ಚನ್ನಪಟ್ಟಣ: ನಗರಸಭೆ ಎಲ್ಲಾ ಸದಸ್ಯರ ಸಹಕಾರದಲ್ಲಿ ಪಟ್ಟಣದ ೩೧ ವಾರ್ಡ್‌ಗಳಲ್ಲೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದು, ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಚನ್ನಪಟ್ಟಣ: ನಗರಸಭೆ ಎಲ್ಲಾ ಸದಸ್ಯರ ಸಹಕಾರದಲ್ಲಿ ಪಟ್ಟಣದ ೩೧ ವಾರ್ಡ್‌ಗಳಲ್ಲೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದು, ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ನಗರದ ವಿವಿಧ ವಾರ್ಡ್‌ಗಳಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮೈನಾರಿಟಿ ಇಲಾಖೆಯಿಂದ ಬಿಡುಗಡೆಯಾಗಿರುವ ೨ ಕೋಟಿ ಅನುದಾನದಲ್ಲಿ ಕೋಟೆ ಭಾಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಅಳವಡಿಸಿರುವ ಪೈಪ್‌ಗಳು ತುಂಬ ಹಳೆಯದಾಗಿದ್ದು, ಅವುಗಳನ್ನು ಬದಲಾಯಿಸಿ, ಅಭಿವೃದ್ಧಿಗೆ ಅಗತ್ಯ ಮೂಲ ಸೌಕರ್ಯಗಳಾದ, ಸಿಸಿ ಡ್ರೈನ್ ನಿರ್ಮಾಣ, ಕಾಂಕ್ರೀಟ್ ರಸ್ತೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಈಗಾಗಲೇ ಪಟ್ಟಣದಲ್ಲಿ ಗ್ಯಾಸ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಪಟ್ಟಣದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಜೊತೆಗೆ ಕುಡಿಯುವ ನೀರಿನ ಪೈಪ್‌ಗಳು ಕೂಡ ಡ್ಯಾಮೇಜಾಗಿ ನೀರು ರಸ್ತೆಯಲ್ಲಿ ಹರಿದು ಹೋಗುತ್ತಿದೆ. ಹಾಗಾಗಿ ಗ್ಯಾಸ್‌ಲೈನ್ ಕಾಮಗಾರಿ ಜೊತೆಗೆ ಕುಡಿಯುವ ನೀರಿನ ಪೈಪ್‌ಗಳನ್ನು ಬದಲಾಯಿಸಲಾಗುತ್ತಿದೆ ಎಂದರು.
ನಗರದ ೭ನೇ ವಾರ್ಡಿನ ಶೆಟ್ಟಿಹಳ್ಳಿ ಅಂಗನವಾಡಿಯ ಮುಂಭಾಗ ಮತ್ತು ಕೆಂಪೇಗೌಡ ಬಡಾವಣೆಯಲ್ಲಿ ಸಿ.ಸಿ.ರಸ್ತೆ ಮತ್ತು ಕವರಿಂಗ್ ಹಾಗೂ ಸಿ.ಸಿ.ಚರಂಡಿ ನಿರ್ಮಾಣ, ನಗರದ ೯,೧೦,೧೧ನೇ ವಾರ್ಡಿನ ಕೋಟೆ ಮಸೀದಿ ಹತ್ತಿರ ಬಾಬುರಾಯ್ ಬೀದಿಯಲ್ಲಿ ಸಿ.ಸಿ.ರಸ್ತೆ ಮತ್ತು ಹಾಗೂ ಸಿ.ಸಿ. ಚರಂಡಿ ನಿರ್ಮಾಣ, ೧೨ನೇ ವಾರ್ಡಿನ ಜೆ.ಸಿ.ರಸ್ತೆ. ಮುಸ್ಲಿಂ ಬ್ಲಾಕ್, ಕರವಲ ಮೈದಾನ ರೈಲ್ವೆ ಸ್ಟೇಷನ್ ಪಂಚಮುಖಿ ದೇವಸ್ಥಾನ ತಮಿಳು ಕಾಲೋನಿಯಲ್ಲಿ ಸಿ.ಸಿ. ಚರಂಡಿ ನಿರ್ಮಾಣ, ೧೬ನೇ ವಾರ್ಡಿನ ಆರಿಫ್ ಶಾ ಮೊಹಲ್ಲಾ ಆಟೋ ಸ್ಟ್ಯಾಂಡ್ ಹತ್ತಿರ ಸ್ಲಾಬ್ ಕವರಿಂಗ್ ಹಾಗೂ ಸಿ.ಸಿ. ಚರಂಡಿ ನಿರ್ಮಾಣ, ೨೪ನೇ ವಾರ್ಡಿನ ಮೊಹಮ್ಮದ್ ಮಿಯಾ ಮಸೀದಿ (ಹಳೆ ಡೇರಾ ಸ್ಕೂಲ್ ಹಿಂಭಾಗ) ಸ್ಲಾಬ್ ಕವರಿಂಗ್ ಹಾಗೂ ಸಿ.ಸಿ. ಚರಂಡಿ ನಿರ್ಮಾಣಕ್ಕೆ ಶಾಸಕ ಯೋಗೇಶ್ವರ್ ಗುದ್ದಲಿಪೂಜೆ ನೆರವೇರಿಸಿದರು.ನಗರಸಭೆ ಅಧ್ಯಕ್ಷ ವಾಸಿಲ್ ಆಲಿ ಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ನಗರಸಭೆ ಸದಸ್ಯರಾದ ನಾಗೇಶ್, ರೇವಣ್ಣ, ಸತೀಶ್ ಬಾಬು, ಲಿಯಾಖತ್ ಅಲಿಖಾನ್, ರಫೀಕ್, ಪೌರಾಯುಕ್ತ ಎಂ.ಮಹೇಂದ್ರ, ನಗರ ಕಾಂಗ್ರೆಸ್ ಅಧ್ಯಕ್ಷ ಸುನೀಲ್‌ಕುಮಾರ್, ಮುಖಂಡರಾದ ಆರ್.ಎಂ.ಮಲವೇಗೌಡ ಇತರರು ಹಾಜರಿದ್ದರು.
ಪೊಟೋ೧೩ಸಿಪಿಟಿ೩: ಚನ್ನಪಟ್ಟಣದ ಕೋಟೆ ಮಸೀದಿ ಹತ್ತಿರ ಸಿ.ಸಿ.ರಸ್ತೆ ಹಾಗೂ ಸಿ.ಸಿ.ಚರಂಡಿ ನಿರ್ಮಾಣಕ್ಕೆ ಶಾಸಕ ಯೋಗೇಶ್ವರ್ ಗುದ್ದಲಿಪೂಜೆ ನೆರವೇರಿಸಿದರು. ನಗರಸಭೆ ಅಧ್ಯಕ್ಷ ವಾಸಿಲ್ ಆಲಿ ಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಇತರರಿದ್ದರು.