ರೈತರ ಸೇವೆಯೇ ಸಹಕಾರ ಬ್ಯಾಂಕಿನ ಮುಖ್ಯ ಉದ್ದೇಶವಾಗಲಿ: ಅಮರೇಗೌಡ ಪಾಟೀಲ್ ಬಯ್ಯಾಪುರ

KannadaprabhaNewsNetwork |  
Published : Nov 06, 2026, 02:30 AM IST
ಹನುಮಸಾಗರದ ಎಪಿಎಂಸಿ ಮೈದಾನದಲ್ಲಿ ಆರ್‌ಕೆಡಿಸಿಸಿ ಬ್ಯಾಂಕಿನ ನೂತನ ಶಾಖಾ ಕಟ್ಟಡ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಹನುಮಸಾಗರ ಪಟ್ಟಣದ ಎಪಿಎಂಸಿ ಮೈದಾನದಲ್ಲಿ ₹99.95 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಆರ್‌ಕೆಡಿಸಿಸಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಶಾಖಾ ಕಟ್ಟಡವನ್ನು ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಉದ್ಘಾಟಿಸಿದರು.

ಹನುಮಸಾಗರ: ಬ್ಯಾಂಕಿನ ಸಿಬ್ಬಂದಿ ಕೇವಲ ಸಂಬಳಕ್ಕಾಗಿ ಕೆಲಸ ಮಾಡದೆ, ರೈತರ ಸೇವೆ ಹಾಗೂ ಅವರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಪಟ್ಟಣದ ಎಪಿಎಂಸಿ ಮೈದಾನದಲ್ಲಿ ₹99.95 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಆರ್‌ಕೆಡಿಸಿಸಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಶಾಖಾ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಬ್ಯಾಂಕಿನ ಮುಖ್ಯ ಉದ್ದೇಶ ರೈತರ ಆರ್ಥಿಕ ಅಭಿವೃದ್ಧಿ ಮತ್ತು ಹಿತಾಸಕ್ತಿ ರಕ್ಷಿಸುವುದಾಗಿರಬೇಕು. ಇತರ ವಾಣಿಜ್ಯ ಬ್ಯಾಂಕುಗಳಂತೆ ಲಾಭ ಗಳಿಸುವುದೇ ಗುರಿಯಾಗಬಾರದು. ಸರ್ಕಾರ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ಸೌಲಭ್ಯ ಕಲ್ಪಿಸುತ್ತಿದ್ದು, ಸಹಕಾರ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಸಮರ್ಪಕವಾಗಿ ಸಾಲ ವಿತರಿಸಬೇಕು ಎಂದು ಹೇಳಿದರು.

ರೈತರಿಗೆ ನೀಡುವ ಸಾಲದ ಪ್ರಮಾಣ ಹೆಚ್ಚಿಸಬೇಕು. ಪ್ರಸ್ತುತ ಒಂದು ಎಕರೆಗೆ ನೀಡುತ್ತಿರುವ ಸಾಲದ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸುವ ಅಗತ್ಯವಿದೆ. ಗೊಬ್ಬರ, ಕೀಟನಾಶಕ ಹಾಗೂ ಕೃಷಿ ಕಾರ್ಮಿಕರ ಕೂಲಿ ದರ ಹೆಚ್ಚಳದಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಲದ ಮಿತಿಯನ್ನು ಹೆಚ್ಚಿಸುವಂತೆ ಬ್ಯಾಂಕಿನ ಆಡಳಿತ ಮಂಡಳಿ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು.

ಆರ್‌ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಉಪಾಧ್ಯಕ್ಷ ಶಿವಶಂಕರ ಪಾಟೀಲ್, ನಿರ್ದೇಶಕರಾದ ಶೇಖರಗೌಡ ಮಾಲಿಪಾಟೀಲ್, ಎಂ.ಆರ್. ಮನೋಹರ, ಬಸವರಾಜ ರಾಜೂರ, ವಿಜಯಕುಮಾರ, ಶರಣಪ್ಪ ಹ್ಯಾಟಿ, ಮಲ್ಲನಗೌಡ ನಕ್ಕುಂದಿ, ರಾಜೇಂದ್ರಕುಮಾರ ಶೆಟ್ಟರ, ಶೇಖರಗೌಡ ಉಳ್ಳಾಗಡ್ಡಿ, ತಿಪ್ಪಾರಡ್ಡಿ, ಶರಣಗೌಡ ಕೊಂತನೂರ, ರಮೇಶ ಬಗಲಿ, ಮಲ್ಲಯ್ಯ, ಶಾಮಣ್ಣ ಕುಲಕರ್ಣಿ, ವಿಶ್ವನಾಥ ಕನ್ನೂರ, ಎಂಜಿನಿಯರ್ ಇರ್ಫಾನ್, ಶಾಖಾ ವ್ಯವಸ್ಥಾಪಕ ಶಿವಕುಮಾರ ಮೇಳಿ, ವೃತ್ತ ನಿರೀಕ್ಷಕ ಅಲ್ಲಮಪ್ರಭು ಡಾಣಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌: ನ್ಯಾಯಾಲಯಕ್ಕೆ ಹಲವು ದಾಖಲೆ ಸಲ್ಲಿಸಿದ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ
ಮದುವೆ ಆಗುವಂತೆ ಉದ್ಯಮಿಗೆ ಹನಿಟ್ರ್ಯಾಪ್: ₹2 ಕೋಟಿ ಬೇಡಿಕೆ