಮತ್ತು ಸಾರ್ವಜನಿಕರ ಪ್ರೋತ್ಸಾಹ ಅತ್ಯಗತ್ಯ. ಕಲೆಗೆ ಬೆಲೆ ಕಟ್ಟದೇ ಬಡ ಮಕ್ಕಳಿಗೆ ಆ ಕಲೆಯನ್ನು ಕಲಿಸಿ ಉಳಿಸಿದಾಗ ಸಂಸ್ಥೆಗೆ ಮತ್ತು ಕಲಾ ಶಿಕ್ಷ ಕರಿಗೆ ಮತ್ತಷ್ಟು ಗೌರವ, ಶಕ್ತಿ ಸಿಗುತ್ತದೆ. ಭಾರತೀಯ ಕಲೆ ಸಂಸ್ಕೃತಿ ಉಳಿಸಿ ಬೆಳೆಸಲು ಮುಂದಾಗಿರುವ ಭವಾನಿ ಕಲಾನಿಕೇತನ ಸಂಸ್ಥೆಯ ಆಶಯ ಈಡೇರಲಿ. ಇಂತಹ ಸಂಸ್ಥೆಗಳಿಗೆ ಪೋಷಕರು ಮತ್ತು ಸಾರ್ವಜನಿಕರ ಸಹಕಾರ ಪ್ರೋತ್ಸಾಹ ಇರಲಿ ಎಂದು ಆಶಿಸಿದರುಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು ಮಾತನಾಡಿ, ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮುಂದಾಗುವ ಸಂಘ ಸಂಸ್ಥೆಗಳಿಗೆ, ಕಲಾವಿದರಿಗೆ ಸಮಾಜದ ಸಹಕಾರ ಅತ್ಯಗತ್ಯ ಎಂದು ಪ್ರತಿಪಾದಿಸಿದರು.ಎಸ್ಡಿಎಂಸಿ ಸಮನ್ವಯ ವೇದಿಕೆ ರಾಜ್ಯ ಉಪಾಧ್ಯಕ್ಷ ನಾಗವಾರ ಶಂಭೂಗೌಡ, ಸಮಾಜ ಸೇವಕ ಆದರ್ಶಕುಮಾರ್, ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ರಾಂಪುರ ಧರಣೇಶ್, ಸೇವಾದಳದ ಅಧ್ಯಕ್ಷ ಗೋವಿಂದಯ್ಯ, ಆಯುರ್ವೇದಿಕ್ ವೈದ್ಯ ಡಾ.ಪ್ರಜ್ವಲ್ ಗೌಡ, ಇಂಡಿಯನ್ ಆಕ್ಸ್‌ಫರ್ಡ್ ಶಾಲೆ ಸಂಸ್ಥಾಪಕಿ ಮಾಲಿನಿ, ಸಾರ್ವಜನಿಕ ಪಿಯು ಕಾಲೇಜಿನ ಕೃಷ್ಣಪ್ಪ, ಭವಾನಿ ಕಲಾನಿಕೇತನ ಸಂಸ್ಥೆಯ ಮಧುರಾ ಮಧುಸೂಧನ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ