ವಿದ್ಯಾರ್ಥಿಗಳು ಕೌಶಲ್ಯ ಅಳವಡಿಸಿಕೊಳ್ಳಲಿ: ಹನುಮಂತ ಶಾನಭಾಗ

KannadaprabhaNewsNetwork |  
Published : Sep 01, 2024, 01:49 AM IST
ಫೋಟೋ : ೩೦ಕೆಎಂಟಿ_ಎಯುಜಿ_ಕೆಪಿ೧ : ಸಿಎ ಫೌಂಡೇಶನ್ ಕಾರ್ಯಾಗಾರ ಉದ್ದೇಶಿಸಿ ಹನುಮಂತ ಶಾನಭಾಗ ಮಾತನಾಡಿದರು. ಡಾ. ಜಿ.ಎಸ್.ಭಟ್, ಡಾ. ವಿ.ಎಂ.ಭಂಡಾರಿ, ಡಾ. ರೇವತಿ ನಾಯಕ, ರವಿಕಾಂತ ಕಾಮತ, ಡಾ. ವಿ.ಎಂ.ಪೈ, ಸುರೇಶ್ ಭಟ್,  ಪ್ರೊ.ಎನ್.ಜಿ.ಹೆಗಡೆ ಇದ್ದರು. | Kannada Prabha

ಸಾರಾಂಶ

ಕುಮಟಾದ ಡಾ. ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಿಎ ಫೌಂಡೇಶನ್ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ಪಾಲಕರ ಜಾಗೃತಿ ಸಭೆ ನಡೆಯಿತು.

ಕುಮಟಾ: ಆಧುನಿಕ ಯುಗದಲ್ಲಿ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರವೆರಡರಲ್ಲೂ ಪ್ರತಿ ಹಂತದಲ್ಲೂ ಸ್ಪರ್ಧೆ ಎದುರಿಸಬೇಕಾಗಿದ್ದು, ನಿರಂತರ ಶ್ರಮದ ಅನಿವಾರ್ಯತೆಯಿದೆ. ವಿದ್ಯಾರ್ಥಿಗಳು ಹೊಸ ಹೊಸ ಕೌಶಲ್ಯ, ಜ್ಞಾನವನ್ನು ವಿವಿಧ ಮೂಲಗಳಿಂದ ಗಳಿಸಿಕೊಂಡು ಉನ್ನತ ಸ್ಥಾನವನ್ನು ಪಡೆಯಲು ಸಜ್ಜಾಗಬೇಕು ಎಂದು ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷ ಹನುಮಂತ ಶಾನಭಾಗ ತಿಳಿಸಿದರು.ಇಲ್ಲಿನ ಡಾ. ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಿಎ ಫೌಂಡೇಶನ್ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ಪಾಲಕರ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.ಹಿಂದೆ ಸಿಎ, ಸಿಎಸ್‌ನಂತಹ ಕೋರ್ಸ್‌ಗಳಿಗೆ ಹೊರ ಜಿಲ್ಲೆಗಳಿಗೆ ಹೋಗಿ ತರಬೇತಿ ಪಡೆಯಬೇಕಿತ್ತು. ಇದರಿಂದ ನಮ್ಮ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳು ಬದುಕಿನಲ್ಲಿ ಹೆಚ್ಚಿನ ಅವಕಾಶಗಳಿಂದ ವಂಚಿತರಾಗದಂತೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲೇ ಅನುಭವಿ ಹಿರಿಯ ಪ್ರಾಧ್ಯಾಪಕರ ಸಹಕಾರದೊಂದಿಗೆ ಸಿಎ ಫೌಂಡೇಶನ್ ಪ್ರಾರಂಭಿಸುತ್ತಿದ್ದೇವೆ ಎಂದರು. ನಿವೃತ್ತ ಪ್ರಾಚಾರ್ಯ ಡಾ. ಜಿ.ಎಸ್. ಭಟ್, ಹೊನ್ನಾವರ ಎಸ್‌ಡಿಎಂ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ. ವಿ.ಎಂ. ಭಂಡಾರಿ ಅವರು ಸಿಎ ಫೌಂಡೇಶನ್ ಕುರಿತು ಸಮಗ್ರ ಮಾಹಿತಿ ನೀಡಿದರು. ಪ್ರಾಚಾರ್ಯೆ ಡಾ. ರೇವತಿ ನಾಯಕ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯರಾದ ಚಾರ್ಟೆಡ್ ಅಕೌಂಟೆಂಟ್ ರವಿಕಾಂತ ಕಾಮತ, ನಿವೃತ್ತ ಪ್ರಾಚಾರ್ಯ ಡಾ. ವಿ.ಎಂ. ಪೈ, ಸುರೇಶ್ ಭಟ್, ಪಿಯು ವಿಭಾಗದ ಪ್ರಾಚಾರ್ಯ ಪ್ರೊ. ಎನ್.ಜಿ. ಹೆಗಡೆ ಉಪಸ್ಥಿತರಿದ್ದರು. ಪಾಲಕರ ಜತೆ ಸಂವಾದ ನಡೆಸಲಾಯಿತು. ಯುನಿಯನ್ ಕಾರ್ಯಧ್ಯಕ್ಷ ಡಾ. ಅರವಿಂದ್ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಪರಿಚಯಿಸಿದರು. ಪ್ರೊ. ಸಂತೋಷ್ ಶಾನಭಾಗ ವಂದಿಸಿದರು. ಪ್ರೊ. ನಿರ್ಮಲಾ ಪ್ರಭು ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!