- ಹೊನ್ನಾಳಿ ತಾಲೂಕು ಸೇವಾದಳ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಅಧಿಕಾರಿ ಮಂಜುಳಾ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭವಿಷ್ಯದ ಯುವಶಕ್ತಿ ಆಗಲಿರುವ ಶಾಲಾ ಮಕ್ಕಳು ಸೇವಾದಳದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಶಿಕ್ಷಕರು ಪ್ರೇರಣೆ, ಸಲಹೆ ನೀಡಬೇಕು ಎಂದು ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಂಜುಳಾ ಹೇಳಿದರು.ಪಟ್ಟಣದ ಗುರುಭವನದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಭಾರತ ಸೇವಾದಳ ತಾಲೂಕು ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಹೊನ್ನಾಳಿ ತಾಲೂಕು ಸೇವಾದಳ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಪರೀಕ್ಷೆಗಳನ್ನು ಎದುರಿಸಲು ಪಠ್ಯ ಶಿಕ್ಷಣವು ಸಹಕಾರಿಯಾದರೆ, ಭವಿಷ್ಯದ ಜೀವನದ ಪರೀಕ್ಷೆಗಳನ್ನು ಎದುರಿಸಲು ಪಠ್ಯೇತರ ಚಟುವಟಿಕೆಗಳು ಅನುಕೂಲವಾಗುತ್ತವೆ. ಶಾಲಾ ಹಂತಗಳಲ್ಲಿ ಸೇವಾದಳದ ಮೂಲಕ ಮಕ್ಕಳಲ್ಲಿ ಸೇವೆ, ಸಹಕಾರ, ಐಕ್ಯತೆ ಹಾಗೂ ನಾಯಕತ್ವ, ಗುಣಗಳನ್ನು ಮಕ್ಕಳಲ್ಲಿ ಬೆಳೆಸಬಹುದು. ಈ ನಿಟ್ಟಿಲ್ಲಿ ಸೇವಾದಳದ ಶಿಕ್ಷಕರು ಸೇರಿದಂತೆ ಶಾಲಾ ಶಿಕ್ಷಕರು ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ಬಾಲ್ಯದಿಂದಲೇ ತಯಾರು ಮಾಡಬೇಕಾಗಿದೆ. ಇದಕ್ಕಾಗಿ ಸೇವಾದಳ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಸಂಪನ್ಮೂಲ ಸೇವಾದಳ ಶಿಕ್ಷಕ ಕೆ.ಟಿ. ಜಯಪ್ಪ ಮಾತನಾಡಿ, ಭಾರತ ಸೇವಾದಳದ ಸಂಘಟನೆಗೆ ಶಿಕ್ಷಕರು ದೈಹಿಕ ಮತ್ತು ಮಾನಸಿಕವಾಗಿ ಸದಾ ಜಾಗೃತರಾಗಿರಬೇಕು. ಶಾಲಾ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನ ಧಾರೆ ಎರೆಯಬೇಕು. ಈ ಪುನಶ್ಚೇತನ ಶಿಬಿರದಲ್ಲಿ ರಾಷ್ಟಧ್ವಜ, ರಾಷ್ಟ್ರಗೀತೆ ಹಾಗೂ ಬ್ಯಾಂಡ್ ವಾದ್ಯ ನುಡಿಸುವ ತರಬೇತಿಗಳನ್ನು ಪಡೆದುಕೊಂಡು, ಮತ್ತೊಬ್ಬರಿಗೆ ಹೇಳಿಕೊಡುವ ಪ್ರಾಮಾಣಿಕ ಪ್ರಯತ್ನ ಸೇವಾದಳದ ಶಿಕ್ಷಕರದಾಗಿರಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಅಸ್ಲಾಂ ಸಾಬ್ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯರಾದ ಸಂಗಮೇಶ್, ಪಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಂಜಪ್ಪ ಗಂಡುಗಲಿ, ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದೀಪಕ್ ಕುಮಾರ್, ಸೇವಾದಳ ಜಿಲ್ಲಾ ಸಂಘಟಕ ಫಕ್ಕೀರಪ್ಪಗೌಡ ಹಳೇಮನಿ, ಮುಂತಾದರು ಇದ್ದರು.- - -
ಬಾಕ್ಸ್ * ಸೇವಾದಳ ಸಮಿತಿಗೆ ಸಹಕಾರ: ರುದ್ರಯ್ಯ ಸೇವಾದಳ ಜಿಲ್ಲಾ ಕೋಶಾಧ್ಯಕ್ಷ ಎಂ.ರುದ್ರಯ್ಯ ಪ್ರಾಸ್ತವಿಕವಾಗಿ ಮಾತನಾಡಿ, ಭಾರತ ಸೇವಾದಳ ಸಂಘಟನೆಗೆ ಹೊನ್ನಾಳಿ ತಾಲೂಕು ಸದಾ ಸಕ್ರಿಯ ಆಗಿರುವ ಶಿಕ್ಷಕರ ತಂಡವನ್ನು ಹೊಂದಿದೆ. ಈ ವರ್ಷ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಬ್ಯಾಂಡ್ ವಾದ್ಯದ ತರಬೇತಿಗಳನ್ನು ಮತ್ತು ವಿಶೇಷವಾಗಿ ರಾಷ್ಟ್ರೀಯ, ಭಾವೈಕ್ಯತೆಗಾಗಿ ಮಕ್ಕಳ ಮೇಳಗಳನ್ನು ಸಂಘಟಿಸಲು ತಾಲೂಕು ಸೇವಾದಳ ಸಮಿತಿಗೆ ಎಲ್ಲ ಸಹಕಾರ ನೀಡುವುದಾಗಿ ಹೇಳಿದರು.- - -
-26ಎಚ್.ಎಲ್.ಐ1:ಹೊನ್ನಾಳಿ ಪಟ್ಟಣದ ಗುರು ಭವನದಲ್ಲಿ ತಾಲೂಕು ಭಾರತ ಸೇವಾದಳ ಸಮಿತಿ ವತಿಯಿಂದ ಸೇವಾದಳ ಶಿಕ್ಷಕರಿಗೆ ಅಯೋಜಿಸಲಾಗಿದ್ದ ಪುನಶ್ಚೇತನ ಶಿಬಿರವನ್ನು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಂಜುಳಾ ಉದ್ಘಾಟಿಸಿದರು. ಸೇವಾದಳ ತಾಲೂಕು ಸಮಿತಿ ಪದಾಧಿಕಾರಿಗಳು ಇದ್ದರು.