ಮುಕ್ತಿಮಂದಿರ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸೋಣ: ಜಯಪ್ರಕಾಶ್

KannadaprabhaNewsNetwork |  
Published : Oct 25, 2025, 01:00 AM IST
ಮುಕ್ತಿಮಂದಿರ ಕ್ಷೇತ್ರದ ಅಭಿವೃದ್ಧಿ ಕುರಿತು ಸಭೆಯಲ್ಲಿ ಜಯಪ್ರಕಾಶ್  ಮಾತನಾಡಿದರು. | Kannada Prabha

ಸಾರಾಂಶ

ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಯಾತ್ರಿ ನಿವಾಸ, ಕುಡಿಯುವ ನೀರಿನ ವ್ಯವಸ್ಥೆ, ಬಸ್ ಸಂಚಾರ, ಕೆರೆಗಳು ಅಭಿವೃದ್ಧಿ, ರಸ್ತೆ ಸಂಪರ್ಕ ಕಲ್ಪಿಸುವ ಕುರಿತು ಚರ್ಚಿಸಲಾಯಿತು.

ಲಕ್ಷ್ಮೇಶ್ವರ: ಸಮೀಪದ ಮುಕ್ತಿಮಂದಿರದಲ್ಲಿ ತ್ರಿಕೋಟಿ ಲಿಂಗಗಳ ಸ್ಥಾಪನೆ ಸನ್ನಿಹಿತವಾಗಿದೆ. ಆದ್ದರಿಂದ ಕ್ಷೇತ್ರದ ಅಭಿವೃದ್ಧಿಯಾದಲ್ಲಿ ಬರುವ‌ ಯಾತ್ರಿಕರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುವ ಕಾರ್ಯ ಮಾಡಬೇಕು ಎಂದು ಬೃಹತ್ ನೀರಾವರಿ ನಿಗಮದ ಎಂಜಿನಿಯರ್ ಜಯಪ್ರಕಾಶ್ ತಿಳಿಸಿದರು.

ಶುಕ್ರವಾರ ಸಮೀಪದ ಮುಕ್ತಿಮಂದಿರದಲ್ಲಿ ತ್ರಿಕೋಟಿ ಲಿಂಗಗಳ ಸ್ಥಾಪನೆ ಹಾಗೂ ಕ್ಷೇತ್ರದ ಅಭಿವೃದ್ಧಿ ಕುರಿತು ಸಭೆಯಲ್ಲಿ ಮಾತನಾಡಿದರು.ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಯಾತ್ರಿ ನಿವಾಸ, ಕುಡಿಯುವ ನೀರಿನ ವ್ಯವಸ್ಥೆ, ಬಸ್ ಸಂಚಾರ, ಕೆರೆಗಳು ಅಭಿವೃದ್ಧಿ, ರಸ್ತೆ ಸಂಪರ್ಕ ಕಲ್ಪಿಸುವ ಕುರಿತು ಚರ್ಚಿಸಲಾಯಿತು. ಸಭೆಯ ಸಾನ್ನಿಧ್ಯವನ್ನು ನೊಣವಿನಕೇರಿಯ ಕಾಡಸಿದ್ದೇಶ್ವರ ಮಠದ ಕರಿವೃಷಭ ಸ್ವಾಮಿಗಳು ವಹಿಸಿದ್ದರು.

ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಧರ್ಮಾಧಿಕಾರಿ ವಿಮಲರೇಣುಕ ವೀರಮುಕ್ತಿ ಸ್ವಾಮಿಗಳು ಸಭೆಯ ನೇತೃತ್ವ ವಹಿಸಿದ್ದರು. ಸಭೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಗಂಗಣ್ಣ ಮಹಾಂತಶೆಟ್ಟರ, ಗಂಗಾಧರ ಮೆಣಸಿನಕಾಯಿ, ಅನಿಲ ಮುಳಗುಂದ, ಎಂ.ಎಂ. ಭಕ್ತಿಮಠ ಸೇರಿದಂತೆ ಅನೇಕರು ಇದ್ದರು. ಬೆಂಗಳೂರು ಹಾಗೂ ತಾಲೂಕಿನ ಲೋಕೋಪಯೋಗಿ, ನೀರಾವರಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಮುಳಗುಂದದಲ್ಲಿ ಧಾರಾಕಾರ ಮಳೆ

ಮುಳಗುಂದ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಅರ್ಧ ತಾಸಿಗೂ ಅಧಿಕ ಧಾರಾಕಾರ ಮಳೆ ಸುರಿದಿದೆ.ಬೆಳಗ್ಗೆಯಿಂದ ಮೊಡ ಕವಿದ ವಾತಾವರಣವಿದ್ದು, ಆಗಾಗ್ಗೆ ಜಿಟಿ ಜಿಟಿ ಮಳೆ ಸುರಿದು, ಸಂಜೆ ಅರ್ಧ ತಾಸಿಗೂ ಅಧಿಕ ರಭಸದ ಮಳೆಯಾಗಿದೆ. ರೈತರು ಮೆಕ್ಕೆಜೋಳ ಕಟಾವು ಮಾಡಿಕೊಂಡು ಸಿಸಿ ರಸ್ತೆ, ಖುಲ್ಲಾ ಜಾಗಗಳಲ್ಲಿ ಒಕ್ಕಲು ಮಾಡಲು ತಂದು ಹಾಕಿದ್ದು, ಒಕ್ಕಲಿಗೂ ಬಿಡುವು ನೀಡದೆ ಮಳೆ ಸುರಿಯುತ್ತಿದ್ದು, ಮೆಕ್ಕೆಜೋಳ ರಕ್ಷಣೆ ಮಾಡುವಲ್ಲಿ ರೈತರು ಹೈರಾಣಾಗಿದ್ದಾರೆ.ಇನ್ನು ಕೆಲ ಪ್ರದೇಶಗಳಲ್ಲಿ ಮಳೆಯಿಂದ ಬೆಳೆ ಕಟಾವು ಮಾಡಲು ಸಾಧ್ಯವಾಗದೆ ಹೊಲದಲ್ಲಿಯೇ ಬಿಟ್ಟಿದ್ದು, ತೇವಾಂಶ ಹೆಚ್ಚಾಗಿ ಮೊಳಕೆಯೊಡೆಯುವ ಭೀತಿ ಎದುರಾಗದೆ.

ಕಂಟಕವಾದ ಮಳೆ: ಪ್ರಸಕ್ತ ವರ್ಷ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದರಿಂದ ಈ ವರ್ಷ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ದುಃಸ್ವಪ್ನವಾಗಿ ಕಾಡಿದೆ. ಪ್ರತಿ ಬೆಳೆ ಕಟಾವಿಗೆ ಬಂದ ಸಂದರ್ಭದಲ್ಲಿಯೂ ಮಳೆ ಸುರಿದು ಬೆಳೆ ಹಾನಿಯಾಗಿದ್ದು, ಮಳೆ ರೈತರಿಗೆ ವರದಾನವಾಗಿರುವುದಕ್ಕಿಂತ ಕಂಟಕವಾಗಿ ಪರಿಣಮಿಸಿದೆ.ಹೆಸರು ಬೆಳೆ ಕಟಾವು ಸಂದರ್ಭದಲ್ಲಿ ನಿತ್ಯ ಮಳೆ ಸುರಿದು ಹೆಸರು ಸಂಪೂರ್ಣವಾಗಿ ನಾಶವಾಯಿತು. ಇನ್ನ ಗೆಜ್ಜೆಶೇಂಗಾ ಕಟಾವು ವೇಳೆ ಮಳೆ ಸುರಿದು, ಬೆಳೆ ಹೊಲದಲ್ಲಿಯೇ ಮೊಳಕೆಯೊಡೆದು ರೈತರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡಿತು. ಸದ್ಯ ಮೆಕ್ಕೆಜೋಳ ಕಟಾವಿಗೆ ಬಂದಿದ್ದು, ಮಳೆ ಬೆಂಬಿಡದೆ ರೈತರನ್ನು ಕಾಡುತ್ತಿದೆ. ಕೆಲ ವಾರಗಳ ಕಾಲ ಬಿಡುವು ನೀಡಿದ್ದ ಮಳೆ ದೀಪಾವಳಿ ಹಬ್ಬದಿಂದ ಮತ್ತೆ ನಿತ್ಯ ಸುರಿಯುತ್ತಿದ್ದು, ತೇವಾಂಶ ಹೆಚ್ಚಾಗಿ ಯಾವೊಂದು ಬೆಳೆಯೂ ಉಳಿಯುವುದಿಲ್ಲ ಎನ್ನುತ್ತಾರೆ ರೈತರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ