ಹಸಿರು, ಉಸಿರಿಗಾಗಿ ಪರಿಸರ ಉಳಿಸೋಣ: ಶಾಸಕ ಡಿ.ಜಿ.ಶಾಂತನಗೌಡ

KannadaprabhaNewsNetwork |  
Published : Jun 06, 2026, 01:15 AM IST
5 ಎಚ್.ಎಲ್.ಐ3.ಅರಣ್ಯ ಇಲಾಖೆವತಿಯಿಂದ ಮಾದನಬಾವಿ ಗ್ರಾಮದ ಸಮೀಪದ ಟ್ರೀ ಪಾರ್ಕ್ ನಲ್ಲಿ  ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಶಾಸಕ ಡಿ.ಜಿ.ಶಾಂತನಗೌಡ  ಮಾತನಾಡಿದರು | Kannada Prabha

ಸಾರಾಂಶ

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಹಸಿರು, ಉಸಿರಿಗಾಗಿ ನಾವೆಲ್ಲರೂ ಕೂಡ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಬೇಕಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಹಸಿರು, ಉಸಿರಿಗಾಗಿ ನಾವೆಲ್ಲರೂ ಕೂಡ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಬೇಕಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಅರಣ್ಯ ಇಲಾಖೆ ವತಿಯಿಂದ ಶುಕ್ರವಾರ ಮಾದನಬಾವಿ ಸಮೀಪದ ಟ್ರೀ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು

ಪ್ರಸ್ತುತ ದಿನಗಳಲ್ಲಿ ಶರವೇಗದಲ್ಲಿ ಬೇಳೆಯುತ್ತಿರುರ ನಗರಗಳು, ರಸ್ತೆ ಇತರೆ ಅಭಿವೃದ್ದಿ ಕಾರಣಗಳಿಂದಾಗಿ ಕಾಡು ನಾಶವಾಗುತ್ತಿದೆ ಇನ್ನೊಂದೆಡೆ ಸಾಕಷ್ಟು ರೀತಿಯಲ್ಲಿ ರಾಸಾಯನಿಕ ವಸ್ತುಗಳು, ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರದ ಮೇಲೆ ನಿರಂತರ ದುಷ್ಪರಿಣಾಮ ಬೀರುತ್ತಿರುವ ಕಾರಣ ಜಾಗತೀಕ ತಾಪಮಾನ ಏರಿಕೆ,ಪರಿಸರ ಮಾಲಿನ್ಯದಿಂದ ಮನುಕುಲ ತೊಂದರೆ ಅನುಭವಿಸುವಂತಾಗಿದ್ದು, ಇನ್ನು ಮುಂದಾದರೂ ಮನುಷ್ಯ ಎಚ್ಚೇತ್ತುಕೊಂಡು ಪರಿಸರ ಕಾಳಜಿ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ತಾಲೂಕಿನ ಮಾದನಬಾವಿ ಸಮೀಪ ಆರಣ್ಯ ಇಲಾಖೆಯವರು ಟ್ರೀ ಪಾರ್ಕ ಮಾಡಿ ಇಲ್ಲಿ ಅನೇಕ ವಿವಿಧ ಮರಗಿಡಗಳನ್ನು ಬೆಳೆಸಿದ್ದು, ಪಾರ್ಕ್‌ ವ್ಯವಸ್ಥೆ ಮಾಡಿ ಇಲ್ಲಿ ಮಕ್ಕಳು ಆಟವಾಡಲು ಅನೇಕ ರೀತಿಯ ವ್ಯವಸ್ಥೆ ಮಾಡಿದ್ದಾರೆ. ಆದರೆ ಇದು ಇನ್ನೂ ಕೂಡ ಅಧಿಕೃತವಾಗಿ ಉದ್ಘಾಟನೆಯಾಗದಿರುವುದರಿಂದ ಸಾರ್ವಜನಿಕರಿಗೆ ಪ್ರವೇಶ ನೀಡುವಲ್ಲಿ ಅಧಿಕಾರಿಗಳು ಹಿಂದೇಟು ಹಾಕಿದ್ದು ,ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಶಾಲಾ ಮಕ್ಕಳು,ಪ್ರಯಾಣಿಕರು, ಸಾರ್ವ ಜನಿಕರು ಈ ಮಾರ್ಗವಾಗಿ ಹೋಗುವಾಗ. ಈ ಟ್ರಿ ಪಾರ್ಕ ಒಳಗಡೆಗೆ ಬಂದು ಊಟ ಉಪಚಾರ,ವಿಶ್ರಾಂತಿ, ಅಥವಾ ವಾಯು ವಿಹಾರಕ್ಕೆ ಅನುಮಾಡಿಕೊಡುವ ಬಗ್ಗೆ ವ್ಯವಸ್ಥೆ ಕಲ್ಪಿಸಲಾಗುವುದು, ಒಟ್ಟಾರೆಯಾಗಿ ಈ ಟ್ರೀ ಪಾರ್ಕ್‌ 15 ಹೆಕ್ಟೇರ್ ಪ್ರದೇಶದಲ್ಲಿದ್ದು, ಉತ್ತಮ ಪರಿಸರವನ್ನು ಹೊಂದಿದೆ ಇದರ ಸದುಪಯೋಗ ಪಡೆಯೋಣ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಅಗಮಿಸಿದ್ದ ಪಕ್ಕದಲ್ಲೇ ಇರುವ ಮೊರಾರ್ಜಿ ವಸತಿ ಶಾಲೆಯ ಮಕ್ಕಳಿಗೆ ಸಮಯ ಸಿಕ್ಕಾಗ ಈ ಪ್ರದೇಶಕ್ಕೆ ಶಿಕ್ಷಕರೊಂದಿಗೆ ಬಂದು ಕ್ರೀಡೆ ಮುಂತಾದ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ ಎಂದು ಮಕ್ಕಳು ಮತ್ತು ಶಾಲೆಯ ಶಿಕ್ಷಕರಿಗೆ ತಿಳಿಸಿದರು.

ಹೊನ್ನಾಳಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಿಶೋರ್, ಸಾಮಾಜಿಕ ಅರಣ್ಯಾಧಿಕಾರಿ ಹನುಮಂತ ನಾಯ್ಕ, ಹರೀಶ್, ನಾಯ್ಕ, ಸಿಬ್ಬಂದಿಗಳಾ ಅಂಜಲಿ, ಆಶಾ, ನಾಗಲಿಂಗಪ್ಪ, ಸಂತೋಷ್, ತಾಲೂಕು ಪಂಚಾಯಿತಿ ತಾಂತ್ರಿಕ ಸಂಯೋಜಕ ಚನ್ನಪ್ಪ,ಉಪನ್ಯಾಸಕ ಕರಿಬಸಪ್ಪ,ಮುರಾರ್ಜಿ ವಸತಿ ಶಾಲೆಯ ಶಿಕ್ಷಕರು,ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಲು ಮನವಿ
ಪರಿಸರ ನಾಶದಿಂದ ಮಳೆಗಾಲದಲ್ಲೂ ಗಾಳಿ ಬೀಸುವ ಸ್ಥಿತಿ: ನ್ಯಾ.ಮಂಜುನಾಥ ಬಣಕಾರ್