ಚನ್ನಪಟ್ಟಣ: ಧೈರ್ಯ ತಾಕತ್ತು ಇದ್ದರೆ ಎಸ್.ಟಿ.ಸೋಮಶೇಖರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದರು.
ಸೋಮಶೇಖರ್ ಪಾರ್ಟಿ ಯಾವುದು? ಅವರಿಗೆ ಅವರು, ಯಾವ ಪಾರ್ಟಿ ಅಂತಾನೂ ಹೇಳೋಕೆ ಆಗದ ಪರಿಸ್ಥಿತಿಯಲ್ಲಿದ್ದಾರೆ. ಶಾಸಕರಾಗಿ ಆಯ್ಕೆ ಆಗಿದ್ದು ಬಿಜೆಪಿ, ಆದರೆ ಇರೋದು ಮಾತ್ರ ಕಾಂಗ್ರೆಸ್‌ನಲ್ಲಿ ಅವರಿಗೆ ಧೈರ್ಯ, ಶಕ್ತಿ ಇದ್ದರೆ ರಾಜೀನಾಮೆ ಕೊಟ್ಟು, ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಬೇಕಿತ್ತು ಅವಾಗ ಅವರ ಶಕ್ತಿ ಏನು ಎಂದು ನೋಡಬಹುದಿತ್ತು ಎಂದರು.
ಕಮಿಷನ್‌ಗೆ ಕಾಂಗ್ರೆಸ್‌ಗೆ: ಅವರಲ್ಲಿ ಈಗ ಯಾವ ಶಕ್ತಿಯೂ ಅವರಲ್ಲಿ ಉಳಿದುಕೊಂಡಿಲ್ಲ. ಕಮಿಷನ್‌ಗಾಗಿ, ದುಡ್ಡು ಹೊಡೆಯೋಕೆ ಕಾಂಗ್ರೆಸ್‌ಗೆ ಹೋಗಿದ್ದಾರೆ. ಸರ್ಕಾರದ ಶೆಲ್ಟರ್‌ಗಾಗಿ ಕಾಂಗ್ರೆಸ್ ಜೊತೆ ಇದ್ದಾರೆ ಎಂದರು.ಅವರ ಹಾಗೂ ಬಿಜೆಪಿಯ ಸಂಬಂಧ ಉಳಿದುಕೊಂಡಿಲ್ಲ. ಅವರು ತ್ರಿಶಂಕುವಾಗಿಯೇ ಇರಬೇಕೆಂದು ನಾವು ಬಯಸುತ್ತೇವೆ. ಅವರು ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಎಲ್ಲಿ ಇರಬೇಕೆಂದು ತೀರ್ಮಾನ ಮಾಡಲಿ. ಅವರನ್ನು ನಾವು ಪಕ್ಷದಿಂದ ತೆಗೆದು ಬಿಟ್ಟರೆ ಅವರು ಆರಾಮವಾಗಿ ಇದ್ದು ಬಿಡ್ತಾರೆ. ಮೋಸ ಮಾಡಿರುವ ಸೋಮಶೇಖರ್‌ರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಯಶವಂತಪುರದಲ್ಲಿ ಪಕ್ಷದಲ್ಲೇ ಕಾರ್ಯಕರ್ತನನ್ನು ಬೆಳೆಸಿ ಸ್ಪರ್ಧಿಸಿ, ಅವರನ್ನು ಮನೆಗೆ ಕಳುಹಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಕಮಿಷನ್ ಆಸೆಗೆ ಸಿಪಿವೈ ಕಾಂಗ್ರೆಸ್‌ಗೆ: ಶೋಭಾ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಯೋಗೇಶ್ವರ್ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಿದ್ಧತೆ ನಡೆಸಲಾಗಿತ್ತು. ಆದರೆ, ಅವರು ಕಾಮಗಾರಿಗಳಿಂದ ಬರುವ ಕಮಿಷನ್ ಆಸೆಗಾಗಿ ಕಾಂಗ್ರೆಸ್ ಸೇರಿದ್ದಾರೆ. ಹಿಂದೆ ಬರಿಗೈಯಲ್ಲಿ ಬಂದಿದ್ದ ಅವರನ್ನು ಬಿಜೆಪಿ ಶಾಸಕರಾಗಿ, ಸಚಿವರಾಗಿ ಮಾಡಿತ್ತು. ಕಳೆದ ಬಾರಿ ಸೋತರು ಸಹ ವಿಧಾನಪರಿಷತ್‌ಗೆ ಆಯ್ಕೆ ಮಾಡಲಾಗಿತ್ತು. ಆದರೆ, ಅವರು ಬಿಜೆಪಿಗೆ ಮೋಸ ಮಾಡಿ ಕಾಂಗ್ರೆಸ್ ಸೇರಿದ್ದಾರೆ ಎಂದರು.
ಗ್ಯಾರಂಟಿ ಆಸೆ ತೋರಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲದಂತಾಗಿದೆ. ಕೇಂದ್ರ ಸರ್ಕಾರ ಅಕ್ಕಿಯನ್ನು ಕೊಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ನಾವು ಕೊಟ್ಟಿದ್ದು ಅಂತಾ ಲೇಬಲ್ ಹಾಕಿಕೊಳ್ಳತ್ತದೆ. ಜನೌಷಧೀಯ ಕೇಂದ್ರ ಬಾಗಿಲು ಹಾಕ್ತೀವಿ ಅಂತಿದ್ದಾರೆ ಯಾವುದರಲ್ಲಿ ಕಮೀಷನ್ ಬರಲ್ಲ ಅದನ್ನು ಕ್ಲೋಸ್ ಮಾಡುತ್ತದೆ ಎಂದರು.
ಪೊಟೋ೮ಸಿಪಿಟಿ೧೦: